ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ: ಜುಲೈ 1ರಿಂದ ವಾಹನ ಸಂಚಾರ ದುಬಾರಿ

Posted: ಜೂನ್ 22, 2014 in Uncategorized

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯನ್ನು ಬಳಸುವ ವಾಹನ ಸವಾರರು ಇನ್ನು ಮುಂದೆ ಹೆಚ್ಚಿನ ರಸ್ತೆ ಶುಲ್ಕ ಪಾವತಿಸಬೇಕಿದೆ.

ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಡುವಿನ ಎತ್ತರಿಸಿದ ಮಾರ್ಗ (9.5 ಕಿ.ಮೀ), ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಜಂಕ್ಷನ್‌­ನಿಂದ ಕರ್ನಾಟಕ–ತಮಿಳು­ನಾಡು ಗಡಿಯ ಮಾರ್ಗದ (ಅತ್ತಿಬೆಲೆ ಟೋಲ್‌) ರಸ್ತೆ ಶುಲ್ಕವನ್ನು ಬೆಂಗಳೂರು ಎಲಿವೇಟೆಡ್‌ ಟೋಲ್‌ವೇ ಲಿಮಿಟೆಡ್‌ (ಬಿಇಟಿಎಲ್‌) ಪರಿಷ್ಕರಿಸಿದೆ. ನೂತನ ದರ ಜುಲೈ 1ರಿಂದ ಜಾರಿಗೆ ಬರಲಿದೆ.

‘ಮಾರ್ಚ್‌ 31ಕ್ಕೆ ಅನ್ವಯವಾಗು­ವಂತೆ ಸಗಟು ದರ ಸೂಚ್ಯಂಕದ ಏರಿಕೆ ಅಥವಾ ಇಳಿಕೆಯ ಆಧಾರದಲ್ಲಿ ರಸ್ತೆ ಶುಲ್ಕವನ್ನು ಪರಿಷ್ಕರಿಸಲಾಗುತ್ತಿದೆ. ಪ್ರತಿ­ವರ್ಷ ಈ ದರವನ್ನು ಪರಿಷ್ಕರಿಸ­ಲಾಗು­ತ್ತಿದೆ. ದ್ವಿಚಕ್ರವಾಹನದ ರಸ್ತೆ ಶುಲ್ಕ ದರವನ್ನು ರೂ. 15ರಿಂದ ರೂ. 20ಕ್ಕೆ ಏರಿಸ­ಲಾಗಿದೆ. ಅದೇ ರೀತಿ ಉಳಿದ ವಾಹನಗಳ ಶುಲ್ಕವನ್ನೂ
ಹೆಚ್ಚಿಸ­ಲಾ­ಗಿದೆ. ವಾಹನ ಸವಾರರಿಗೆ ಹೊರೆ ಆಗ­ದಂತೆ ಶುಲ್ಕ ಹೆಚ್ಚಳ ಮಾಡಲಾಗಿದೆ’ ಎಂದು ಸಂಸ್ಥೆ ಹಿರಿಯ ಅಧಿಕಾರಿ­ಯೊಬ್ಬರು ತಿಳಿಸಿದರು.

‘ಸಂಸ್ಥೆ ಈ ವರೆಗೂ ಲಾಭ ಗಳಿಸುವ ಹಂತಕ್ಕೆ ಬಂದಿಲ್ಲ. ರಸ್ತೆ ಶುಲ್ಕದಿಂದ ಸಂಸ್ಥೆ ಪ್ರತಿದಿನ ರೂ.25 ಲಕ್ಷ ಸಂಗ್ರಹಿ­ಸುತ್ತಿದೆ. ಪರಿಷ್ಕೃತ ದರದಿಂದ ಪ್ರತಿದಿನ ರೂ.80 ಸಾವಿರ ಶುಲ್ಕ ಸಂಗ್ರಹ ಹೆಚ್ಚಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s