ದಂಪತಿ ವಿರುದ್ಧ ಸುಳ್ಳು ಅತ್ಯಾಚಾರ ಕೇಸು: ಪ್ರತಿಭಟನೆ

Posted: ಜೂನ್ 22, 2014 in Uncategorized

ತುಮಕೂರು: ಗುಬ್ಬಿ ತಾಲೂಕು ಸಿ.ಎಸ್.ಪುರ ಪೊಲೀಸ್ ಠಾಣೆಯ ಪಿಎಸ್ಸೈ ಉಜ್ಜಿನಪ್ಪಮತ್ತು ಸಿಬ್ಬಂದಿ ರಾಜಕಾರಣಿಯೊಬ್ಬರ ಕುಮ್ಮಕ್ಕಿಗೆ ಒಳಗಾಗಿ ಅಮಾಯಕ ದಂಪತಿಗಳ ಮೇಲೆ ಅತ್ಯಾಚಾರದ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ್ದು, ಇವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಅಂಕಳಕೊಪ್ಪಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೃಷ್ಣಪ್ಪ, ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್ ಉಜ್ಜಿನಪ್ಪ, ಪಿ.ಸಿ.ಗಳಾದ ಉಮೇಶ್, ಶ್ರೀಧರ್, ಬೋರಯ್ಯ ಮತ್ತು ಮೋಹನ್ ಅವರುಗಳು ಪಿಎಸ್ಸೈ ಜೊತೆ ಸೇರಿ ಅಂಕಳಕೊಪ್ಪಗ್ರಾಮದ ಹಣ್ಣಿನ ವ್ಯಾಪಾರಿ ಮೋದಿನಾಲಿ ಮತ್ತು ಅವರ ಪತ್ನಿ ಅಮೀದಾ ಅವರ ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿದ್ದಾರೆ. ಆದರೆ, ಅವರ ಮೇಲಿರುವ ಆರೋಪ ಸುಳ್ಳಾಗಿದ್ದು, ಕೂಡಲೇ ಸದರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಂಕಳಕೊಪ್ಪದ ಹಣ್ಣಿನ ವ್ಯಾಪಾರಿ ಮೋದಿನಾಲಿ (35) ಮತ್ತು ಆವರ ಪತ್ನಿ ಅಮೀದಾ ವಿರುದ್ಧ ದಾಖಲಾಗಿರುವುದು ಸುಳ್ಳು ಕೇಸು. ಏಕೆಂದರೆ ಕೇಸು ದಾಖಲಾಗಿರುವ ಜೂ.6ನೆ ತಾರೀಖಿನಂದು. ಅಂದು ಮೋದಿನಾಲಿ ಊರಿನಲ್ಲಿಯೇ ಇರಲಿಲ್ಲ. ಆವರು ಮಾವಿನ ಹಣ್ಣಿನ ಮಾರಾಟಕ್ಕಾಗಿ ಮಹಾರಾಷ್ಟ್ರದ ನಾಸಿಕ್‌ಗೆ ತೆರಳಿದ್ದು, ಹಣ್ಣಿನ ವ್ಯಾಪಾರ ಮುಗಿಸಿಕೊಂಡು 19ರಂದು ಬಂದಾಗ ಗಂಡ ಹೆಂಡತಿಯನ್ನು ಬಂಧಿಸಲಾಗಿದೆ. ಯಾವುದೇ ಗಂಡ, ಹೆಂಡತಿಯ ಮುಂದೆ ಮತ್ತೊಂದು ಹೆಣ್ಣನ್ನು ಅತ್ಯಾಚಾರ ಮಾಡಲು ಸಾಧ್ಯವೇ ಎಂದು ಎಂ.ಟಿ.ಕೃಷ್ಣಪ್ಪ ಪ್ರಶ್ನಿಸಿದರು.

ಘಟನೆಗೆ ಜಮೀನು ವಿವಾದ ಕಾರಣ: ಈ ಘಟನೆಗೆ ಜಮೀನು ವಿವಾದ ಕಾರಣ ಎಂದು ಅಂಕಳಕೊಪ್ಪಗ್ರಾಮದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನರು ಹೇಳುತ್ತಿದ್ದು, ಹಾಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮಸಾಲೆ ಜಯರಾಂ ಎಂಬ ವ್ಯಕ್ತಿ ಗ್ರಾಮದ ಜನರಿಗೆ ಅವರ ಕಷ್ಟ ಕಾಲದಲ್ಲಿ ಒಂದಿಷ್ಟು ಹಣ ನೀಡಿ ಅವರ ಜಮೀನುಗಳನ್ನು ಬರೆಯಿಸಿಕೊಂಡಿದ್ದ ಎನ್ನಲಾಗಿದೆ.

ಈಗ ಕ್ರಯಪತ್ರ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದಾನೆ. ಕ್ರಯ ಪತ್ರ ಮಾಡಿಕೊಡಲು ಒಪ್ಪದ ಕೆಲವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಪೊಲೀಸರ ಮೂಲಕ ತೊಂದರೆ ಕೊಡುತ್ತಿದ್ದು, ಈತನಿಗೆ ಬೆಂಬಲವಾಗಿ ಸಿ.ಎಸ್.ಪುರ ಪೊಲೀಸರು ನಿಂತಿದ್ದಾರೆ.

ಅತ್ಯಾಚಾರದ ಕೇಸು ದಾಖಲಾಗಿರುವ ಮೋದಿನಾಲಿ ಸಹ ಮಸಾಲೆ ಜಯರಾಂ ಅವರಿಗೆ ಭೂಮಿ ನೀಡಿದ್ದು, ಖಾತೆ ಮಾಡಿಕೊಟ್ಟಿರಲಿಲ್ಲ. ಇದರಿಂದ ಕುಪಿತನಾಗಿ ವಾಮ ಮಾರ್ಗದಲ್ಲಿ ಹೆದರಿಸಿ ಖಾತೆ ಮಾಡಿಸಿಕೊಳ್ಳುವ ಉದ್ದೇಶದಿಂದ ತನ್ನ ಸೋದರಮಾವನ ಹೆಂಡತಿ 55 ವರ್ಷದ ಜಯಮ್ಮ ಎಂಬ ಮಹಿಳೆಯಿಂದ ದೂರು ಕೊಡಿಸಿ ಅಮಾಯಕರು ಜೈಲು ಸೇರುವಂತೆ ಮಾಡಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣಿಯ ಬೆಂಬಲಕ್ಕೆ ನಿಂತಿರುವ ಪೊಲೀಸರನ್ನು ಸೇವೆಯಿಂದ ಅಮಾನತು ಪಡಿಸಿ, ಅವರ ವಿರುದ್ಧ ತನಿಖೆ ನಡೆಸಬೇಕು. ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಮೋದಿನಾಲಿ ಮತ್ತು ಅಮೀದಾ ಅವರನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s