ನಕಲಿ ಎನ್‌ಕೌಂಟರ್‌ ಪ್ರಕರಣ: ವಿಚಾರಣೆಗೆ ಬಿಜೆಪಿ ನಾಯಕ ಅಮಿತ್ ಷಾ ಗೈರು- ಕೋರ್ಟ್‌ ತರಾಟೆ

Posted: ಜೂನ್ 22, 2014 in Uncategorized

ಮುಂಬೈ(ಪಿಟಿಐ): ತುಳಸಿರಾಂ ಪ್ರಜಾ­ಪತಿ ನಕಲಿ ಎನ್‌ಕೌಂಟರ್‌ ಪ್ರಕರಣದ ವಿಚಾರಣೆಗೆ ಪದೇ ಪದೇ ಗೈರು ಹಾಜರಾಗುತ್ತಿರುವ ಬಿಜೆಪಿ ಮುಖಂಡ ಅಮಿತ್‌ ಷಾ ಅವರನ್ನು ಇಲ್ಲಿನ ಸಿಬಿಐ ನ್ಯಾಯಾ­ಲಯ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಷಾ ಪರ ವಕೀಲರು ತಮ್ಮ ಕಕ್ಷಿದಾರರು ದೆಹಲಿಯಲ್ಲಿರುವ ಕಾರಣ ಖುದ್ದು ಹಾಜರಾತಿಗೆ ವಿನಾಯ್ತಿ ನೀಡಬೇಕು ಎಂದು ಕೋರಿದರು. ‘ನೀವು (ಷಾ ಪರ ವಕೀಲರು) ಪದೇ ಪದೇ ವಿನಾಯ್ತಿ ಕೋರುತ್ತೀರಿ. ಆದರೆ, ನಿರ್ದಿಷ್ಟ ಕಾರಣ ನೀಡುವುದಿಲ್ಲ ಏಕೆ’ ಎಂದು ನ್ಯಾಯಾಧೀಶ ಜೆ.ಟಿ. ಉತ್ಪಾತ್‌ ಕಟುವಾಗಿ ಪ್ರಶ್ನಿಸಿದರು.

ಖುದ್ದು ಹಾಜರಾತಿಗೆ ವಿನಾಯ್ತಿ ಕೋರಿದ ಷಾ ಅವರ ಅರ್ಜಿಯನ್ನು ಸಿಬಿಐ ಪರ ವಕೀಲರು ವಿರೋಧಿಸಿದರು. ಆದರೂ, ಷಾ ಅವರ ಅರ್ಜಿಯನ್ನು ಮನ್ನಿಸಿದ ನ್ಯಾಯಾ­ಧೀಶರು,
ವಿಚಾರಣೆ­ಯನ್ನು ಜುಲೈ 4ಕ್ಕೆ ಮುಂದೂಡಿದರು. ಜೂನ್‌ 6ರಂದು ನಡೆದ ವಿಚಾ­ರಣೆಗೂ ಷಾ ಹಾಜರಾಗಿರಲಿಲ್ಲ. ಆದ ಕಾರಣ ವಿಚಾರಣೆಯನ್ನು ಶುಕ್ರ­ವಾರಕ್ಕೆ (ಜೂನ್‌ 20) ಮುಂದೂಡ­ಲಾಗಿತ್ತು.

ಗುಜರಾತ್‌ನಿಂದ ಮುಂಬೈ ಕೋರ್ಟ್‌ಗೆ ವರ್ಗಾವಣೆ­ಗೊಂಡಿರುವ ಈ ಪ್ರಕರಣದಲ್ಲಿ ಷಾ ಮತ್ತು ಇತರ 18 ಮಂದಿ ವಿರುದ್ಧ ಸಿಬಿಐ 2013ರ ಸೆಪ್ಟೆಂಬರ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿದೆ. ಇವರಲ್ಲಿ ಹಲವು ಪೊಲೀಸ್‌ ಅಧಿಕಾರಿಗಳು ಇದ್ದಾರೆ. ಮುಂಬೈ ಕೋರ್ಟ್‌ ಮೇ 9ರಂದು ಷಾ ಮತ್ತು ಇತರರಿಗೆ ವಿಚಾರಣೆಗೆ ಹಾಜರಾಗು­ವಂತೆ ಸಮನ್ಸ್‌ ಜಾರಿ ಮಾಡಿತ್ತು.

ಶಂಕಿತ ಭಯೋತ್ಪಾದಕ ಸೊಹ್ರಾ­ಬುದ್ದೀನ್‌ ಶೇಖ್‌ ಮತ್ತು ಆತನ ಪತ್ನಿ ಕೌಸರ್‌ ಬಿ ಅವರನ್ನು ಗುಜರಾತ್‌ ಪೊಲೀಸರು 2005ರ ನವೆಂಬರ್‌ನಲ್ಲಿ ಗಾಂಧಿನಗರದ ಬಳಿ ನಕಲಿ ಎನ್‌ಕೌಂಟರ್‌ ಮೂಲಕ ಹತ್ಯೆ ಮಾಡಿ­ದರು ಎಂಬ ಆರೋಪ ಇದೆ. ಈ ಘಟನೆಯ ಪ್ರತ್ಯಕ್ಷದರ್ಶಿ ಎಂದು ಹೇಳ­ಲಾದ ತುಳಸಿರಾಂ ಪ್ರಜಾಪತಿ ಅವರನ್ನೂ 2006ರ ಡಿಸೆಂಬರ್‌ನಲ್ಲಿ ನಕಲಿ ಎನ್‌ಕೌಂಟರ್‌ ಮೂಲಕವೇ ಹತ್ಯೆ ಮಾಡ­ಲಾಗಿದೆ ಎಂದು ಆಪಾದಿಸಲಾದ ಪ್ರರಕಣ ಇದಾಗಿದೆ.

ಈ ಘಟನೆಗಳು ನಡೆದಾಗ ಅಮಿತ್‌ ಷಾ ಅವರು ಗುಜರಾತ್‌ ಗೃಹ ಖಾತೆ ರಾಜ್ಯ ಸಚಿವರಾಗಿದ್ದರು. ಈ ನಕಲಿ ಎನ್‌ಕೌಂಟರ್‌ಗಳ ಹಿಂದೆ ಅವರ ಪಾತ್ರವೂ ಇದೆ ಎಂದು ಆರೋಪಿಸಲಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s