ನಜಾಫ್: ನೂರಾರು ಭಾರತೀಯರು ಸಂಕಷ್ಟದಲ್ಲಿ

Posted: ಜೂನ್ 22, 2014 in Uncategorized

ಹೊಸದಿಲ್ಲಿ: ಭೀಕರ ಸಂಘರ್ಷದಿಂದ ತತ್ತರಿಸಿರುವ ಇರಾಕ್‌ನ ನಜಾಫ್ ಪ್ರಾಂತದಲ್ಲಿ ಸಿಲುಕಿಕೊಂಡಿರುವ ನೂರಾರು ಭಾರತೀಯರ ಬಗ್ಗೆ ಹೊಸ ಪುರಾವೆಗಳು ಲಭಿಸಿವೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ತಿಳಿಸಿದೆ.

ಮೂಲಸೌಕರ್ಯ ಹಾಗೂ ಕಟ್ಟಡ ನಿರ್ಮಾಣ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಾರ್ಮಿಕರ ಪೈಕಿ ಕೆಲವರೊಂದಿಗೆ ತಾನು ಫೋನ್‌ನಲ್ಲಿ ಮಾತನಾಡಿರುವುದಾಗಿ ಮಾನವಹಕ್ಕು ಹೋರಾಟ ಸಂಸ್ಥೆ ಹೇಳಿದೆ. ತಮ್ಮ ಪಾಸ್‌ಪೋರ್ಟ್‌ಗಳನ್ನು ಹಿಂದಿರುಗಿಸಲು ಉದ್ಯೋಗದಾತರು ನಿರಾಕರಿಸಿದ್ದು, ತಾವು ತೀರಾ ಅಪಾಯದಲ್ಲಿ ಸಿಲುಕಿಕೊಂಡಿದ್ದೇವೆ ಹಾಗೂ ತಮಗೆ ಇರಾಕ್‌ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕವನ್ನು ಅವರು ತೋಡಿಕೊಂಡಿದ್ದಾರೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ನಜಾಫ್ ಪ್ರಾಂತದಲ್ಲಿ ಸಿಕ್ಕಿಹಾಕಿಕೊಂಡಿರುವ ಕೆಲವು ಭಾರತೀಯರು ಜೂನ್ 19ರಂದು ತಮ್ಮ ಪಾಸ್‌ಪೋರ್ಟ್ ವಿವರಗಳನ್ನು ಬಗ್ದಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಎಸ್‌ಎಂಎಸ್ ಮೂಲಕ ಕಳುಹಿಸಿದ್ದು, ರಾಯಭಾರ ಕಚೇರಿಯ ಪ್ರತಿಕ್ರಿಯೆಗಾಗಿ
ಕಾಯುತ್ತಿದ್ದಾರೆ ಎಂದು ಅದು ಹೇಳಿದೆ.

‘‘ನಮ್ಮ ಎಲ್ಲರ ಪಾಸ್‌ಪೋರ್ಟ್‌ಗಳು ಉದ್ಯೋಗದಾತರ ಬಳಿ ಇವೆ. ಅವುಗಳನ್ನು
ಹಿಂದಿರುಗಿಸಲು ಅವರು ನಿರಾಕರಿಸುತ್ತಿದ್ದಾರೆ. ಸಂಘರ್ಷ ಆರಂಭಗೊಂಡಂದಿನಿಂದ ನಾವು ಹೆದರಿಕೆಯಿಂದಾಗಿ ಕಂಪೆನಿಯ ಆವರಣದಿಂದ ಹೊರಗೆ ಕಾಲಿಟ್ಟಿಲ್ಲ. ನಾವೀಗ ಮನೆಗೆ ಹೋಗಬೇಕಾಗಿದೆ, ಅಷ್ಟೆ’’ ಎಂದು ಓರ್ವ ಕಾರ್ಮಿಕ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾಗೆ ಹೇಳಿದ್ದಾರೆ ಎನ್ನಲಾಗಿದೆ.

ಕಂಪೆನಿಯ ಮೂವರು ಮ್ಯಾನೇಜರ್‌ಗಳ ಜೊತೆ ಫೋನ್‌ನಲ್ಲಿ ಮಾತನಾಡಲು ಪದೇ ಪದೇ
ಪ್ರಯತ್ನಗಳನ್ನು ನಡೆಸಲಾಯಿತಾದರೂ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ ಎಂದು ಮಾನವಹಕ್ಕುಗಳ ಸಂಸ್ಥೆ ಸ್ಪಷ್ಟಪಡಿಸಿದೆ.

ಇರಾಕ್‌ನ ಸಂಘರ್ಷ ಪೀಡಿತ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ 16 ಭಾರತೀಯರನ್ನು ತೆರವುಗೊಳಿಸಲಾಗಿದೆ ಎಂದು ಸರಕಾರ ನಿನ್ನೆ ಹೇಳಿತ್ತು. ಅದೇ ವೇಳೆ, ಮೊಸೂಲ್ ಪಟ್ಟಣದಲ್ಲಿ ಉಗ್ರರ ಬಂಧನದಲ್ಲಿದ್ದ 40 ಭಾರತೀಯ ಕಾರ್ಮಿಕರ ಪೈಕಿ ಓರ್ವ
ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದಾಗಿಯೂ ಸರಕಾರ ಹೇಳಿತ್ತು. ತಿಕ್ರಿತ್‌ನಲ್ಲಿ 46 ಭಾರತೀಯ ದಾದಿಯರು ಸಿಕ್ಕಿಹಾಕಿಕೊಂಡಿರುವ ಬಗ್ಗೆಯೂ ವರದಿಗಳಿವೆ. ತಮ್ಮ ಪಾಸ್‌ಪೋರ್ಟ್‌ಗಳನ್ನು ಉದ್ಯೋಗದಾತರ ಬಳಿ ಬಿಟ್ಟಿರುವ ಕಾರ್ಮಿಕರ ವಾಪಸಾತಿಗೆ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆ್ಯಮ್ನೆಸ್ಟಿ ಭಾರತ ಸರಕಾರವನ್ನು ಒತ್ತಾಯಿಸಿದೆ. ಅದೇ ವೇಳೆ, ತಾವು ಒತ್ತೆಯಾಳಾಗಿ ಇಟ್ಟುಕೊಂಡಿರುವ ಎಲ್ಲ ನಿಶ್ಶಸ್ತ್ರ ನಾಗರಿಕರನ್ನು ‘‘ಕೂಡಲೇ ಹಾಗೂ ನಿಶ್ಶರ್ತವಾಗಿ’’ ಬಿಡುಗಡೆಗೊಳಿಸುವಂತೆ ಅದು ಉಗ್ರಗಾಮಿ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆ್ಯಂಡ್ ಸಿರಿಯ’ ಮತ್ತು ಇತರ ಸಶಸ್ತ್ರ ಗುಂಪುಗಳಿಗೆ ಮನವಿ ಮಾಡಿದೆ.

ಪಂಜಾಬ್ ನಿವಾಸಿಗಳು ದೇಶಕ್ಕೆ ವಾಪಸ್: ತನ್ಮಧ್ಯೆ ಪ್ರಕ್ಷುಬ್ಧ ಇರಾಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಪಂಜಾಬಿನ ಗುರುದಾಸ್‌ಪುರ್ ಜಿಲ್ಲೆಯ ಆರು ಮಂದಿ ಭಾರತಕ್ಕೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s