ಪಂಕ್ತಿ ಭೇದ ಆಚರಣೆಗೆ ನಿರ್ಮಲಾನಂದನಾಥ ಶ್ರೀ ವಿರೋಧ: ಶರಣ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Posted: ಜೂನ್ 22, 2014 in Uncategorized

ಮಂಡ್ಯ: ಮಠ ಮಂದಿರಗಳಲ್ಲಿ ಪಂಕ್ತಿ ಭೇದವನ್ನು ವಿರೋಧಿಸಿರುವ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ಈ ಅನಿಷ್ಟ ಪದ್ಧತಿಗೆ ತಿಲಾಂಜಲಿ ಹಾಡಬೇಕೆಂದು ಕರೆ ನೀಡಿದ್ದಾರೆ.
ನಗರದ ಕಲಾಮಂದಿರದಲ್ಲಿ ಎರಡು ದಿನಗಳ ಜಿಲ್ಲಾ ದ್ವಿತೀಯ ಶರಣ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಪಂಕ್ತಿ ಭೇದ ಆಚರಣೆಗೆ ಆಕ್ಷೇಪ
ವ್ಯಕ್ತಪಡಿಸಿದರು.

ಬಸವಣ್ಣ ಅವರು ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕು. ಜಾತಿ ನಿರ್ಮೂಲನೆಯಾಗಬೇಕು ಎಂದು ಪ್ರತಿಪಾದಿಸಿದ್ದರು. ಅದರಂತೆ ಜಾತಿಭೇದ ರಹಿತ ಸಮಾಜ ನಿರ್ಮಿಸಬೇಕು ಎಂದು ಅವರು ಕರೆ ನೀಡಿದರು.
ಮಠ ಮಂದಿರಗಳು ಸಾಧುಸಂತ, ಶರಣರ ತತ್ವಗಳನ್ನು ಅನುಷ್ಠಾನಗೊಳಿಸಬೇಕು. ಆ ಮೂಲಕ ಜಾತಿರಹಿತ ಸಮಾಜ ನಿರ್ಮಾಣ ಮಾಡಬೇಕು. ಜಾತಿ ಆಧಾರಿತ ಪಂಕ್ತಿ ಸರಿಯಲ್ಲ ಎಂದು ಸ್ವಾಮೀಜಿ ಸಲಹೆ ನೀಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ನಿಂತ ನೀರಾಗಬಾರದು, ನಿರಂತರ ಚಲಿಸುವಂತಿರಬೇಕು. ಆದರ್ಶ ಸಮಾಜದ ಬೆನ್ನಟ್ಟಿ ಹೋಗಿ ವಾಸ್ತವತೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು. ವೃತ್ತಿಗೌರವ ಹೆಚ್ಚಿಸಲು ಅಂದೇ ಬಸವಣ್ಣನವರು ಶ್ರಮಿಸಿದ್ದರು. ವ್ಯಕ್ತಿಯ ನಡೆ-ನುಡಿಯ ಆಧಾರದ ಮೇಲೆ ಅವರನ್ನು ಗೌರವಿಸುವಂತಹ ಕೆಲಸ ಮಾಡಬೇಕೇ ವಿನಃ ಅವರು ಕೈಗೊಳ್ಳುವ ವೃತ್ತಿಯಿಂದಲ್ಲ ಎಂದು ತೋರಿಸಿಕೊಟ್ಟ ಮಹಾನ್ ಮಾನವತಾವಾದಿ ಬಸವಣ್ಣ ಎಂದು ಅವರು ವಿಶ್ಲೇಷಿಸಿದರು.

ಸಮ್ಮೇಳನಾಧ್ಯಕ್ಷ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ, ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ಹೇರಲು ಯತ್ನಿಸುತ್ತಿರುವುದು ಹಾಗೂ ಸುಪ್ರೀಂ ಕೋರ್ಟ್ ಭಾಷಾ ಮಾಧ್ಯಮ ಕುರಿತು ನೀಡಿರುವ ತೀರ್ಪು ಕನ್ನಡ ಮತ್ತಿತರ ಪ್ರಾದೇಶಿಕ ಭಾಷೆಗಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s