ಬಡವರ ಮನೆಗಳು ಶ್ರೀಮಂತರ ಪಾಲು: ಜೂ.24ರಂದು ಕೊಳಚೆ ನಿರ್ಮೂಲನಾ ಮಂಡಳಿ ವಿರುದ್ಧ ಪ್ರತಿಭಟನೆ

Posted: ಜೂನ್ 22, 2014 in Uncategorized

ಬೆಂಗಳೂರು: ನಗರಾದ್ಯಂತ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸಿರುವ 11ಸಾವಿರ ಮನೆಗಳಲ್ಲಿ 8ಸಾವಿರ ಮನೆಗಳು ಶ್ರೀಮಂತರ ಪಾಲಾಗಿದೆ. ಹಾಗಾಗಿ ಈ ಮನೆಗಳ ಹಂಚಿಕೆ ಪ್ರಕ್ರಿಯೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಜೂ.24ರಂದು ನಗರದ ಪುರಭವನದ ಬಳಿ ಪ್ರತಿಭಟನೆ ಮಾಡಲಾಗುವುದು ಎಂದು ಜಯ ಕರ್ನಾಟಕ ಸಂಘಟನೆಯ ಮುಖಂಡ ಶೆ.ಬೊ.ರಾಧಾಕೃಷ್ಣ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಯಲಹಂಕ ಕ್ಷೇತ್ರದ ಚಿಕ್ಕಬೆಟ್ಟಹಳ್ಳಿಯ ಸರ್ವೇ ನಂ.18ರಲ್ಲಿ ನಿರ್ಮಾಣ ಗೊಂಡಿರುವ 490 ಮನೆಗಳಲ್ಲಿ ಶೇ.80ರಷ್ಟು ಮನೆಗಳು ಶ್ರೀಮಾಂತರ ಪಾಲಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿ ದೊಡ್ಡ ಅವ್ಯವಹಾರದ ಗೂಡಾಗಿದೆ ಎಂದು ಆರೋಪಿಸಿದರು.

ಮೈಸೂರು ರಸ್ತೆಯ ಪಂತರಪಾಳ್ಯ, ಅಂಬೇಡ್ಕರ್‌ನಗರದ ನಿವಾಸಿಗಳಿಗೆ ನಿರ್ಮಿಸಿರುವ 980 ಮನೆಗಳಿಗೆ ಹಕ್ಕು ಪತ್ರ ನೀಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು
ಪ್ರತಿಭಟನೆಯಲ್ಲಿ ಒತ್ತಾಯಿಸ ಲಾಗುವುದೆಂದರು. ಈ ವೇಳೆ ಜಯ ಕರ್ನಾಟಕದ ಅಧ್ಯಕ್ಷ ಆರ್.ಚಂದ್ರಪ್ಪ, ಕಾರ್ಯಾಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ, ನಾ.ಚಿ.ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s