ಬಿಜೆಪಿ ಸಂಸದ ಪ್ರಹ್ಲಾದ ಜೋಶಿ ಪತ್ನಿಯಿಂದ ನಕಲಿ ಮತದಾನ: ಆರೋಪ

Posted: ಜೂನ್ 22, 2014 in Uncategorized

ಹುಬ್ಬಳ್ಳಿ: ಪಶ್ಚಿಮ ಪದವೀಧರರ ಮತಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರ ಪತ್ನಿ ಜ್ಯೋತಿ ಜೋಶಿ ಚಲಾಯಿಸಿದ ಮತ ವಿವಾದಕ್ಕೆ ಕಾರಣವಾಗಿದೆ.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೂ ಜ್ಯೋತಿ ಅವರು ಮತ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಗೊಂದಲವನ್ನೂ ಮೂಡಿಸಿದೆ.

ಕೇಶ್ವಾಪುರದಲ್ಲಿರುವ ಫಾತಿಮಾ ಪ್ರೌಢಶಾಲೆಯ ರೂಂ. ನಂ. 1ರಲ್ಲಿರುವ ಮತಗಟ್ಟೆಯಲ್ಲಿ ಪ್ರಹ್ಲಾದ ಜೋಶಿ ಹಾಗೂ ಜ್ಯೋತಿ ಜೋಶಿ ಅವರು ಮತ ಚಲಾಯಿಸಿದರು. ಕೈ ಬೆರಳಿಗೆ ಶಾಯಿ ಹಾಕಿರುವುದನ್ನು ಸಹ ಮಾಧ್ಯಮದವರಿಗೆ ಪ್ರದರ್ಶಿಸಿದರು. ಇದಾದ ನಂತರ, ಜ್ಯೋತಿ ಅವರ ಹೆಸರೇ ಮತದಾರರ ಪಟ್ಟಿಯಲ್ಲಿ ಇಲ್ಲ. ಆದರೂ ಮತ ಚಲಾಯಿಸಿದ್ದಾರೆ ಎಂಬ ದೂರುಗಳು ಕೇಳಿ ಬಂದವು.

ಈ ಹಿನ್ನೆಲೆಯಲ್ಲಿ ಮತಗಟ್ಟೆಗೆ ತೆರಳಿ, ಪ್ರಥಮ ಮತಗಟ್ಟೆ ಅಧಿಕಾರಿ ವಿಚಾರಿಸಿದಾಗ, ‘ಜ್ಯೋತಿ ಜೋಶಿ ಅವರು ಮತ ಚಲಾಯಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಅವರ ಅನುಕ್ರಮ ಸಂಖ್ಯೆ 775’ ಎಂದು ಮಾಹಿತಿ ನೀಡಿದರು.

ಆದರೆ, ಪಟ್ಟಿಯಲ್ಲಿ ಜ್ಯೋತಿ ಎಂಬ ಹೆಸರೇ ಇರಲಿಲ್ಲ. ‘ಪ್ರಹ್ಲಾದ ಗುಮಾಸ್ತೆ’ ಎಂದಷ್ಟೆ ಇತ್ತು. ಇನ್ನು, ಪ್ರಹ್ಲಾದ ಜೋಶಿ ಅವರ ಅನುಕ್ರಮ ಸಂಖ್ಯೆ 792 ಇತ್ತು. ಅನುಕ್ರಮ ಸಂಖ್ಯೆ 775ಕ್ಕೆ ಸಂಬಂಧಿಸಿದಂತೆ ಮನೆ ವಿಳಾಸ ‘122/ಬಿ, ಮಯೂರಿ ಎಸ್ಟೇಟ್‌, ಕೇಶ್ವಾಪುರ, ಹುಬ್ಬಳ್ಳಿ’ ಎಂದಿದ್ದರೆ, 792ಕ್ಕೆ ಸಂಬಂಧಿಸಿದಂತೆ ‘122/ಡಿ, ಮಯೂರಿ ಎಸ್ಟೇಟ್‌, ಕೇಶ್ವಾಪುರ, ಹುಬ್ಬಳ್ಳಿ’ ಎಂದಿದೆ. ಹೀಗಾಗಿ ಈ ಸಂಬಂಧ ಮತ್ತಷ್ಟೂ ಗೊಂದಲಕ್ಕೆ ಕಾರಣವಾಯಿತು.

ಕೆಲ ಹೊತ್ತಿನ ನಂತರ, ಕನ್ನಡದಲ್ಲಿ­ರುವ ಮತದಾರರ ಪಟ್ಟಿಯನ್ನು ತೋರಿಸಿದ ಚುನಾವಣಾ ಸಿಬ್ಬಂದಿ, ಪಟ್ಟಿಯಲ್ಲಿ ‘ಜ್ಯೋತಿ ಪ್ರಹ್ಲಾದ ಗುಮಾಸ್ತೆ’ ಎಂಬುದಾಗಿ ಪೂರ್ಣ ವಿವರ ಇದೆ ಎಂದು ವಿವರಿಸಿದರು.

ಆದರೆ, ಕನ್ನಡದಲ್ಲಿರುವ ಮತದಾರರ ಪಟ್ಟಿಯಲ್ಲಿ ಅನುಕ್ರಮ ಸಂಖ್ಯೆ 775 ಇದ್ದರೂ, ವಿಳಾಸ ಮಾತ್ರ ‘228, ಅಕ್ಷಯ ಕಾಲೊನಿ, ಗೋಕುಲ ರಸ್ತೆ’ ಎಂದು ಇತ್ತು. ಇದು ಸಹ ಗೊಂದಲಕ್ಕೆ ಕಾರಣವಾಯಿತು.

ಈ ನಡುವೆ, ಜ್ಯೋತಿ ಅವರ ತಂದೆ ಹೆಸರು ಪ್ರಹ್ಲಾದ ಗುಮಾಸ್ತೆ. ಅದೇ ಹೆಸರೇ ಮತದಾರರ ಪಟ್ಟಿಯಲ್ಲಿದೆ ಎಂದು ಜೋಶಿ ಅವರ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.

‘ಚಾಲೆಂಜ್‌ ವೋಟ್‌’ ಮಾಡುತ್ತಿದ್ದೆವು..:
ಕಾಲೇಜು ಸರ್ಟಿಫಿಕೇಟ್‌ನಲ್ಲಿರುವ ಹೆಸರಿನಲ್ಲಿಯೇ ಪತ್ನಿ ಜ್ಯೋತಿ ಅವರ
ನೋಂದಣಿಯಾಗಿದೆ. ಮನೆಗೆ ತಲುಪಿಸಲಾಗಿರುವ ಮತದಾರರ ಚೀಟಿಯಲ್ಲಿ ಅವರ ಹೆಸರು ಹಾಗೂ ಇತರ ವಿವರಗಳಿವೆ. ಇದೇ ಚೀಟಿಯನ್ನು ತೋರಿಸಿಯೇ ಮತ ಚಲಾಯಿಸಿದ್ದಾರೆ. ಕಳೆದ
ಚುನಾವಣೆಯಲ್ಲಿಯೂ ಮತ ಚಲಾಯಿಸಿದ್ದಾರೆ. ಆಗ ತೋರಿ ಬರದ ಗೊಂದಲ ಈಗೇಕೆ.

ವೈಯಕ್ತಿಕ ವಿವರಗಳಲ್ಲಿ ಸ್ಪಷ್ಟತೆ ಇಲ್ಲದಿದ್ದ ಪಕ್ಷ ಮತಗಟ್ಟೆ ಅಧಿಕಾರಿಗಳು ನಮ್ಮನ್ನು ಮರಳಿ ಕಳಿಸಬೇಕಿತ್ತು. ಎಲ್ಲ ಪಕ್ಷಗಳ ಏಜೆಂಟರೂ ಮತಗಟ್ಟೆ ಒಳಗಿದ್ದರು. ಅವರು ಆಕ್ಷೇಪ ವ್ಯಕ್ತಪಡಿಸಿಲ್ಲ. ಹಾಗೊಂದು ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದರೆ, ಮತದಾನಕ್ಕೆ ಅವಕಾಶ ನೀಡದಿದ್ದಿದ್ದರೆ, ‘ಚಾಲೆಂಜ್‌ ವೋಟ್’ ಚಲಾಯಿಸುತ್ತಿದ್ದೆವು. ಅಷ್ಟಕ್ಕೂ, ಬೇರೊಬ್ಬರ ಹೆಸರಿನಲ್ಲಿ ಮತ ಚಲಾಯಿಸುವಷ್ಟು ಬೇಜವಾಬ್ದಾರಿ ವ್ಯಕ್ತಿಗಳು ನಾವಲ್ಲ ಎಂದು ಪ್ರಹ್ಲಾದ ಜೋಶಿ ಹೇಳಿಕೊಂಡಿದ್ದಾರೆ.

ತನಿಖೆಗೆ ಆದೇಶ:
ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರು ಈ ಪ್ರಕರಣ ಕುರಿತಂತೆ ತನಿಖೆಗೆ ಆದೇಶಿಸಿದ್ದಾರೆ. ತನಿಖಾ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್‌ ಸ್ಪಷ್ಟಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s