ರೈಲ್ವೆ ದರ ಹೆಚ್ಚಳಕ್ಕೆ ಸಿಐಟಿಯು ಖಂಡನೆ

Posted: June 22, 2014 in Uncategorized

ಬೆಂಗಳೂರು: ರೈಲ್ವೆ ಪ್ರಯಾಣ ಹಾಗೂ ಸರಕು ಸಾಗಣೆದರ ಏರಿಕೆ ಮಾಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಸಿಐಟಿಯುನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್ ಖಂಡಿಸಿದ್ದಾರೆ.

ಬಹುಮತ ನೀಡಿ ಗೆಲ್ಲಿಸಿದ ಜನತೆಗೆ ಬಿಜೆಪಿ ಕೊಟ್ಟ ಕೊಡುಗೆ ಇದು. ಸಾಮಾನ್ಯ ಜನತೆ ಹೆಚ್ಚು ಅವಲಂಭಿಸುವ ರೈಲ್ವೆ ಪ್ರಯಾಣದ ದರವನ್ನು ಶೇ.14 ರಷ್ಟು ಹೆಚ್ಚಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನ ವಿರೋಧಿ ನೀತಿಗೆ ಮುನ್ನುಡಿ ಬರೆದಿದ್ದಾರೆಂದು ಕಿಡಿ ಕಾರಿದರು.

ಈಗಾಗಲೇ ದೇಶದ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಿಸುತ್ತೇವೆಂಬ ಅಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಜನತೆಗೆ ನಂಬಿಕೆ ದ್ರೋಹ ಎಸಗುವುದು ಸರಿಯಲ್ಲ. ಈ ಕೂಡಲೇ ರೈಲ್ವೆ ದರವನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s