ಹೆಚ್ಚು ವೇತನ ಪಡೆಯಲು ಭೂತಾನ್‌ ಪ್ರಧಾನಿ ನಕಾರ

Posted: ಜೂನ್ 22, 2014 in Uncategorized

ಥಿಂಪು (ಐಎ­ಎನ್‌ಎಸ್‌): ಭೂತಾನ್‌ ಪ್ರಧಾನಿ ಶೆರಿಂಗ್‌ ತೊಗ್ಬೆ ರಾಜಕಾರಣಿ­ಗಳಿಗೊಂದು ಮಾದರಿ ಹಾಕಿಕೊಟ್ಟಿದ್ದಾರೆ. ಹೆಚ್ಚಳವಾಗಿರುವ ತಮ್ಮ ಸಂಬಳವನ್ನು ಪಡೆದುಕೊಳ್ಳಲು ಅವರು ನಿರಾಕರಿಸಿದ್ದಾರೆ. ಪ್ರತಿ ತಿಂಗಳು ಹೆಚ್ಚುವರಿಯಾಗಿ ದೊರೆಯಲಿರುವ ರೂ.50 ಸಾವಿರವನ್ನು ಸಮಾಜ ಸೇವಾ ಕಾರ್ಯಗಳಿಗೆ ದಾನ ನೀಡಲು ಅವರು ನಿರ್ಧರಿಸಿದ್ದಾರೆ.

ಸಂಸತ್ತಿನಲ್ಲಿ ಗುರುವಾರ ರಾಷ್ಟ್ರೀಯ ವರದಿ ಮಂಡಿಸಿ ಮಾತನಾಡಿದ ಅವರು, ಸಂಸದರು ಮತ್ತು ಸಚಿವರಿಗೆ ನೀಡುವ ಸಂಬಳದ ಬಗ್ಗೆ ಹಲವರು ಟೀಕೆ ಮಾಡಿದ್ದಾರೆ ಎಂದಿದ್ದಾರೆ.

‘ಸಂಬಳ ಹೆಚ್ಚಳವನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಇದು ಹೆಚ್ಚು ಅಥವಾ ಕಡಿಮೆ ಎಂದೂ ಹೇಳುವುದಿಲ್ಲ. ಆದರೆ ಪ್ರಧಾನಿಯ ಸಂಬಳ ತೀರಾ ಹೆಚ್ಚಾಗಿದೆ. ಇಷ್ಟೊಂದು ವೇತನ ನೀಡುವುದನ್ನು ತಾಳಿಕೊಳ್ಳಲು ನಮ್ಮ ದೇಶಕ್ಕೆ ಸಾಧ್ಯವಿಲ್ಲ. ಹಾಗಾಗಿ ಈ ಸಂಬಳವನ್ನು ಸ್ವೀಕರಿಸಲು ನನ್ನ ಮನಸ್ಸಾಕ್ಷಿ ಒಪ್ಪುವುದಿಲ್ಲ’ ಎಂದು ತೊಗ್ಬೆ ಹೇಳಿದ್ದಾರೆ.

ಸಂಪುಟ ಸಚಿವರು ಪಡೆಯುವಷ್ಟೇ ವೇತನವನ್ನು ಪ್ರಧಾನಿಯೂ ಪಡೆಯಲಿದ್ದಾರೆ. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಅವರು ಸಮಾಜ ಸೇವೆಗಾಗಿ ದಾನ ಮಾಡಲಿದ್ದಾರೆ ಎಂದು ಭೂತಾನ್‌ನ ರಾಷ್ಟ್ರೀಯ ಪತ್ರಿಕೆ ಕ್ಯುನ್ಸೆಲ್‌ ವರದಿ ಮಾಡಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s