ದಲಿತರು ಸಿಎಂ, ಪಿಎಂ ಆಗುವುದರಿಂದ ದಲಿತರ ಸಮಸ್ಯೆಗಳು ನಿವಾರಣೆಯಾಗದು: ಜಾರಕಿಹೊಳಿ

Posted: ಜೂನ್ 23, 2014 in Uncategorized

ಮೈಸೂರು: ‘ದಲಿತರು ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಆಗುವುದರಿಂದ ದಲಿತರ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ’ ಎಂದು ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೈಸೂರಿನ ನಂಜರಾಜ ಬಹಾದ್ದೂರ್ ಛತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭ’ದಲ್ಲಿ ಅವರು ಮಾತನಾಡಿದರು.

‘ದಲಿತರು ಮುಖ್ಯಮಂತ್ರಿ ಇಲ್ಲವೇ ಪ್ರಧಾನಮಂತ್ರಿ ಆಗುವುದರಿಂದಷ್ಟೇ ದಲಿತರ ಸಮಗ್ರ ಪ್ರಗತಿ ಸಾಧ್ಯವಾಗು­ವುದಿಲ್ಲ. ಏಕೆಂದರೆ, ನಾವೆಲ್ಲರೂ ಪುರೋಹಿ­ಶಾಹಿ ವ್ಯವಸ್ಥೆಯಲ್ಲಿ ಅಧಿಕಾರ ನಡೆಸುತ್ತಿದ್ದೇವೆ. ಈ ವ್ಯವಸ್ಥೆ ಬದಲಾಗದ ಹೊರತು ದಲಿತರು ಸಿಎಂ ಆದಾಕ್ಷಣ ದಲಿತರ ಸಮಗ್ರ ಪ್ರಗತಿ ಎನ್ನುವುದು ಕೇವಲ ಭ್ರಮೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಒಳ ಮೀಸಲಾತಿ ಹುಟ್ಟಿಗೆ ಪುರೋಹಿತ­ಶಾಹಿಯೇ ಕಾರಣ. ಮುಂದಿನ ಐದು ವರ್ಷಗಳಲ್ಲಿ ಅದು ಪರಿಶಿಷ್ಟ ಪಂಗಡದೊಳಕ್ಕೂ ವ್ಯಾಪಿಸುವ ಅಪಾಯ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಯುವಕರನ್ನು ಸೆಳೆಯಬೇಕು: ‘ಸದ್ಯ ಯುವ ಸಮುದಾಯದ ಒಂದು ಗುಂಪು ನರೇಂದ್ರ ಮೋದಿ ಅವರತ್ತ ಆಕರ್ಷಿ­ತವಾಗಿದೆ. ಇವರನ್ನು ಅಂಬೇಡ್ಕರ್ ವಿಚಾರಗಳತ್ತ ಸೆಳೆಯಬೇಕಾದ ಅನಿವಾ­ರ್ಯತೆ ಇದೆ. ಅಲ್ಲದೇ, ರಾಜಕಾರಣ­ದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಒಂದಾಗುವ ಜರೂರು ಇಂದು ಒದಗಿದೆ’ ಎಂದು ತಿಳಿಸಿದರು.

‘ಬೆಳಿಗ್ಗೆ ಎದ್ದೊಡನೇ ಟಿ.ವಿ.ಯಲ್ಲಿ ಜೋತಿಷ ಹಾಗೂ ವಾಸ್ತು ಸಂಬಂಧಿತ ಕಾರ್ಯಕ್ರಮಗಳನ್ನು ಜನ ನೋಡಬಾರದು. ವಿಶೇಷವಾಗಿ ದಲಿತರು ಇದರತ್ತ ಆಕರ್ಷಿತರಾಗ­ಬಾರದು. ಜನ ನೋಡುವುದರಿಂದಲೇ ಟಿ.ವಿ. ವಾಹಿನಿಗಳು ಅವುಗಳನ್ನು ಪ್ರಸಾರ ಮಾಡುತ್ತವೆ. ಹಾಗಾಗಿ, ಮೊದಲು ಇಂತಹ ಕಾರ್ಯ­ಕ್ರಮಗಳನ್ನು ಜನರು ಬಹಿಷ್ಕರಿಸಬೇಕು’ ಎಂದು ಅವರು ಕಿವಿಮಾತು ಹೇಳಿದರು.

‘ಅಂಬೇಡ್ಕರ್ ವಿಚಾರಗಳನ್ನು ತಿಳಿಸುವ ಕಾರ್ಯಕ್ರಮಗಳಿಗೆ ಹೋಗಲು ಜನರು ಬಸ್‌ ಕೇಳುತ್ತಾರೆ. ಅದೇ ದೇವಸ್ಥಾನಗಳಿಗೆ ಸಾಲ ಮಾಡಿಕೊಂಡು ಹೋಗುತ್ತಾರೆ. ದೇವಸ್ಥಾನಗಳಿಗೆ ಕೊಡುವ ಪ್ರಾಧಾ­ನ್ಯಕ್ಕಿಂತ ಹೆಚ್ಚಿನ ಒತ್ತನ್ನು ಅಂಬೇಡ್ಕರ್ ವಿಚಾರಗಳ ಕಾರ್ಯಕ್ರಮಗಳಿಗೆ ನೀಡಬೇಕು. ಇದರಿಂದ ಬೌದ್ಧಿಕ ಸಂಪತ್ತು ವೃದ್ಧಿಯಾಗುತ್ತದೆ’ ಎಂದು ಸಲಹೆ ನೀಡಿದರು.

ದಲಿತ ಉತ್ಸವಕ್ಕೆ ₨50 ಲಕ್ಷ:‘ದಲಿತ ಉತ್ಸವವನ್ನು ರಾಜ್ಯ­ದಲ್ಲಿ ಆಯೋಜಿಸಲು 50 ಲಕ್ಷ ರೂಪಾಯಿ ಮಂಜೂರು ಮಾಡಲಾ­ಗುತ್ತದೆ’ ಎಂದು ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

‘ದಲಿತ ಉತ್ಸವ ಹೊಸ ಪರಿಕಲ್ಪನೆ. ಇದರ ಮೂಲಕ ದಲಿತ ಕಲಾವಿ ದರನ್ನು, ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಆಗುತ್ತದೆ. ಮುಂಬರುವ ವರ್ಷಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಇದನ್ನು ಏರ್ಪಡಿಸಲಾಗುವುದು’ ಎಂದು ತಿಳಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s