ರೈಲು ಪ್ರಯಾಣ ದರ ಏರಿಕೆ ಖಂಡಿಸಿ ಎಸ್‌ಯುಸಿಐ ಪ್ರ ತಿಭಟನೆ

Posted: ಜೂನ್ 23, 2014 in Uncategorized

ಮೈಸೂರು: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವದ ನೂತನ ಸರಕಾರ, ಬಡ ವರ್ಗದ ಸಾರಿಗೆಯಾಗಿರುವ ರೈಲು ಪ್ರಯಾಣ ದರವನ್ನು ಶೇ.14.2ರಷ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ಸೋಶಿಯಲಿಸ್ಟ್ ಯೂನಿಟಿ ಆಫ್ ಇಂಡಿಯಾ(ಎಸ್‌ಯುಸಿಐ) ಕಾರ್ಯ ಕರ್ತರು ಜೂನ್ 21ರಂದು ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.

ಯುಪಿಎ ಸರಕಾರದ ದುರಾಡಳಿ ತದಿಂದ ಬೇಸತ್ತಿದ್ದ ದೇಶದ ಜನತೆ, ಹೊಸ ಆಕಾಂಕ್ಷೆ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಅಧಿಕಾ ರಕ್ಕೆ ತಂದರು. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಹಣದುಬ್ಬರದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜತೆಗೆ ಗಾಯದ ಮೇಲೆ ಬರೆ ಎಳೆ ದಂತೆ, ರೈಲು ಪ್ರಯಾಣ ದರ ಏರಿಕೆ ಮಾಡಿದೆ. ಮೋದಿ ಸರಕಾರದಿಂದ ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ನಂಬಿಕೊಂಡಿದ್ದ ಜನತೆಗೆ ನಿರಾಸೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷ ರೈಲು ಪ್ರಯಾಣ ದರ ಹೆಚ್ಚಿಸಲಾಗಿತ್ತು. ಜತೆಗೆ ಈ ಬಾರಿಯೂ ಬಜೆಟ್ ಮುನ್ನವೇ ಸರಕು ಸಾಗಣೆೆ ದರವನ್ನು ಶೇ.6.5 ಹಾಗೂ ಪ್ರಯಾಣ ದರವನ್ನು ಶೇ.14.2 ರಷ್ಟು ಏರಿಸಿದೆ. ಅಗ್ಗದ ಸಾರಿಗೆಯಾಗಿರುವ ರೈಲು ಪ್ರಯಾಣದಲ್ಲಿ ಲಾಭ-ನಷ್ಟಗಳನ್ನು ಲೆಕ್ಕಹಾಕಿ, ದರ ಏರಿಕೆ ಮಾಡಿರುವುದು ಸರಿಯಲ್ಲ. ಕೂಡಲೇ ಕೇಂದ್ರ ಸರಕಾರ ರೈಲು ಪ್ರಯಾಣ ದರವನ್ನು ಇಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯ ದರ್ಶಿ ಎಂ.ಶಶಿಧರ್, ಚಂದ್ರಶೇಖರ್ ಮೇಟಿ, ಜಿಲ್ಲಾ ಸಮಿತಿ ಸದಸ್ಯೆ ಉಮಾ ದೇವಿ, ಬಿ.ರವಿ, ಸಂಧ್ಯಾ, ಸೀಮಾ, ಯಶೋಧರ್, ಸುನೀಲ್ ಮತ್ತಿತರರಿದ್ದರು.

ಶಾಸಕರಿಂದಲೂ ಪ್ರತಿಭಟನೆ:
ಕೇಂದ್ರ ಸರಕಾರ ಜನಸಾಮಾನ್ಯರನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಅವೈಜ್ಞನಿಕವಾಗಿ ರೈಲು ಪ್ರಯಾಣ ದರವನ್ನು ಹೆಚ್ಚಿಸಿದೆ ಎಂದು ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ಬೆಂಬಲಿಗರು ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಬಡ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ರೈಲು ಪ್ರಯಾಣ ದರವನ್ನು ಶೇ.14.2 ರಷ್ಟು ಏರಿಸಿರುವುದರಿಂದ ಜನಸಾಮಾ ನ್ಯರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಜತೆಗೆ ಸರಕು ಸಾಗಾಣಿಕೆ ದರವನ್ನು ಶೇ.6.5 ರಷ್ಟು ಹೆಚ್ಚಿಸಿ ರುವುದರಿಂದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಅಲ್ಲದೆ, ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿ ಜನರು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s