ರೈಲ್ವೆ ಅಭಿವೃದ್ಧಿಯ ಹೆಸರಿನಲ್ಲಿ ಜನರ ಜೇಬಿಗೆ ಕನ್ನ!

Posted: ಜೂನ್ 23, 2014 in Uncategorized

ತುಮಕೂರು: ರೈಲ್ವೆ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರದ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ರೈಲ್ವೆ ಪ್ರಯಾಣ ದರ ಮತ್ತು ಸರಕು ಸಾಗಣೆ ದರ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರಯ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಹಿರಿಯ ಮುಖಂಡ ಬಿ.ಉಮೇಶ್, ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾವಿರಾರು ಕೋಟಿ ಹಣವನ್ನು ದೊಡ್ಡ ದೊಡ್ಡ ಕಾರ್ಪೂರೇಟ್ ಕಂಪೆನಿಗಳಿಂದ ಖರ್ಚುಮಾಡಿಸಿದೆ. ಈಗ ಅವರ ಖುಣ ತೀರಿಸಲು ಹೊರಟಿರುವ ಮೋದಿ ಸರಕಾರ ಆರಂಭದಲ್ಲೇ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸುವುದರ ಜೊತೆಗೆ ರೈಲ್ವೆ ಯನ್ನು ಖಾಸಗಿ ಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ರೈಲ್ವೆ ಕೇವಲ ಲಾಭ ಗಳಿಸಲು ಮಾತ್ರ ಇರುವ ಸಂಸ್ಥೆಯಲ್ಲ. ಅದು ಜನರ ಸೇವೆ ಮಾಡಲು ಇರುವ ಒಂದು ಸಾಧನ ಎಂದ ಅವರು, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಲಿ ಕೇಂದ್ರದ ರೈಲ್ವೆ ಮಂತ್ರಿಗಳು ಆಗಿರುವ ಸದಾನಂದಗೌಡರವರು ನಗುನಗುತ್ತಾ ರಾಜ್ಯದ ಜನರಿಗೆ ದ್ರೋಹ ಬಗೆದಂತೆ ಈಗ ದೇಶದ ಜನರಿಗೆ ದ್ರೋಹ ಬಗೆಯಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕು ಸಾಗಣೆಯ ಬೆಲೆಯನ್ನು ಹೆಚ್ಚಿಸಿರುವುದರಿಂದ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಳವಾಗುತ್ತದೆ. ಬಿಜೆಪಿ ಅಧಿಕಾರಕ್ಕಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಬೆಲೆ ಏರಿಕೆ ನೀತಿಗಳ ವಿರುದ್ಧ ಭಾಷಣಗಳನ್ನು ಮಾಡಿ ಈಗ ಮಾಡಿರುವುದು ಏನು ಎಂದು ಪ್ರಶ್ನಿಸಿದ ಅವರು, ಸಿಪಿಐಎಂ ಪಕ್ಷ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳುತ್ತಲೇಬಂದಿವೆ ಎಂದು ವಿಶ್ಲೇಶಿಸಿದರು.

ಸಿಪಿಎಂ ನಗರ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ದುಡಿಯುವ ಜನರ ಹಿತವನ್ನು ಕಾಯ ಬೇಕಾದ ಸರಕಾರಗಳು ಇಂದು ತಮ್ಮ ಚುನಾವಣೆಗಳಿಗೆ ಹಣದ ಹೊಳೆ ಯನ್ನು ಹರಿಸಿದ ಕಾರ್ಪೂರೇಟ್ ಕಂಪೆನಿಗಳ ಹಿತವನ್ನು ಕಾಯುತ್ತಿವೆ. ಮೊದಲಿಗೆ ಪ್ರಾಯೋಗಿಕ ಎಂಬಂತೆ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಿದೆ. ಈ ಮೂಲಕ ರೈಲ್ವೆಯಲ್ಲಿ ಸಂಚರಿಸುವ ಸಾವಿರಾರು ಸಂಖ್ಯೆಯ ದುಡಿಯುವ ಜನರ ಬದುಕಿನ ಮೇಲೆ ಬರೆ ಎಳೆದಿದೆ. ಆದ್ದರಿಂದ ರೈಲ್ವೆ ಪ್ರಯಾಣ ದರವನ್ನು ವಾಪಸ್ ಪಡೆಯುವಂತೆ ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್, ಆಟೊ ಚಾಲಕರ ಸಂಘದ ಸಿದ್ದರಾಜು, ಪೌರಕಾರ್ಮಿಕರ ಸಂಘದ ಮಂಜುನಾಥ್, ಜೂನಿ, ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘದ ದೇವರಾಜು, ಎಸ್‌ಎಫ್‌ಐ ಮುಖಂಡ ಶಿವಣ್ಣ ಮತ್ತಿತರರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s