ಶೀಘ್ರದಲ್ಲೇ ಸಕ್ಕರೆ ಕಹಿ?

Posted: ಜೂನ್ 24, 2014 in Uncategorized

ಹೊಸದಿಲ್ಲಿ, ಜೂ.23: ಸಕ್ಕರೆಯ ಆಮದು ಸುಂಕವನ್ನು ಹೆಚ್ಚಿಸಲು ಸರಕಾರವಿಂದು ನಿರ್ಧರಿಸಿದ್ದು, ಇದರಿಂದ ಸಕ್ಕರೆಯ ಬೆಲೆ ಏರುವ ಸಾಧ್ಯತೆಯಿದೆ. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸುವುದಕ್ಕಾಗಿ ಹೆಚ್ಚುವರಿ ರೂ. 4,400 ಕೋಟಿ ಬಡ್ಡಿರಹಿತ ಸಾಲ ನೀಡುವುದಕ್ಕೂ ಅದು ನಿರ್ಧರಿಸಿದೆ.

ಕೇಂದ್ರ ಆಹಾರ ಸಚಿವ ರಾಂ ವಿಲಾಸ್ ಪಾಸ್ವಾನ್‌ರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯೊಂದರಲ್ಲಿ, ಸಕ್ಕರೆಯ ಆಮದು ಸುಂಕವನ್ನು ಶೇ.15ರಿಂದ ಶೇ.40ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಮುಖ್ಯವಾಗಿ ಉತ್ತರಪ್ರದೇಶದಲ್ಲಿ ರೈತರಿಗೆ ರೂ. 11 ಸಾವಿರ ಕೋಟಿ ಬಾಕಿಯಿರಿಸಿರುವ ಸಕ್ಕರೆ ಕಾರ್ಖಾನೆಗಳಿಗೆ ಪರಿಹಾರ ಒದಗಿಸಲು ಸೆಪ್ಟಂಬರದ ವರೆಗೆ ರಫ್ತು ಸಬ್ಸಿಡಿ ವಿಸ್ತರಿಸುವ ತೀರ್ಮಾನವನ್ನು ಸಭೆ ಕೈಗೊಂಡಿದೆ. ಪೆಟ್ರೋಲ್‌ನೊಂದಿಗೆ ಕಡ್ಡಾಯವಾಗಿ ಶೇ.5ರಷ್ಟು ಎಥನಾಲ್ ಮಿಶ್ರಣ ಮಾಡುವುದಕ್ಕೂ ಜಾರಿಗೆ ತರುವ ಪ್ರಯತ್ನ ಮಾಡಲಾಗುವುದು ಬಳಿಕ ಅದನ್ನು ಶೇ.10ಕ್ಕೆ ಕ್ರಮೇಣ ವಿಸ್ತರಿಸಲಾಗುವುದು.

ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದನ್ವಯ ನಡೆದ ಈ ಸಭೆಯಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿಯ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಹಾಗೂ ಸಂಪುಟ ಕಾರ್ಯದರ್ಶಿ ಅಜಿತ್ ಸೇಠ್ ಹಾಜರಿದ್ದರು.

ತಾವು ನಾಲ್ಕು ಮುಖ್ಯ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಸಕ್ಕರೆ ಕಾರ್ಖಾನೆಗಳು ನೀಡಿರುವ ಅಬಕಾರಿ ಸುಂಕದ ಪ್ರತಿಯಾಗಿ ಬಡ್ಡಿ ರಹಿತ ಸಾಲವನ್ನು ಮೂರು ವರ್ಷದ ಬದಲು 5 ವರ್ಷಗಳಿಗೆ ವಿಸ್ತರಿಸಲು ನಿರ್ಧರಿಸಿದ್ದೇವೆಂದು ಸಭೆಯ ಬಳಿ ಪಾಸ್ವಾನ್ ಪತ್ರಕರ್ತರಿಗೆ ತಿಳಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s