ಶ್ರೀಸಾಮಾನ್ಯನ ಮೇಲೆಯೇ ರೈಲು ಓಡಿಸುತ್ತಿರುವ ಸರಕಾರ: ಶಿವಸೇನೆ

Posted: ಜೂನ್ 24, 2014 in Uncategorized

ಮುಂಬೈ: ರೈಲು ಪ್ರಯಾಣ ಹಾಗೂ ಸರಕು ಸಾಗಣೆ ದರ ಹೆಚ್ಚಳ ಮಾಡಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಅದರ ಅಂಗಪಕ್ಷ ಶಿವಸೇನೆಯೇ ತಿರುಗಿಬಿದ್ದಿದೆ. ಶ್ರೀಸಾಮಾನ್ಯನ ಮೇಲೆಯೇ ರೈಲು ಹರಿದು ಹೋಗುವಂತಹ ಪರಿಸ್ಥಿತಿಯನ್ನು ಸರಕಾರ ನಿರ್ಮಿಸಿದೆ ಎಂಬ ಕಟು ಟೀಕೆಯನ್ನು ಅದು ಸರಕಾರದ ವಿರುದ್ಧ ಪ್ರಯೋಗಿಸಿದೆ.

‘‘ರೈಲ್ವೆ ಸಚಿವ ಸದಾನಂದ ಗೌಡರು ಮೊದಲ ಬಾರಿಗೆ ರೈಲ್ವೆ ಟಿಕೆಟ್ ದರವನ್ನು ಇಷ್ಟೊಂದು ಭಾರೀಯಾಗಿ ಏರಿಸಿದ್ದಾರೆ ಹಾಗೂ ಶ್ರೀಸಾಮಾನ್ಯನ ಮೇಲೆಯೇ ರೈಲನ್ನು
ಹರಿಯಬಿಟ್ಟಿದ್ದಾರೆ’’ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಇಂದಿನ ಸಂಪಾದಕೀಯಲ್ಲಿ ಬರೆಯಲಾಗಿದೆ.

ಹಣದುಬ್ಬರದಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಜನರು ನರೇಂದ್ರ ಮೋದಿಗೆ ಮತಹಾಕಿದ್ದಾರೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದ್ದು, ಆದರೆ ರೈಲ್ವೆ ಸಚಿವರು ಪ್ರಯಾಣದರವನ್ನು 14 ಶೇಕಡಾಕ್ಕೆ ಹಾಗೂ ಸರಕು ಸಾಗಣೆ ದರವನ್ನು 6.5 ಶೇಕಡಾಕ್ಕೆ ಹೆಚ್ಚಿಸಿ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಿದ್ದಾರೆ ಎಂದು ಹೇಳಲಾಗಿದೆ. ಮುಂಬೈ ಉಪನಗರದ ಪ್ರಯಾಣಿಕರು 100 ಶೇಕಡಾ ದರ ಏರಿಕೆಯನ್ನು ಎದುರಿಸುವ ಸಂಕಷ್ಟವನ್ನು ಅವರು ನಿರ್ಮಿಸಿಕೊಟ್ಟಿದ್ದಾರೆ ಎಂದು ಸಂಪಾದಕೀಯದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸರಕಾರದ ನಿರ್ಧಾರವು ಮತದಾನ ನಿಗದಿಯಾಗಿರುವ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷಗಳಿಗೆ ತಮ್ಮ ವಿರುದ್ಧ ದಾಳಿ ನಡೆಸಲು ಸಿಕ್ಕಿದ ಅಸ್ತ್ರದಂತಾಗಿದೆ ಎಂದು ಅದು ಆಪಾದಿಸಿದೆ.

‘‘ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಬೆಲೆಯೇರಿಕೆಗಾಗಿ ಟೀಕಿಸಿದ್ದ ಹಾಗೂ ನಿಂದಿಸಿದ್ದ ಅದೇ ಪಕ್ಷ ಇಂದು ಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿದೆ ’’ ಎಂದು ಸಂಪಾದಕೀಯ ಬೆಟ್ಟು ಮಾಡಿದೆ. ರೈಲ್ವೆಯನ್ನು ಮೇಲ್ದರ್ಜೆಗೇರಿಸಲು ಸರಕಾರ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕಾಗಿದೆ ಹಾಗೂ ಇದು ಕಡೆಯ ಬೆಲೆಯೇರಿಕೆ ಎಂಬ ನಿರೀಕ್ಷೆಯನ್ನು ಜನರಲ್ಲಿ ಮೂಡಿಸಬೇಕಾಗಿದೆ ಎಂದು ಸಂಪಾದಕೀಯದಲ್ಲಿ ಸರಕಾರಕ್ಕೆ ಸಲಹೆ ನೀಡಲಾಗಿದೆ.

ಬೆಲೆಯೇರಿಕೆಯನ್ನು ಪುನರ್‌ಪರಿಶೀಲನೆಗೊಳಪಡಿಸಬೇಕು ಎಂಬ ಬೇಡಿಕೆಯು ಬಿಜೆಪಿಯೊಳಗೆಯೇ ಕೇಳಿಬರುತ್ತಿದೆ.ಮಹಾರಾಷ್ಟ್ರ ಶಾಸಕ ವಿನೋದ್ ತಾವ್ರೆ ಸರಕಾರದ ಕ್ರಮವನ್ನು ಪುನರ್ ಪರಿಶೀಲನೆಗೊಳಪಡಿಸುವಂತೆ ಕೋರಿ ಟ್ವಿಟ್ಟರ್ ಸಂದೇಶ ರವಾನಿಸಿದ್ದಾರೆ.

‘‘ರೈಲು ಟಿಕೆಟ್ ದರ ಏರಿಕೆಯು ಮುಂಬೈ ಜನರನ್ನು ಇನ್ನಿಲ್ಲದಂತೆ ಕಾಡಲಾರಂಭಿಸಿದೆ. ಪ್ರಸ್ತಾವನೆಯನ್ನು ಪುನರ್‌ಪರಿಶೀಲನೆಗೊಳಪಡಿಸುವಂತೆ ನಾವು ರಾಜನಾಥ್ ಸಿಂಗ್‌ರಲ್ಲಿ ಮನವಿ ಮಾಡುತ್ತಿದ್ದೇವೆ ’’ ಎಂದು ಟ್ವಿಟ್ಟರ್ ಸಂದೇಶದಲ್ಲಿ ಅವರು ಹೇಳಿದ್ದಾರೆ.

ಬೆಲೆಯೇರಿಕೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ, ಇದನ್ನು ಹಿಂಪಡೆಯುವ ಕುರಿತು ಚರ್ಚಿಸಲು ತಾನು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವುದಾಗಿ ಹೇಳಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s