ಬಹುಕೋಟಿ ಹಗರಣ: ಸೋನಿಯಾ, ರಾಹುಲ್, ಆಸ್ಕರ್ ಫೆರ್ನಾಂಡಿಸ್ ಸಹಿತ ಐವರಿಗೆ ಕೋರ್ಟ್ ಸಮನ್ಸ್

Posted: ಜೂನ್ 26, 2014 in Uncategorized

ಹೊಸದಿಲ್ಲಿ: ಕೆಲ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ನ್ಯಾಷನಲ್‌ ಹೆರಾಲ್ಡ್‌ ಪಬ್ಲಿಕೇಷನ್‌ಗೆ ಸೇರಿದ ಆಸ್ತಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.

ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಗೋಮತಿ ಮನೋಚ, ಗಾಂಧಿಧ್ವಯರಿಗೆ ಗುರುವಾರ ಸಮನ್ಸ್‌ ಕಳುಹಿಸಿದ್ದಾರೆ. ಆಸ್ತಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ವಿರುದ್ಧ ನನಗೆ ಮೇಲ್ನೋಟಕ್ಕೆ ತೋರುವ ಸಾಕ್ಷ್ಯಗಳು ಲಭ್ಯವಾಗಿವೆ. ಹೀಗಾಗಿ ಆ.7ರಂದು ಅವರೆಲ್ಲ ಕೋರ್ಟ್‌ಗೆ ಹಾಜರಾಗಬೇಕು ಎಂದು ಸಮನ್ಸ್‌ನಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ.

ಅಲ್ಲದೆ ಆಸ್ಕರ್ ಫೆರ್ನಾಂಡಿಸ್ ಮತ್ತು ಮೋತಿಲಾಲ್ ವೋರಾ ಅವರಿಗೂ ಆ.7ರಂದು ಹಾಜರಾಗುವಂತೆ ಕೋರ್ಟ್‌ ಆದೇಶಿಸಿದೆ.

ಸ್ವಾಮಿ ಅರ್ಜಿ :

ನ್ಯಾಷನಲ್‌ ಹೆರಾಲ್ಡ್‌ ಪಬ್ಲಿಕೇಷನ್‌ನ ನಿಧಿಯ ದುರುಪಯೋಗದ ಕುರಿತು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ದಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ 1938ರಲ್ಲಿ ಆರಂಭಿಸಿದ್ದರು. ಆದರೆ 2008ರಲ್ಲಿ ಈ ಸಂಸ್ಥೆಯನ್ನು ಮುಚ್ಚಲಾಯಿತು. ಆ ಸಂದರ್ಭದಲ್ಲಿ ಈ ಪತ್ರಿಕೆಗೆ ಸೇರಿದ ಆಸ್ತಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಆರಂಭದಿಂದಲೂ ಅವರು ಆಪಾದನೆ ಮಾಡುತ್ತ ಬಂದಿದ್ದರು. ಹೆರಾಲ್ಡ್‌ಗೆ ಸೇರಿದ ಭೂಮಿಯ ಆಸ್ತಿಯಲ್ಲಿ ಭಾರಿ ಅವ್ಯವಹಾರವಾಗಿದ್ದು ಅದರಲ್ಲಿ ಸೋನಿಯಾ ಹಾಗೂ ರಾಹುಲ್‌ ಗಾಂಧಿ ಭಾಗಿಯಾಗಿದ್ದಾರೆಂದು ಸ್ವಾಮಿ ಆರೋಪಿಸುತ್ತಲೇ ಬಂದಿದ್ದರು.

ಇದಲ್ಲದೆ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಹಣವನ್ನೂ ಗಾಂಧಿ ಕುಟುಂಬದವರು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಪ್ರಕಾಶನಕ್ಕೆ ಮೀಸಲಾದ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸಲು ಅನುಮತಿ ನೀಡಲಾಗಿದೆ. ಇದರ ಹಿಂದೆ 1.6 ಸಾವಿರ ಕೋಟಿ ರೂ ಅವ್ಯವಹಾರದ ಕರಿನೆರಳಿದೆ. ದಿಲ್ಲಿ ಹಾಗೂ ಉತ್ತರಪ್ರದೇಶದಲ್ಲಿರುವ ನ್ಯಾಷನಲ್‌ ಹೆರಾಲ್ಡ್‌/ಕ್ವಾಮಿ ಅವಾಜ್‌ಗೆ ಸೇರಿದ ಆಸ್ತಿಯಲ್ಲೂ ಭಾರಿ ಅವ್ಯವಹಾರ ನಡೆದಿದೆ ಎನ್ನುವುದು ಸುಬ್ರಹ್ಮಣ್ಯನ್ ಸ್ವಾಮಿ ಆರೋಪ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s