ಸರಕಾರ ಜೀವಂತ ಇದೆಯೇ: ರಮೇಶ್ ಕುಮಾರ್ ಪ್ರಶ್ನೆ !

Posted: ಜೂನ್ 26, 2014 in Uncategorized

ಬೆಂಗಳೂರು: ‘ಸರ್ಕಾರಕ್ಕೆ ಹೃದಯವೇನಾದರೂ ಇದೆಯೇ; ರೈತರ ಶಾಪ ಅದಕ್ಕೆ ತಟ್ಟದೆ ಇರುತ್ತದೆಯೇ?’ – ವಿಧಾನಸಭೆಯಲ್ಲಿ ಬುಧವಾರ ಹೀಗೆ ಪ್ರಶ್ನಿಸಿ, ತಮ್ಮದೇ ಪಕ್ಷದ ಸರ್ಕಾ­ರ­ವನ್ನು ಕುಟುಕಿದವರು ಕಾಂಗ್ರೆಸ್‌ ಶಾಸಕ ರಮೇಶ್‌ ಕುಮಾರ್‌.

ಕೃಷಿ ಇಲಾಖೆ ಬೇಡಿಕೆಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಅವರು ತಮ್ಮ 2 ಗಂಟೆಗಳ ಸುದೀರ್ಘ ಮಾತಿ­ನಲ್ಲಿ ಸರ್ಕಾರವನ್ನು ಕಠಿಣ ಶಬ್ದಗಳಿಂದ ಟೀಕಿ­ಸಿದರು. ತಪ್ಪು ಹೆಜ್ಜೆಗಳನ್ನು ಎತ್ತಿ ತೋರಿ ಮೊಟ­ಕಿದರು. ರಾಜಕೀಯ ಅವಕಾಶಗಳ ಕುರಿತೂ ಮಾತು­ಗಳು ಹರಿ­ದವು. ಅದರಲ್ಲಿ ಆಕ್ರೋಶ, ನೋವು, ಹತಾಶೆ ಭಾವನೆಗಳು ಮೇಳೈಸಿದ್ದವು.

‘ರೈತರು ಅಡವಿಟ್ಟ ಚಿನ್ನಾಭರಣ ಮಾತ್ರವಲ್ಲ, ಅವರ ಮಾನವನ್ನೇ ಹಣಕಾಸು ಸಂಸ್ಥೆಗಳು ಹರಾಜು ಹಾಕುತ್ತಿವೆ. ಇಂತಹ ಸಂಸ್ಥೆಗಳ ಮೇಲೆ ನಿಯಂತ್ರಣ ವಿಧಿಸಲು ಯಾವ ಯತ್ನಗಳೂ ನಡೆಯುತ್ತಿಲ್ಲ. ಸರ್ಕಾರ ಜೀವಂತವಿದೆಯೇ?’ ಎಂದು ಪ್ರಶ್ನಿಸಿದರು

‘ರೈತರು ಬದು­ಕೋಕೆ ಅವಕಾಶ ಮಾಡಿ­ಕೊಡು­­ವುದನ್ನು ಬಿಟ್ಟು, ಬೆಳೆ ನಷ್ಟಕ್ಕೆ ಚಿಲ್ಲರೆ ಪರಿಹಾರ ಕೊಟ್ಟು ಅವರ ಕಣ್ಣು ಒರೆಸಿದಂತೆ ಮಾಡು­ತ್ತದಲ್ಲ; ಸರ್ಕಾರಕ್ಕೆ ಹೃದಯ ಇದೆಯೇ’ ಎಂದು ಕೆಣಕಿದರು. ‘ಇಲ್ಲಿಯವರೆಗೆ ಬಂದ ಎಲ್ಲ ಸರ್ಕಾರ­ಗಳೂ ರೈತರ ವಿಷಯದಲ್ಲಿ ಕುಂಭಕರ್ಣ ನಿದ್ದೆಯನ್ನೇ ಮಾಡಿದ್ದು ಈ ಸರ್ಕಾರವೂ ಅದೇ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದೆ’ ಎಂದು ಚಾಟಿ ಬೀಸಿದರು.

‘ರೈತರಿಗೆ ಸಹಾಯ ಮಾಡಲು ಸಹಕಾರ ಇಲಾಖೆಯೂ ಇದೆ. ಆದರೆ, ಸಾಲ ಕೊಡುವ ಯೋಗ್ಯತೆ ಅದಕ್ಕಿಲ್ಲ’ ಎಂದು ವ್ಯಂಗ್ಯವಾಡಿದರು.

ರಾಜಕೀಯ, ಅಧಿಕಾರ, ಕೃಷಿ ಮತ್ತು ಆಡಳಿತ ವ್ಯವಸ್ಥೆ ಕುರಿತು ಅವರ ವ್ಯಂಗ್ಯೋಕ್ತಿಗಳು ಹೀಗಿದ್ದವು:

* ರೀ ಅಶೋಕ, ನೀವೆಷ್ಟು ಬುದ್ಧಿವಂತರು; ಬಹಳ ಬೇಗ ಡಿಸಿಎಂ ಆಗಿಬಿಟ್ಟಿರಿ. ನಿಮ್ಮ ಪಕ್ಕದ­ವರು (ಜಗದೀಶ್‌ ಶೆಟ್ಟರ್‌) ಮುಖ್ಯಮಂತ್ರಿಯೂ ಆಗಿ­ಬಿಟ್ಟರು. ನಾವೂ ಇದೀವಿ. ಹೋಗೋರಿಗೆಲ್ಲ ಕಿರಿಯರಾಗಿ, ಬರೋರಿಗೆಲ್ಲ ಹಿರಿಯರಾಗಿ.

* ಕೃಷಿ ಸಚಿವರೇ, ಪೊಟಾಟೊಗೊಂದು, ಟೊಮೊ­ಟೊ­­ಗೊಂದು ವಿವಿ ಮಾಡಿ. ಹಾಗೇ
ದ್ರಾಕ್ಷಿಗೊಂದು, ದಾಳಿಂಬೆಗೊಂದು ವಿವಿ ಮಾಡಿಬಿಡಿ.

* ಹೊಸ ವಿವಿಗಳಿಗೆ ಎಂಎಲ್‌ಎ­ಗಳನ್ನೇ ಕುಲಪತಿ ಮಾಡಿ. ಮುಂದೆ ಬಿಜೆಪಿ ಸರ್ಕಾರ ಬಂದರೆ ಅವರಿಗೂ ಹಂಚಲು ಹೆಚ್ಚುವರಿ ಹುದ್ದೆಗಳು ಇರಲಿ.

* ರಮೇಶಕುಮಾರ್‌ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊ­ಳ್ಳೋದು ಗ್ಯಾರಂಟಿ ಅಂತ ನೀವು (ವಿರೋಧ ಪಕ್ಷದವರು) ಹೇಳ್ತೀರಿ. ಆದರೆ, ನಮ್ಮ ನಾಯಕರು ನಮ್ಮನ್ನು ಎಲ್ಲಿ ಇಡಬೇಕೋ ಅಲ್ಲೇ ಇಟ್ಟಿದ್ದಾರೆ. ಬೇಕಾದ್ರೆ ನೋಡಿ ನಾನು (ಹಿಂದಿನ ಬೆಂಚನ್ನು ತೋರಿಸುತ್ತಾ) ಕುಳಿತ ಸೀಟು… ಸಚಿವನಾಗಬೇಕೆಂಬ ಹಟ ನನಗೂ ಇಲ್ಲ, ಮನೆಯಲ್ಲೂ ಈ ಒತ್ತಾಯ
ಮಾಡುವವರಿಲ್ಲ.

* ಕೃಷಿ ಇಲಾಖೆ ಒಂದರಲ್ಲೇ ಎಂಟು ನಿಗಮ– ಮಂಡಳಿಗಳಿವೆ. ಸಚಿವ ಸ್ಥಾನ ಸಿಗದ ನಮ್ಮಂಥವರಿ­ಗಾಗಿಯೇ ಅವುಗಳ ಸೃಷ್ಟಿಯಾಗಿದೆ. ಅವುಗಳಿಂದ ರೈತರಿಗೆ ಏನೂ ಉಪಯೋಗವಿಲ್ಲ.

* ನೀವು(ವಿರೋಧ ಪಕ್ಷ) ಆನೆ ಆಗು ಎಂದರೂ ನಾನು ಆಗುವು­ದಿಲ್ಲ. ಆನೆಗೆ ಅಂಕುಶ ಹಾಕುವ ಮಾವು­­ತನಾಗಲು ಇಷ್ಟಪಡುತ್ತೇನೆ. ನಿಮ್ಮಲ್ಲಿ ಆನೆ­ಗಳ ಹಿಂಡೇ ಇದೆ. ನಮ್ಮಲ್ಲಿ ಸ್ಯಾಂಪಲ್‌ಗೆ ಕೆಲವು ಇವೆ.

* ನನಗೆ ಚುನಾವಣೆಯಲ್ಲಿ ಗೆದ್ದು ಬರುವುದೆಂದರೆ ಪುನರ್ಜನ್ಮ ಇದ್ದಂತೆ. ನಿಮಗೇನು ಗೊತ್ತು ನಮ್ಮ ಕ್ಷೇತ್ರದ ಕಷ್ಟ. ಜಗದೀಶ ಶೆಟ್ಟರ್‌, ಸುರೇಶಕುಮಾರ್‌ ಅವರಂಥವರ ಕ್ಷೇತ್ರಗಳಲ್ಲಿ ನೀರು, ವಿದ್ಯುತ್‌ ಕೊಟ್ಟರೆ ಸಾಕು, ಸಲೀಸಾಗಿ ಗೆದ್ದು ಬರ್ತಾರೆ. ಆದರೆ, ನಮ್ಮ ಒಣಭೂಮಿ ಜಿಲ್ಲೆಯಲ್ಲಿ ತರಾವರಿ ಸಮಸ್ಯೆ.

* ಸ್ವಾಮೀಜಿಗಳಿಗೆ ಫೋಟೊದಲ್ಲಿ ಗೋವಿನ ಪೂಜೆ ಮಾಡಿ ಬೇರೇನೂ ಗೊತ್ತಿಲ್ಲ. ಹಾಲು ಹಿಂಡಿಲ್ಲ, ಒದೆ ತಿಂದಿಲ್ಲ, ಗಂಜಲ ಬಳಿದಿಲ್ಲ. ಹಂದಿ ಸಾಕಾಣಿಕೆಗೆ ವಿರೋಧ ವ್ಯಕ್ತಪಡಿಸ್ತಾರೆ. ತಾವೂ ತಿನ್ನಂಗಿಲ್ಲ. ತಿನ್ನುವವರಿಗೂ ಕಾಟ ಕೊಡೋದು ಬಿಡಂಗಿಲ್ಲ. ಪುಗಸಟ್ಟೆ ಉಪದೇಶ ಕೊಡ್ತಾನೆ ಇರ್ತಾರೆ.

* ನಾವು ಐದು ಬಾರಿ ಎಂಎಲ್‌ಎಗಳಾದರೂ ಪ್ರಮೋಷನ್‌ ಇಲ್ಲ; ಇವರಿಗೆ (ಕೃಷಿ ಇಲಾಖೆ ಮತ್ತು ವಿವಿ ಸಿಬ್ಬಂದಿ) ಹತ್ತು ವರ್ಷ ಆದ ಕೂಡಲೇ ಪ್ರಮೋಷನ್ ಬೇಕು.

* ಕೃಷಿ ವಿವಿ ಪ್ರೊಫೆಸರ್‌ಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಾರೆ. ಅವರಿಗೆ ಕತ್ತಾಳೆ ಬೇಲಿಗೆ ಬದಲಿ ಬೇಲಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ; ಪಾರ್ಥೇನಿಯಂ, ಜಾಲಿ ನಿರ್ಮೂಲನೆಗೆ ಪರಿಹಾರ ಹುಡುಕಿಲ್ಲ.

* ಎಷ್ಟೊಂದು ವಿ.ವಿ.ಗಳು! ಯಾರನ್ನು ನೋಡಿದರೂ ಪ್ರೊಫೆಸರ್‌ಗಳು, ಅಸಿಸ್ಟೆಂಟ್‌ ಪ್ರೊಫೆಸರ್‌ಗಳು. ತಮ್ಮ ತಮ್ಮ ಉಪ ಜಾತಿಗೆ ವಿ.ಸಿ ಹುದ್ದೆ ಸಿಕ್ಕಿಲ್ಲ ಎಂದು ಅಳಲು ತೋಡಿಕೊಳ್ಳುವವರೆಷ್ಟು ಮಂದಿ. ಉಪ ಜಾತಿ ನೋಡಿ ವಿ.ಸಿ. ಹುದ್ದೆಗೆ ನೇಮಕ
ಮಾಡಲಾಗುತ್ತಿದೆಯೇ?

* ಈ ಕೃಷಿ ವಿ.ವಿಗಳನ್ನೆಲ್ಲ ತೆಗೆದುಹಾಕಿ, ಇಲಾಖೆಯನ್ನು ಆಮೂಲಾಗ್ರ ಬದಲಾವಣೆ ಮಾಡಿ, ಅನುತ್ಪಾದಕ ಹುದ್ದೆಗಳ ಕಾಟ ತಪ್ಪಿಸಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s