ಬಾಯಿ ಬಿಡದ ಶಾಸಕರಿಗೆ ಸ್ಪೀಕರ್ ಚಾಟಿ !

Posted: ಜೂನ್ 27, 2014 in Uncategorized

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಕೆಲ ಸದಸ್ಯರು ಬಾಯಿ ಬಿಡುತ್ತಿಲ್ಲ ಎಂದರೆ ಅದು ಅವರು ತಪ್ಪಲ್ಲ. ಬದಲಿಗೆ ಅವರಿಗೆ ಟಿಕೆಟ್ ನೀಡಿದ ರಾಜಕೀಯ ಪಕ್ಷ ಹಾಗೂ ಅವರನ್ನು ಆಯ್ಕೆ ಮಾಡಿದ ಜನರದ್ದಾಗಿದೆ. ಜನರ ಮಧ್ಯೆ ನಿಂತು ಆಯ್ಕೆಯಾದ ವ್ಯಕ್ತಿ ಜನನಾಯಕನಾಗಿ ತನ್ನ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆಂದು ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಜೂನ್ 26ರಂದು ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ರಿಸೋರ್ಸ್ ರೀಸರ್ಚ್ ಫೌಂಡೇಶನ್ ಶಾಸಕರ ಕಾರ್ಯ ಸಾಧನೆ ಕುರಿತು ವರದಿಯೊಂದನ್ನು ಸ್ವೀಕರಿಸಿದ ಬಳಿಕ ಅವರು ಮಾತನಾಡುತ್ತಿದ್ದರು.

ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಯಾರೋ ಒಬ್ಬರು ಬೇಕೆಂದು ಕರೆದುಕೊಂಡು ಬಂದು ಟಿಕೆಟ್ ಕೊಟ್ಟು ಗೆಲ್ಲಿಸಿದಂತಹ ಶಾಸಕರು ಹೇಗೆ ಬಾಯಿ ಬಿಡುತ್ತಾರೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು. ಯಾವುದೇ ಪಕ್ಷಕ್ಕೆ ಸೇರಿದ ಶಾಸಕರಿರಲಿ, ಕಲಾಪದಲ್ಲಿ ನಡೆಯುವ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಕ್ಷೇತ್ರಗಳು ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು. ಅಲ್ಲದೆ, ಬೇರೆ ಸದಸ್ಯರು ಹೇಳುವುದನ್ನು ಆಲಿಸಬೇಕು ಎಂದು ಕಾಗೋಡು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಆ ರೀತಿ ಅಧ್ಯಯನ ಮಾಡಿಕೊಂಡು ಸದನದ ಕಲಾಪಕ್ಕೆ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದ ಕಾಗೋಡು ತಿಮ್ಮಪ್ಪ, ಎಲ್ಲ ಸದಸ್ಯರಿಗೆ ಅಧ್ಯಯನಶೀಲ ಮನೋಭಾವ ಅತ್ಯಗತ್ಯ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ರಿಸೋರ್ಸ್ ರೀಸರ್ಚ್ ಫೌಂಡೇಷನ್ ಸಂಸ್ಥೆಯ ನಿರ್ದೇಶಕ ನರೇಂದ್ರ ಮತ್ತು ಮಾಜಿ ಸಚಿವ ಸುರೇಶ್‌ಕುಮಾರ್ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s