ವಿವಿಧೆಡೆ ಲೋಕಾಯುಕ್ತ ದಾಳಿ: ಆರು ಭ್ರಷ್ಟರ ಏಳು ಕೋಟಿ ರೂ. ಅಕ್ರಮ ಆಸ್ತಿ ಪತ್ತೆ

Posted: ಜೂನ್ 28, 2014 in Uncategorized

ಬೆಂಗಳೂರು: ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಬೆಂಗಳೂರು ನಗರ, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಗುಲ್ಬರ್ಗ, ತುಮಕೂರು ಹಾಗೂ ಯಾದಗಿರಿ ಜಿಲ್ಲೆಗಳ ಒಟ್ಟು 23 ಸ್ಥಳಗಳಲ್ಲಿ ದಿಢೀರ್ ದಾಳಿ ನಡೆಸಿ ಆರು ಮಂದಿ ಭ್ರಷ್ಟ ಅಧಿಕಾರಿಗಳ ಸುಮಾರು 7 ಕೋಟಿ ರೂ.ಗಳಿಗೂ ಅಧಿಕ ವೌಲ್ಯದ ಅಕ್ರಮ ಆಸ್ತಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇರ್ಶಾದ್ ಅಹ್ಮದ್ ಕಿತ್ತೂರ- ಸಹಾಯಕ ಎಂಜಿನಿಯರ್ ಬೆಳ ಗಾವಿ ಮಹಾನಗರ ಪಾಲಿಕೆ, ಹಾಲೇಶಪ್ಪ- ಸಹಾಯಕ ಎಂಜಿನಿಯರ್ ಬೆಂಗಳೂರು ನಿರ್ಮಾಣ ನಿಗಮ, ಪರಮೇಶ್ವರಪ್ಪ ಹುಚ್ಚಪ್ಪ ಗೌಡರ ವಿಭೂತಿ-ಪ್ರಭಾರ ಕಾರ್ಯದರ್ಶಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ಶಿವಪುತ್ರಪ್ಪ ಹಲಚೇರಿ ಕಚೇರಿ ಅಧೀಕ್ಷಕ ಗುಲ್ಬರ್ಗ ಗೃಹ ನಿರ್ಮಾಣ ನಿಗಮ ಗುಲ್ಬರ್ಗ. ಶರಣಬಸಪ್ಪ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಫಜಲಪುರ ತಾಲೂಕು ಪಂಚಾಯತ್ ರಾಜ್ ಗುಲ್ಬಗರ್, ಎ.ಸಿ.ಕೇಶವಮೂರ್ತಿ ವ್ಯವಸ್ಥಾಪಕ ನಿರ್ದೇಶಕ ಸರಕಾರಿ ಸಾಬೂನು-ಮಾರ್ಜಕ ಕಾರ್ಖಾನೆ ನಿಯಮಿತ ಬೆಂಗಳೂರು ಇವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿಗಳು.

ಇರ್ಶಾದ್ ಅಹ್ಮದ್ ಕಿತ್ತೂರ-ಸಹಾಯಕ ಎಂಜಿನಿಯರ್ ಬೆಳಗಾವಿ ಮಹಾ ನಗರ ಪಾಲಿಕೆ ಇವರು ಒಟ್ಟು 1.37 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಶೇ.247ರಷ್ಟು ಬೃಹತ್ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಲೋಕಾಯುಕ್ತ ಎಡಿಜಿಪಿ ಎಚ್.ಎನ್. ಸತ್ಯನಾರಾಯಣರಾವ್ ತಿಳಿಸಿದ್ದಾರೆ.

ಹಾಲೇಶಪ್ಪ-ಸಹಾಯಕ ಎಂಜಿನಿಯರ್ ಬೆಂ.ನಿರ್ಮಾಣ ನಿಗಮ ಇವರು ಒಟ್ಟು 63.84 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದು, ಶೇ.127ರಷ್ಟು ಪ್ರಮಾಣದ ಅಕ್ರಮ ಆಸ್ತಿ ಗಳಿಸಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ತಿಳಿಸಲಾಗಿದೆ. ಪರಮೇಶ್ವರಪ್ಪ ಹುಚ್ಚಪ್ಪಗೌಡರ ವಿಭೂತಿ-ಪ್ರಭಾರ ಕಾರ್ಯದರ್ಶಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಇವರು ಒಟ್ಟು 71.72 ಲಕ್ಷ ರೂ. ಮೊತ್ತದ ಶೇ.166ರಷ್ಟು ಬೃಹತ್ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿರುವುದು ಲೋಕಾಯುಕ್ತ ಪೊಲೀಸರ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.

ಶರಣಬಸಪ್ಪ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಫಜಲಪುರ ತಾಲೂಕು ಪಂಚಾಯತ್ ರಾಜ್ ಗುಲ್ಬರ್ಗ ಇವರು ಒಟ್ಟು 57.43 ಲಕ್ಷ ರೂ. ಮೊತ್ತದ ಶೇ.171ರಷ್ಟು ಬೃಹತ್ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿರುವುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಸತ್ಯ ನಾರಾಯಣರಾವ್ ತಿಳಿಸಿದ್ದಾರೆ.

ಶಿವಪುತ್ರಪ್ಪ ಹಲಚೇರಿ ಕಚೇರಿ ಅಧೀಕ್ಷಕ ಗುಲ್ಬರ್ಗ ಗೃಹ ನಿರ್ಮಾಣ ಗುಲ್ಬರ್ಗ ಇವರು ಒಟ್ಟು 81.80 ಲಕ್ಷ ರೂ.ಮೊತ್ತದ ಶೇ.146ರಷ್ಟು ಪ್ರಮಾಣದ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. ಎ.ಸಿ.ಕೇಶವಮೂರ್ತಿ ವ್ಯವಸ್ಥಾಪಕ ನಿರ್ದೇಶಕ ಕರ್ನಾಟಕ ಸಾಬೂನು ಕಾರ್ಖಾನೆ ಬೆಂ. ಇವರು 73.32 ಲಕ್ಷ ರೂ.ಮೊತ್ತದ ಶೇ. 278ರಷ್ಟು ಪ್ರಮಾಣದ ಬೃಹತ್ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಮೇಲ್ಕಂಡ ಆರು ಮಂದಿ ಅಧಿಕಾರಿಗಳ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿ ಕೊಳ್ಳಲಾಗಿದೆ. ಅಲ್ಲದೆ, ಅವರೆಲ್ಲರ ಬ್ಯಾಂಕ್ ಖಾತೆಗಳು ಮತ್ತು ಲಾಕರ್‌ಗಳ ಶೋಧನೆ ಹಾಗೂ ದಾಖಲೆಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತ ಎಡಿಜಿಪಿ ಸತ್ಯ ನಾರಾಯಣ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s