ಆಡಳಿತ ನಡೆಸಲು ರಾಹುಲ್‌ ಅಸಮರ್ಥ: ದಿಗ್ವಿಜಯ ಸಿಂಗ್

Posted: ಜೂನ್ 29, 2014 in Uncategorized

ನವದೆಹಲಿ: ‘ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆಡಳಿತ ನಡೆಸಲು ಸೂಕ್ತ­ವಾದ ವ್ಯಕ್ತಿಯಲ್ಲ. ಅವರೇನಿದ್ದರೂ ಅನ್ಯಾಯದ ವಿರುದ್ಧ ಸಿಡಿದೇಳುವ ಹೋರಾಟಗಾರ’ ಎಂದು ಹೇಳುವ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್‌ ವಿವಾದದ ಬಾಂಬ್‌ ಸಿಡಿಸಿದ್ದಾರೆ.

ಕಾಂಗ್ರೆಸ್‌ ತನ್ನ ತಪ್ಪುಗಳನ್ನು ಸರಿ­ಪಡಿಸಿ­ಕೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ಸಿಗ ಎ.ಕೆ. ಆಂಟನಿ ಕಟುವಾಗಿ ಹೇಳಿದ್ದಾರೆ. ಹಿರಿಯ ಮುಖಂಡರಿಬ್ಬರ ಈ ಹೇಳಿಕೆ­ಗಳು ಪಕ್ಷದಲ್ಲಿ ಬಿಸಿ ಚರ್ಚೆಗೆ ಕಾರಣ­ವಾಗಲಿವೆ ಎಂದು ಮಾತು ಕೇಳಿಬರು­ತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಅನು­ಭವಿಸಿದ ಬಳಿಕ ರಾಹುಲ್‌ ನಾಯಕತ್ವ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿ­ರುವ ಬೆನ್ನಲ್ಲೇ ದಿಗ್ವಿಜಯ ಹೇಳಿಕೆ ಹೊರಬಿದ್ದಿದೆ.

ಗೋವಾದ ಟಿವಿ ಚಾನಲ್‌ವೊಂದಕ್ಕೆ ಅವರು ಶುಕ್ರವಾರ ನೀಡಿರುವ ಈ ಸಂದರ್ಶನ ಶನಿವಾರ ಪ್ರಸಾರವಾದ ಬಳಿಕ ಕಾಂಗ್ರೆಸ್‌ ವಲಯಗಳಲ್ಲಿ ಗಲಿಬಿಲಿ ಉಂಟಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕತ್ವ­ವನ್ನು ರಾಹುಲ್‌ ಅವರೇ ವಹಿಸಿ­ಕೊಳ್ಳಬೇಕೆಂದು ದಿಗ್ವಿಜಯ್‌ ಮತ್ತೆ ಸಲಹೆ ಮಾಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಕೆಳಮನೆಯಲ್ಲಿ ಪಕ್ಷದ ನಾಯ­ಕತ್ವ ವಹಿಸಿಕೊಳ್ಳಲು ಹಿಂಜರಿದ ನಂತರ ಆ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಕ ಮಾಡ­ಲಾಗಿದೆ.

‘ಲೋಕಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಒಪ್ಪಿಕೊಂಡು ಪಕ್ಷ ಮುನ್ನಡೆಸುವಂತೆ ಸಲಹೆ ಮಾಡಿದ್ದೆ. ಆದರೆ, ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸ್ಥಾನ ಬಿಟ್ಟುಕೊಡಲಾಯಿತು’ ಎಂದು ರಾಹುಲ್‌ ಅವರ ರಾಜಕೀಯ ಗುರು ಎಂದೇ ಗುರುತಿಸಲಾಗುವ ದಿಗ್ವಿಜಯ ಸಿಂಗ್‌ ಹೇಳಿದ್ದಾರೆ.

ರಾಹುಲ್‌ ಗಾಂಧಿ ಅನ್ಯಾಯದ ವಿರುದ್ಧ ಸಿಡಿದೇಳುವ ಗುಣಧರ್ಮ ಹೊಂದಿ­ರುವ ಬಂಡಾಯಗಾರ. ಕೆಲ­ವರು ಅಧಿಕಾರಕ್ಕಾಗಿ ಅನುಕೂಲ­ಸಿಂಧು ರಾಜಕಾರಣ ಮಾಡುತ್ತಿರುವು­ದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಾವು ನಮ್ಮ ವಿಚಾರಗಳನ್ನು ಜನರಿಗೆ ಮುಟ್ಟಿಸುವಲ್ಲಿ ಸೋತಿದ್ದೇವೆ. ಈ ಕೆಲಸವನ್ನು ಮನ­ಮೋಹನ್‌ಸಿಂಗ್‌ ಮಾಡ­ಬೇಕಿತ್ತು. ಅದರಲ್ಲಿ ಅವರು ವಿಫಲ­ರಾದರು. ಸಿಂಗ್‌ ತಮ್ಮ ಸಾಧನೆ­ಗಳನ್ನು ಕುರಿತು ಡಂಗುರ ಬಾರಿಸಲಿಲ್ಲ, ಮೋದಿ ಅದನ್ನು ಯಶಸ್ವಿ­ಯಾಗಿ ಮಾಡಿದರು’ ಎಂದು ವಿಶ್ಲೇಷಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s