ಓಲೈಕೆಯಿಂದ ಕಾಂಗ್ರೆಸ್‌ಗೆ ಹಿನ್ನಡೆ: ಆಂಟನಿ

Posted: ಜೂನ್ 29, 2014 in Uncategorized

ತಿರುವನಂತಪುರ: ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್‌ಗೆ ಅತಿಯಾದ ಒಲವು ಎಂಬ ಭಾವನೆ ಸಮಾಜದ ಒಂದು ವರ್ಗದ­ಲ್ಲಿದೆ. ಇದರಿಂದ ಪಕ್ಷದ ಜಾತ್ಯತೀತ ನಿಲುವಿನ ಬಗ್ಗೆ ಜನರಲ್ಲಿನ ನಂಬಿಕೆಗೆ ಧಕ್ಕೆ ಬಂದಿದೆ. ಈ ನಂಬಿಕೆಯನ್ನು ಮತ್ತೆ ಗಳಿಸಿ­ಕೊಳ್ಳ­ಬೇಕಿದೆ ಎಂದು ಹಿರಿಯ ಮುಖಂಡ ಎ.ಕೆ. ಆಂಟನಿ ಹೇಳಿದರು.

ಅಲ್ಪಸಂಖ್ಯಾತ ಸಮುದಾಯ ಮತ್ತು ಸಂಘಟನೆಗಳನ್ನು ಅತಿಯಾಗಿ ಓಲೈ­ಸಿದ್ದರಿಂದ ಬೇರೆಯವರು ಕಾಂಗ್ರೆಸ್‌ ಪಕ್ಷದ ಜಾತ್ಯತೀತ ನಿಲು­ವನ್ನು ಸಂಶಯದಿಂದ ನೋಡಿದರು ಎಂದು
ವ್ಯಾಖ್ಯಾನಿಸಿದರು.

ಲೋಕಸಭೆ ಚುನಾ-­ವಣೆ­ಯಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣಗಳನ್ನು ಹುಡುಕಲು ಹೈಕ­ಮಾಂಡ್‌ ಆಂಟನಿ ಸಮಿತಿಯನ್ನು ನೇಮಿಸಿದೆ. ಅವರು ಶುಕ್ರವಾರ ತಿರುವ­ನಂತ­ಪುರದ ಪಕ್ಷದ ಕಚೇರಿಯಲ್ಲಿ ಹಿರಿಯ ಧುಋಈಣ ಸಿ.ಕೆ. ಗೋವಿಂ­ದನ್‌ ನಾಯರ್‌ ಸ್ಮರಣಾರ್ಥ ಏರ್ಪ­ಡಿಸಿದ್ದ ಸಮಾರಂಭದಲ್ಲಿ ಮಾತನಾ­ಡಿದರು.

ಎಲ್ಲರಿಗೂ ‘ಸಮಾನ ನ್ಯಾಯ’ ಎನ್ನುವುದು ಕಾಂಗ್ರೆಸ್‌ ನೀತಿ. ಆದರೆ, ಅಲ್ಪಸಂಖ್ಯಾತ ಸಮುದಾಯವನ್ನು ಅತಿಯಾಗಿ ಓಲೈಸಿದ್ದರಿಂದ ಈ ನೀತಿ ಜಾರಿ­ಯಾಗುವುದೇ ಎಂಬ ಅನುಮಾನ ಉಳಿದ ಸಮುದಾಯಗಳನ್ನು ಕಾಡಿತು. ಈ ಕಾರಣದಿಂದ ಕೇರಳದಂಥ ಜಾತ್ಯ­ತೀತ ರಾಜ್ಯಕ್ಕೂ ಮತೀಯ ಶಕ್ತಿ ಪ್ರವೇ­ಶಿಸಲು ಅವಕಾಶ ನೀಡಿತು ಎಂದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s