ನಕ್ಸಲರ ಕುರಿತು ಕೇಂದ್ರ ಮಂತ್ರಿ ರಾಜನಾಥ್ ಹೇಳಿಕೆಗೆ ಬಿಹಾರ ಸಿಎಂ ಮಾಂಝಿ ವಿರೋಧ

Posted: ಜೂನ್ 29, 2014 in Uncategorized

ಪಾಟ್ನಾ: ಮಾವೊ ವಾದಿಗಳೊಂದಿಗೆ ಸಂಧಾನವಿಲ್ಲ. ಅವರು ದಾಳಿ ನಡೆಸಿದರೆ ಸರಿಯಾದ ಉತ್ತರ ನೀಡಲಾಗುವುದೆಂಬ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗರ ಮಾತನ್ನು ತಾನು ಒಪ್ಪುವುದಿಲ್ಲವೆಂದು ಬಿಹಾರದ ಮುಖ್ಯಮಂತ್ರಿ ಜಿತನ್‌ರಾಮ್ ಮಾಂಝಿ ಇಂದು ಹೇಳಿದ್ದಾರೆ.

ಅವರು ಹೇಳಿದುದಕ್ಕೆ ಸೈದ್ಧಾಂತಿಕವಾಗಿ ತನ್ನ ವಿರೋಧವಿದೆ. ನಕ್ಸಲ್ ವಾದವನ್ನು ಬಂದೂಕಿನಿಂದ ಪರಿಹರಿಸಲಾಗದು. ಅವರ ಹಿಂದಿನ ಮುಖ್ಯ ಕಾರಣವನ್ನು ನಾವು ತಿಳಿಯಬೇಕು. ಸಮಾಜದ ಸರ್ವತೋಮುಖ ಅಭಿವೃದ್ಧಿಯೇ ಅದಕ್ಕಿರುವ ಏಕೈಕ ಪರಿಹಾರವೆಂದು ಅವರು ಪತ್ರಕರ್ತರೊಡನೆ ಅಭಿಪ್ರಾಯಿಸಿದರು.

ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಕೊರತೆಯಿಂದ ಉಂಟಾಗಿರುವ ನಿರಾಶೆ ಹಾಗೂ ದುರ್ಬಲ ವರ್ಗದವರಿಗೆ ನ್ಯಾಯ ದೊರಕದಿರುವುದು ನಕ್ಸಲ್‌ವಾದಕ್ಕೆ ಕಾರಣವಾಗಿದೆ. ಅದಕ್ಕೆ ಉತ್ತರವು ಕೇವಲ ಅಭಿವೃದ್ಧಿಯಲ್ಲಿದೆಯೆಂದು ಮಾಂಝಿ ಹೇಳಿದರು.

ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದಲ್ಲಿ ಮಾವೋವಾದಿಗಳ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದರು. ಅದನ್ನು ನಿವಾರಿಸಲು ಅವರು ಉಪೇಕ್ಷಿತ ವರ್ಗಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರೆಂದು ಅವರು ಪ್ರತಿಪಾದಿಸಿದರು.

ಈ ನೀತಿಯು ನಿಜವಾಗಿಯೂ ಸಹಾಯ ಮಾಡಿತ್ತು. ಈಗ ರಾಜ್ಯದಲ್ಲಿ ಪರಿಸ್ಥಿತಿ ಎಷ್ಟು ಬದಲಾಗಿದೆಯೆಂದರೆ, ಮಾವೋವಾದಿ ಸೋದರರು ತಮ್ಮಿಡನೆ ಸೇರಿಸಿಕೊಳ್ಳಲು ಹೊಸಬರಿಗಾಗಿ ಕಷ್ಟಪಟ್ಟು ಹುಡುಕುವಂತಾಗಿದೆ. ಯುವಕರು ಅವರನ್ನು ಸೇರ ಬಯಸುತ್ತಿಲ್ಲ. ನಾವು ಅಭಿವೃದ್ಧಿಯನ್ನು ಬಡವರ ಗುಡಿಸಲುಗಳಿಗೊಯ್ದರೆ ಅದರಿಂದ ನಕ್ಸಲ್‌ವಾದ ಖಂಡಿತವಾಗಿ ಅಂತ್ಯಗೊಳ್ಳುತ್ತದೆಂದು ಮಾಂಝಿ ಹೇಳಿದರು.

ಮಾವೊ ವಾದಿಗಳೊಂದಿಗೆ ಸಂಧಾನ ನಡೆಸುವುದಿಲ್ಲ. ಅವರು ದಾಳಿಗಳನ್ನು ನಡೆಸಿದಲ್ಲಿ ಭದ್ರತಾ ಪಡೆಗಳು ತಕ್ಕ ಉತ್ತರ ನೀಡಲಿವೆ ಎಂದು ನಿನ್ನೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಘೋಷಿಸಿದ್ದು, ಈ ಪಿಡುಗನ್ನು ನಿಭಾಯಿಸಲು ರಾಜ್ಯಗಳಲ್ಲಿ ಉನ್ನತ ಕಮಾಂಡೊ ಪಡೆಗಳನ್ನು ರಚಿಸಲು ಸರಕಾರ ಸಂಪೂರ್ಣ ನಿಧಿಯನ್ನು ಒದಗಿಸಲಿದೆ ಎಂದಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s