ವ್ಯಾಪಂ ಹಗರಣ: ಆರ್‌ಎಸ್‌ಎಸ್‌ ನಾಯಕರು ಶಾಮೀಲು ?

Posted: ಜೂನ್ 29, 2014 in Uncategorized

ಭೋಪಾಲ: ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾನ್‌ ನಿದ್ದೆಗೆಡಿಸಿರುವ ವೃತ್ತಿಪರ ಪರೀಕ್ಷಾ ಮಂಡಳಿ (ವ್ಯಾಪಂ) ಹಗರಣಕ್ಕೆ ಕೆಲವು ಆರ್‌ಎಸ್‌ಎಸ್‌ ನಾಯಕರ ಹೆಸರು ತಳಕು ಹಾಕಿಕೊಂಡಿದೆ.

ಮಧ್ಯ ಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ ವಿವಿಧ ಸರಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಪರೀಕ್ಷೆಯಲ್ಲಿ ಕೆಲವು ಆರ್‌ಎಸ್‌ಎಸ್‌ ನಾಯಕರು ತಮ್ಮವರ ಪರವಾಗಿ ಶಿಫಾರಸು ಮಾಡುವ ಮೂಲಕ ಸ್ವಜನ ಪಕ್ಷಪಾತ ಮಾಡಿದ್ದಾರೆ ಎನ್ನಲಾಗಿದೆ.

ಮಿಹಿರ್‌ ಕುಮಾರ್‌ ಎಂಬವರನ್ನು ಆಹಾರ ನಿರೀಕ್ಷಕನನ್ನಾಗಿ ನೇಮಿಸಲು ಮಾಜಿ ಉನ್ನತ ಶಿಕ್ಷಣ ಸಚಿವ ಲಕ್ಷ್ಮಿಕಾಂತ್‌ ಶರ್ಮ ಶಿಫಾರಸು ಮಾಡಿದ್ದರು. ಮಿಹಿರ್‌ ಆರ್‌ಎಸ್‌ಎಸ್‌ ನಾಯಕ ಸುರೇಶ್‌ ಸೋನಿ ಕಡೆಯ ವ್ಯಕ್ತಿಯಾಗಿದ್ದರು. ಹಗರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಮಿಹಿರ್‌ ತಾನು ಹಿಂದೆ ಆರ್‌ಎಸ್‌ಎಸ್‌ ಮುಖ್ಯಸ್ಥ ಕೆ. ಸಿ. ಸುದರ್ಶನ್‌ಗೆ ಸಹಾಯಕನಾಗಿದ್ದ ಸಂಗತಿಯನ್ನು ತಿಳಿಸಿದ್ದಾರೆ.

ಸುದರ್ಶನ್‌ ಸೂಚನೆಯಂತೆ ಮಿಹಿರ್‌ಗೆ ಅರ್ಜಿಯನ್ನು ಕೊಟ್ಟಿದ್ದರು. ಪರೀಕ್ಷೆಯಲ್ಲಿ ಮಿಹಿರ್‌ 7ನೇ ರ್‍ಯಾಂಕ್‌ ಗಳಿಸಿದ್ದರು. ಇತ್ತೀಚೆಗೆ ಮಧ್ಯ ಪ್ರದೇಶ ಸ್ಥಳೀಯ ನಿಧಿ ಲೆಕ್ಕಪರಿಶೋಧನಾ ಇಲಾಖೆ 200708ರಲ್ಲಿ ನೇಮಕಾತಿಗಾಗಿ ನಡೆದ ಪರೀಕ್ಷೆಯ ಪರಿಶೋಧನೆ ನಡೆಸಿದಾಗ ಅವ್ಯವಹಾರ ಬೆಳಕಿಗೆ ಬಂದಿದೆ. ಹಗರಣದಲ್ಲಿ ಚೌಹಾನ್‌ ಮತ್ತು ಅವರ ಪತ್ನಿ ಸಾಧನಾ ಶಾಮೀಲಾಗಿರುವ ಆರೋಪವಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s