ಸಿಎಂ ಆಕಾಶಯಾನಕ್ಕೆ 10.19 ಕೋಟಿ ರೂ. ವ್ಯಯ !

Posted: ಜೂನ್ 29, 2014 in Uncategorized

* ವೈ ಗ ಜಗದೀಶ್ ಬೆಂಗಳೂರು
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ 9 ತಿಂಗಳಲ್ಲಿ ವೈಮಾನಿಕ ಹಾರಾಟಕ್ಕೆ 10.19 ಕೋಟಿ ರೂ. ಖರ್ಚು ಮಾಡಿದ್ದಾರೆ.

ಮುಖ್ಯಮಂತ್ರಿಯ ಹೊರ ರಾಜ್ಯಗಳ ಪ್ರಯಾಣಕ್ಕೆ ವಿಶೇಷ ವಿಮಾನ ಬಳಸಿಕೊಳ್ಳುವ ಅವಕಾಶವಿದ್ದು, ರಾಜ್ಯವ್ಯಾಪಿ ಪ್ರಯಾಣಿಸಲು ಮಾಸಿಕ ಬಾಡಿಗೆ ಆಧಾರದ ಮೇಲೆ
ಹೆಲಿಕಾಪ್ಟರ್ ಗೊತ್ತು ಮಾಡಲಾಗುತ್ತದೆ. ಸಿದ್ದರಾಮಯ್ಯ ಅವರು 2013ರ ಮೇ 13ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಲೋಕಸಭೆ ಚುನಾವಣೆ
ಘೋಷಣೆಯಾಗುವವರೆಗೆ, ಅಂದರೆ 2014ರ ಮಾ.5ರವರೆಗೆ 10.19 ಕೋಟಿ ಖರ್ಚು ಮಾಡಿದ್ದಾರೆ.

ಆರ್‌ಟಿಐ ಕಾರ್ಯಕರ್ತ ಎಸ್ ಭಾಸ್ಕರನ್ ಅವರು ಮಾಹಿತಿ ಹಕ್ಕು ಕಾಯಿದೆ ಅಡಿ ಪಡೆದ ದಾಖಲೆ ಇದನ್ನು ದೃಢಪಡಿಸಿದೆ. ಯಡಿಯೂರಪ್ಪ ಅವರು 3 ವರ್ಷ 3 ತಿಂಗಳಲ್ಲಿ 42.26 ಕೋಟಿ ರೂ., ಸದಾನಂದಗೌಡರು 11 ತಿಂಗಳಲ್ಲಿ 12.78 ಕೋಟಿ ರೂ. ಜಗದೀಶ್ ಶೆಟ್ಟರ್ 10 ತಿಂಗಳ ಅವಧಿಯಲ್ಲಿ 13.77 ಕೋಟಿ ರೂ. ಖರ್ಚು ಮಾಡಿದ್ದನ್ನು ಈ ಹಿಂದೆ ವಿಕ ವರದಿ ಮಾಡಿತ್ತು.

2013ರ ಮೇ 17ರಿಂದ 2014ರ ಮೇ 16ರವರೆಗಿನ ಮಾಹಿತಿ ಎಂದು ಸರಕಾರದ ಇಲಾಖೆ ದಾಖಲೆ ಒದಗಿಸಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ 2 ತಿಂಗಳು 11 ದಿನ ಸರಕಾರಿ ಬೊಕ್ಕಸದಿಂದ ಅವರ ವೈಮಾನಿಕ ವೆಚ್ಚ ಬಳಸಲು ಬರುವುದಿಲ್ಲ.

ತಿಂಗಳಿಗೆ 91 ಲಕ್ಷ ಹೆಲಿಕಾಪ್ಟರ್ ಬಾಡಿಗೆ: ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸಂಚರಿಸಲು ಖಾಸಗಿ ಹೆಲಿಕಾಪ್ಟರ್‌ಗೆ ಮಾಸಿಕ ಬಾಡಿಗೆಯಲ್ಲಿ ಸುಮಾರು 90.50 ಲಕ್ಷ ರೂ. ವ್ಯಯ ಮಾಡಿದ್ದಾರೆ. ಅಧಿಕೃತ ಕಾರ್ಯಕಲಾಪಕ್ಕಾಗಿ 30-31 ದಿನಗಳ ಅವಧಿಗೆ ಹೆಲಿಕಾಪ್ಟರ್ ಬಾಡಿಗೆ ಎಂದು ಲೆಕ್ಕದಲ್ಲಿ ನಮೂದಾಗಿದೆ.

2014ರ ಫೆಬ್ರವರಿಯಲ್ಲಿ ಮಾಸಿಕ ಬಾಡಿಗೆ 90.99 ಲಕ್ಷ ರೂ. ಪಾವತಿಸಿಸಲಾಗಿದೆ. ಬೆಳಗಾವಿ, ಹುಬ್ಬಳ್ಳಿಗೆ ತೆರಳಲು ಹೆಚ್ಚುವರಿ ಹಣ ಪಾವತಿಸಲಾಗಿದೆ.

ಫೆ.14-15ರಂದು ಹುಬ್ಬಳ್ಳಿ-ಬೆಳಗಾವಿ ಪ್ರವಾಸಕ್ಕೆ 7.70 ಲಕ್ಷ ರೂ., ಫೆ.22ರಂದು 5.03 ಲಕ್ಷ ರೂ. ಪಾವತಿ ಮಾಡಲಾಗಿದೆ. ಮಾರ್ಚ್ 2-3ರಂದು ಹುಬ್ಬಳ್ಳಿಗೆ ಹೋಗಲು 5.03 ಲಕ್ಷ ರೂ. ವಿನಿಯೋಗಿಸಲಾಗಿದೆ. ಮಾ.1ರಿಂದ 5ರವರೆಗೆ 16.28 ಲಕ್ಷ ರೂ. ಖರ್ಚು ಮಾಡಲಾಗಿದೆ. ಅಲ್ಲಿಗೆ ಮಾ.1ರಿಂದ 5ರವರೆಗಿನ 5 ದಿನಗಳ ಓಡಾಟಕ್ಕೆ 21.33ಲಕ್ಷ ರೂ. ಖರ್ಚಾಗಿದೆ.

ವಿಮಾನ ಹಾರಾಟ

ಸಿದ್ದರಾಮಯ್ಯ, ದಿಲ್ಲಿಗೆ ಹೋಗಲು ವಿಶೇಷ ವಿಮಾನ ಬಳಸಿದ್ದರು. ಮುಖ್ಯಮಂತ್ರಿಯಾಗುತ್ತಿದ್ದಂತೆ ಹೈಕಮಾಂಡ್ ಭೇಟಿಯಾಗಲು ಮಾ.17ರಂದು ದಿಲ್ಲಿಗೆ ತೆರಳಿದ್ದ ಅವರು, ಸ್ನೇಹಿತ ಮೃತಪಟ್ಟ ಸುದ್ದಿ ತಿಳಿದು ಮೈಸೂರಿಗೆ ಹೋಗಿ ನಂತರ ಬೆಂಗಳೂರಿಗೆ ವಾಪಸ್ ಆಗಿದ್ದರು. ಇದಕ್ಕಾಗಿ 15.58 ಲಕ್ಷ ರೂ. ಖರ್ಚಾಗಿದೆ. ತಮಿಳುನಾಡಿನ ಥೇಣಿಯಲ್ಲಿನ ಅಭಿನಂದನಾ ಸಮಾರಂಭಕ್ಕೆ ವಿಶೇಷ ವಿಮಾನದಲ್ಲಿ ತೆರಳಲು 4.04 ಲಕ್ಷ ರೂ. ಖರ್ಚು ಮಾಡಿದ್ದಾರೆ.

2013ರ ಆಗಸ್ಟ್ 24ರಂದು ಧಾರವಾಡ, 31ರಂದು ಗುಲ್ಬರ್ಗದಲ್ಲಿ ಉಚ್ಚನ್ಯಾಯಾಲಯದ ಕಾಯಂ ಪೀಠ ಉದ್ಘಾಟನೆಗೆ ನ್ಯಾಯಮೂರ್ತಿಗಳು, ಗಣ್ಯರನ್ನು ಕರೆದೊಯ್ಯಲು 60 ಸೀಟು ಸಾಮರ್ಥ್ಯ ಇರುವ ಸ್ಪೈಸ್ ಜೆಟ್ ವಿಮಾನದ ಎರಡು ದಿನಗಳ ಬಾಡಿಗೆಗಾಗಿ 28.25 ಲಕ್ಷ ರೂ. ಖರ್ಚಾಗಿದೆ.

ಬೆಳಗಾವಿಗೆ ಪ್ರಯಾಣಿಸಲು 6-8 ಸೀಟಿನ ವಿಶೇಷ ವಿಮಾನವನ್ನು ಎರಡು ಬಾರಿ ಬಳಸಿದ್ದಾರೆ. ಒಮ್ಮೆ 11.61 ಲಕ್ಷ , ಮಗದೊಮ್ಮೆ 5.69 ಲಕ್ಷ ರೂ. ಖರ್ಚು ಮಾಡಲಾಗಿದೆ. ಕೊಯಮುತ್ತೂರಿಗೆ ವಿಶೇಷ ವಿಮಾನದಲ್ಲಿ ಹೋಗಲು 4.04 ಲಕ್ಷ ರೂ. ವ್ಯಯ ಮಾಡಿದ್ದರೆ, ಬೀದರ್‌ಗೆ ಹೋಗಿ ಬರಲು 5.87 ಲಕ್ಷ ರೂ. ಖರ್ಚಾಗಿದೆ. ಸೊಲ್ಲಾಪುರಕ್ಕೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಿದಕ್ಕೆ 5.39 ಲಕ್ಷ ರೂ. ಖರ್ಚು ಮಾಡಲಾಗಿದೆ. ಇದಲ್ಲದೇ ಒಮ್ಮೆ ಚೀನಾಕ್ಕೆ, ನಾನಾ ಬಾರಿ ದಿಲ್ಲಿಗೆ ಪ್ರಯಾಣಿಸಿದ ಖರ್ಚು ಎಷ್ಟೆಂಬ ಲೆಕ್ಕ ಸಿಕ್ಕಿಲ್ಲ.

ಬಿಜೆಪಿ ಸರಕಾರದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳ ವಿಮಾನ ಹಾರಾಟಕ್ಕೆ 68.81 ಕೋಟಿ ರೂ. ಖರ್ಚಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ಅಡೆತಡೆಯಿಲ್ಲದೇ ಎರಡು ಗಂಟೆಯಲ್ಲಿ ಮೈಸೂರಿಗೆ ಹೋಗುವ ಸೌಲಭ್ಯವಿದ್ದರೂ, ಹೆಲಿಕಾಪ್ಟರ್ ಬಳಸಿ ಅನಗತ್ಯ ವೆಚ್ಚ ಮಾಡಿದ್ದಾರೆ. ಸಾರ್ವಜನಿಕರ ದುಡ್ಡನ್ನು ಪೋಲು ಮಾಡುವುದರಲ್ಲಿ ಬಿಜೆಪಿ ಮುಖ್ಯಮಂತ್ರಿಗಳಿಗೆ ಪೈಪೋಟಿ ನೀಡುತ್ತಿದ್ದಾರೆ. ಇಂತಹ ದುಂದು ವೆಚ್ಚವನ್ನು ಅವರಿಂದ ನಿರೀಕ್ಷಿಸಿರಲಿಲ್ಲ -ಎಸ್. ಭಾಸ್ಕರನ್, ಆರ್‌ಟಿಐ ಕಾರ್ಯಕರ್ತ. (ಕೃಪೆ: ವಿಜಯ ಕರ್ನಾಟಕ, 29.06.20140

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s