ಚೀನಾದಿಂದ ಮತ್ತೆ ಅತಿಕ್ರಮಣ ಯತ್ನ ?

Posted: June 30, 2014 in Uncategorized

ಲೇಹ್‌/ನವದೆಹಲಿ: ಲಡಾಖ್‌ ಭೂ ಪ್ರದೇಶವನ್ನು ಅತಿಕ್ರಮಿಸಿದ್ದ ಪ್ರಕರಣ ಮರೆಯುವ ಮುನ್ನವೇ ಚೀನಾ ಮತ್ತೊಮ್ಮೆ ಭಾರತದ ಜಲಗಡಿಯನ್ನು ಉಲ್ಲಂಘಿ­ಸುವ ದುಸ್ಸಾಹಸಕ್ಕೆ ಕೈ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲಡಾಖ್‌ನ ಪಾಂಗಾಂಗ್‌ ಸರೋವರದ ಮೂಲಕ ಭಾರತದ ಜಲ­­ಗಡಿಯನ್ನು ಪ್ರವೇ­ಶಿಸಲು ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) ಯೋಧರು ಹಲ­ವಾರು ಬಾರಿ ನಡೆಸಿದ ಯತ್ನಗಳನ್ನು ಭಾರ­ತೀಯ ಯೋಧರು ವಿಫಲಗೊಳಿ­ಸಿದ್ದಾರೆ.

ಇದೇ 27ರಂದು (ಶುಕ್ರವಾರ) ಈ ಘಟನೆ ನಡೆದಿದೆ ಎಂಬ ವರದಿಗಳು ವಿವಿಧ ಸರ್ಕಾರಿ ಸಂಸ್ಥೆಗಳನ್ನು ತಲುಪಿವೆ. ಆದರೆ, ಘಟನೆಯ ಸತ್ಯಾಸತ್ಯತೆ ಪರಿಶೀಲಿಸಲು ನಡೆಸಿದ ಯತ್ನಗಳು ಯಾವುದೇ ಫಲ ನೀಡಲಿಲ್ಲ. ಈ ಕುರಿತು ಪ್ರತಿಕ್ರಿಸಲು ನಿರಾಕರಿಸಿದ ಉಧಮ್‌ಪುರನ ಸೇನಾ ನೆಲೆಯ ಅಧಿಕಾರಿಗಳು ಸೇನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ಸಂಪರ್ಕಿಸುವಂತೆ ಸೂಚಿಸಿದರು. ಅವರನ್ನು ಸಂಪರ್ಕಿಸುವ ಯತ್ನಗಳು ವಿಫಲವಾದವು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s