ಮೋದಿ ಸರಕಾರದ ಹೊಸ ರುಚಿ

Posted: ಜೂನ್ 30, 2014 in Uncategorized

# ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದು ಒಂದು ತಿಂಗಳಷ್ಟೇ ಆಗಿದೆ. ಅವರು ಈಗಾಗಲೇ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರಲು ವ್ಯವಸ್ಥೆ ಮಾಡುತ್ತಿದ್ದಾರೆ. ನೇರವಾಗಿ ತರಲು ಸಾಧ್ಯವಿಲ್ಲದ ಕಾರಣ, ಸ್ವಿಸ್ ಬ್ಯಾಂಕಿಗೆ ಕನ್ನ ಹಾಕುವುದೇ ಭಾರತಕ್ಕಿರುವ ಒಂದೇ ಒಂದು ದಾರಿಯಾಗಿರುವುದರಿಂದ ಈಗಾಗಲೇ ನುರಿದ ದರೋಡೆಕೋರರಿಗೆ ತರಬೇತಿ ನೀಡಲು ಆರಂಭವಿಸಿದ್ದಾರೆ. ಸ್ವಿಸ್ ಬ್ಯಾಂಕಿನ ಗೋಡೆ ಒಡೆದು, ತಿಜೋರಿ ಮುರಿದು ಇನ್ನೇನು ಅಲ್ಲಿಂದ ಹಣ ತರುವವರಿದ್ದಾರೆ. ಆದುದರಿಂದ ಅಲ್ಲಿಯವರೆಗೆ ನಮ್ಮ ಜನರು ಒಂದಿಷ್ಟು ಸಹನೆಯಿಂದ ದೇಶಪ್ರೇಮವನ್ನು ಪ್ರದರ್ಶಿಸಬೇಕು. ಈಗಾಗಲೇ ದಿನಸಿಗಳ ಬೆಲೆ ಜಾಸ್ತಿಯಾಗಿದೆ. ಆದುದರಿಂದ ಬಡವರಿಗೆ ಅಡುಗೆ ಮಾಡಲು ತೊಂದರೆಯಾಗಬಹುದು ಎನ್ನುವುದನ್ನು ಗುರುತಿಸಿ ಸರಕಾರ, ಸುಲಭವಾಗಿ ಯಾವುದೇ ಖರ್ಚಿಲ್ಲದೆ ಹೇಗೆ ರುಚಿರುಚಿಯಾದ ಅಡುಗೆಯನ್ನು ಮಾಡಬಹುದು ಎನ್ನುವ ಕುರಿತ ಮಾಹಿತಿಯುಳ್ಳ ಹೊಸರುಚಿ ಪುಸ್ತಕವೊಂದನ್ನು ಬಿಡುಗಡೆ ಮಾಡಲಿದೆ. ಮಾನವ ಸಂಪನ್ಮೂಲ ಇಲಾಖೆಯ ಸಚಿವೆ ಸ್ಮತಿ ಇರಾನಿ ಈ ಹೊಸರುಚಿ ಅಡುಗೆ ಪುಸ್ತಕವನ್ನು ರಚಿಸಿದ್ದು, ಇದರಲ್ಲಿರುವ ಅಡುಗೆಗಳ ವಿವರವನ್ನು ಕೆಳಗಿನಂತೆ ನೀಡಲಾಗಿದೆ.

ಮೋದಿ ಫಲಾವು

ಅಕ್ಕಿಯ ಬದಲು ಒಂದು ಸೇರು ಪ್ರಧಾನಿ ನರೇಂದ್ರ ಮೋದಿಯ ಭಾಷಣವನ್ನು ತೆಗೆದುಕೊಳ್ಳಿ. ಅದನ್ನು ನೀರಿನಲ್ಲಿ ನೆನೆಹಾಕಿ. ತುಂಬಾ ಹೊತ್ತು ನೆನೆ ಹಾಕಿದರೆ ಭಾಷಣದ ಬಣ್ಣ ಹಾಳಾಗುವ ಸಂದರ್ಭವಿರುವುದರಿಂದ ಬೇಗನೆ ನೀರಿನಿಂದ ತೆಗೆಯಿರಿ. ಇದೀಗ ಸಿಲಿಂಡರ್‌ನ ಬದಲಿಗೆ ದೇಶಪ್ರೇಮದ ಕಿಡಿಯಿಂದ ಸ್ಟೌವನ್ನು ಹೊತ್ತಿಸಿ. ಬಳಿಕ ಮೋದಿ ಭಾಷಣವನ್ನು ಒಲೆಯ ಮೇಲೆ ಇಟ್ಟು ಬೇಯಿಸಿ. ಹದವಾಗಿ ಬೆಂದ ಬಳಿಕ ಗುಜರಾತ್ ತುಪ್ಪವನ್ನು ಸುರಿಯಿರಿ. ರುಚಿಗೆ ತಕ್ಕಷ್ಟು ಅಮಿತ್ ಶಾ ಕಂಪೆನಿಯ ಖಾರವನ್ನು ಸುರಿಯಿರಿ. ಈಗ ಸೌಟಿನಿಂದ ತಿರುವಿ. ಚೆನ್ನಾಗಿ ತಿರುವಿದ ಬಳಿಕ ಉಪ್ಪಿನ ಬದಲಿಗೆ ಅಡ್ವಾಣಿ ಕಂಪೆನಿಯ ಎರಡು ಹನಿ ಕಣ್ಣೀರನ್ನು ಹಾಕಿ. ಕೆಳಗಿಳಿಸಿ. ತಣ್ಣಗಾಗುವ ಮೊದಲೇ ಬಟ್ಟಲಿಗೆ ಬಡಿಸಿ.

ಇದೀಗ ಮೋದಿ ಫಲಾವು ಸಿದ್ಧ. ಬೆಲೆಯೇರಿಕೆಯ ಯಾವ ಕಾವು ತಟ್ಟದೆ ಎಲ್ಲವನ್ನೂ ಸರಕಾರ ನಿಮಗೆ ಪುಕ್ಕಟೆಯಾಗಿ ಒದಗಿಸಿಕೊಟ್ಟದ್ದಕ್ಕೆ ಹರಹರ ಮೋದಿ ಎನ್ನುತ್ತಾ ನಿಮ್ಮ ಊಟವನ್ನು ಆರಂಭಿಸಿ.

ಅಲ್ಪಸಂಖ್ಯಾತರಿಗೆ ಮೋದಿ ಬಿರಿಯಾನಿ

ಎರಡು ದೊಡ್ಡ ಪಾಕಿಸ್ತಾನ ನವಾಝ್ ಶರೀಫನ್ನು ತೆಗೆದುಕೊಂಡು ಚೆನ್ನಾಗಿ ಕತ್ತರಿಸಿ ನೀರಿನಲ್ಲಿ ನೆನೆ ಹಾಕಿ. ನಿಮ್ಮ ದೇಶಪ್ರೇಮವನ್ನು ಸಾಬೀತು ಪಡಿಸುವುದು
ಅತ್ಯಗತ್ಯವಾದುದರಿಂದ ಅದರಿಂದಲೇ ನೀವು ಸ್ಟೌವನ್ನು ಹೊತ್ತಿಸಿ. ಈಗ ನೀರಿನಲ್ಲಿ ಹಾಕಿ ನವಾಝ್ ಶರೀಫನ್ನು ಬೇಯಿಸಿ. ಮೋದಿಯ ಭಾಷಣದಲ್ಲಿ ಆಯ್ದ ಕೆಲವು ಸಾಲುಗಳನ್ನು ತೆಗೆದುಕೊಂಡು ಮಿಶ್ರ ಮಾಡಿ. ನವಾಝ್ ಶರೀಫ್ ಅವರು ಪಾಕಿಸ್ತಾನದಿಂದ ಬರುವಾಗ ಮೋದಿಯ ತಾಯಿಗಾಗಿ ತಂದ ಸೀರೆಯನ್ನು ಇಡಿಯಾಗಿ ಪಾತ್ರೆಗೆ ಆಗಿ ಚೆನ್ನಾಗಿ ಸೌಟಿನಿಂದ ತಿರುವಿ. ಹಾಗೆಯೇ ಶಾನವಾಝ್, ಅಬ್ಬಾಸ್ ನಖ್ವಿ ಮೊದಲಾದ ಅಲ್ಪಸಂಖ್ಯಾತ ಕುರಿಗಳ ಆಯ್ದ ಭಾಗಗಳನ್ನು ಕತ್ತರಿಸಿ ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ನಜ್ಮಾ ಹೆಫ್ತುಲ್ಲಾಳನ್ನು ಬಳಸಿಕೊಳ್ಳಿ.

ಸುಷ್ಮಾ ಸ್ವರಾಜ್ ಅವರು ಬಾಂಗ್ಲಾದಲ್ಲಿ ಮಾಡಿದ ಭಾಷಣದ ಕೆಲವು ರುಚಿಯಾದ ಭಾಗವನ್ನು ಕತ್ತರಿಸಿ ಪಾತ್ರೆಗೆ ಹಾಕಿ ಮತ್ತೆ ತಿರುವಿ. ಈಗ ಅಲ್ಪಸಂಖ್ಯಾತರಿಗಾಗಿ ವಿಶೇಷ ಮೋದಿ ಬಿರಿಯಾನಿ ರೆಡಿ. ಕೆಳಗಿಳಿಸಿ ತಣ್ಣಗಾಗುವ ಮೊದಲೇ ತಿಂದರೆ ರುಚಿ ಜಾಸ್ತಿ

ಬಡವರ ಹಸಿವನ್ನು ತಣಿಸಲು ಕೆಲವು ಉಪಾಯಗಳು

ಪ್ರಧಾನಿ ನರೇಂದ್ರ ಮೋದಿಯವರು ಅಧಿಕ್ಕಾರಕ್ಕೇರಿದ ಬೆನ್ನಿಗೇ ಹಸಿವನ್ನು ತಣಿಸಲು ಆಹಾರವೊಂದೇ ಮಾರ್ಗವಲ್ಲ ಎನ್ನುವುದನ್ನು ಕಂಡುಕೊಂಡಿದ್ದಾರೆ. ತೀರಾ ತಳಮಟ್ಟದ ಬಡವರಿಗಾಗಿ ಅವರು ಹಸಿವನ್ನು ಇಲ್ಲವಾಗಿಸಲು ಬೇರೆ ಬೇರೆ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಇದರಿಂದಾಗಿ ದಿನಸಿ ಸಾಮಾನುಗಳನ್ನು ಕೊಂಡುಕೊಂಡು ಅನವಶ್ಯವಾಗಿ ಅದನ್ನು ದುರ್ಬಳಕೆ ಮಾಡುವುದು ತಪ್ಪುತ್ತದೆ. ಯಾವುದೇ ಕಷ್ಟಗಳಿಲ್ಲದೆಯೇ ಹಸಿವನ್ನು ತಣಿಸುವ ಕೆಲವು ಉಪಾಯಗಳು ಕೆಳಗಿನಂತಿದೆ. ಈ ಉಪಾಯ ಬಡತನದ ಕೆಳಗಿನ ರೇಖೆಯವರಿಗಾಗಿ ಮೋದಿಯವರು ಸಿದ್ಧಪಡಿಸಿರುವುದಾಗಿದೆ.

ಉಪಾಯ 1.: ಬೆಳಗ್ಗೆ ಊಟ ಮಾಡುವುದರಿಂದ ಆರೋಗ್ಯಕ್ಕೆ ಹಲವು ಬಗೆಯ ಹಾನಿಯಿರುವುದರಿಂದ ಬೆಳಗ್ಗಿನ ಊಟವನ್ನು ತ್ಯಜಿಸುವುದು ಅತ್ಯುತ್ತಮ ಎನ್ನುವುದನ್ನು ಮೋದಿ
ಕಂಡುಕೊಂಡಿದ್ದಾರೆ. ಮಧ್ಯಾಹ್ನದ ಊಟವನ್ನು ದೇಶಕ್ಕಾಗಿ ವ್ಯಯಿಸಬೇಕು. ನಿಜಕ್ಕೂ ನೀವು ದೇಶಪ್ರೇಮಿಗಳೇ ಆಗಿದ್ದರೆ ಮಧ್ಯಾಹ್ನದ ಊಟವನ್ನು ತ್ಯಜಿಸಬೇಕು. ಇಲ್ಲವಾದರೆ ನಿಮ್ಮನ್ನು ದೇಶದ್ರೋಹಿಗಳು ಎಂದು ಪರಿಗಣಿಸಬೇಕಾಗುತ್ತದೆ. ಹೀಗೆ ಎರಡು ಹೊತ್ತಿನ ಊಟಕ್ಕೆ ಮೋದಿಯಿಂದ ಉಚಿತ ವ್ಯವಸ್ಥೆ ಆದಂತಾಯಿತು. ಇನ್ನು ರಾತ್ರಿಯ ಒಂದು ಹೊತ್ತಿನ ಊಟ ಮಾತ್ರ ಉಳಿದಿರುವುದು. ಇದೀಗ ನೀವು ಒಂದು ಉದ್ದವಾದ ಬಟ್ಟೆಯನ್ನೋ ಅಥವಾ ಶಾಲನ್ನೋ ತೆಗೆದುಕೊಳ್ಳಿ. ಅದನ್ನು ಹೊಟ್ಟೆಯ ಸುತ್ತ ಗಟ್ಟಿಯಾಗಿ ಕಟ್ಟಿಕೊಳ್ಳಿ. ಈಗ ನಿಮಗೆ ಹಸಿವಿನ ಅನುಭವವಾಗುವುದಿಲ್ಲ. ಇದರಿಂದಾಗಿ ಮೂರು ಹೊತ್ತಿನ ಊಟವೂ ಉಳಿದಂತಾಯಿತು. ದೇಶವೂ ಆರ್ಥಿಕವಾಗಿ ಸಬಲವಾದಂತಾಯಿತು.

ಉಪಾಯ 2: ಪ್ರತಿಮನೆಯಲ್ಲೂ ಟಿ ವಿ ಇರುವುದರಿಂದ ಹಸಿವಾದಗಲೆಲ್ಲ ಮೋದಿಯವರ ಅತ್ಯಂತ ರೋಮಾಂಚಕಾರಿ, ಭಾವುಕ ಭಾಷಣಗಳನ್ನು ಕೇಳುವುದು. ಅದನ್ನು ಕೇಳುತ್ತಾ ಇದ್ದರೆ ನಿಮ್ಮ ಹಸಿವು ಮರೆತು ಹೋಗುತ್ತದೆ.

ಉಪಾಯ 3: ಪ್ರಾಣಿಗಳು ಹುಲ್ಲು ತಿಂದು ಬದುಕುತ್ತಿರುವಾಗ ಮನುಷ್ಯರು ಯಾಕೆ ಹುಲ್ಲು ತಿಂದು ಬದುಕಬಾರದು? ಆದುದರಿಂದ ಹುಲ್ಲು, ಸೊಪ್ಪು ಇತ್ಯಾದಿಗಳನ್ನೆಲ್ಲ ಬೇಯಿಸಿ ಪ್ರಯೋಗ ಮಾಡಿ, ಅದರಲ್ಲಿ ನಿಮಗಿಷ್ಟವಾದ ಬಗೆಯನ್ನು ತಿನ್ನಲು ಅಭ್ಯಾಸ ಮಾಡಿ. ತಿನ್ನಲು ಅಭ್ಯಾಸವಾದ ಬಳಿಕ ಸರಕಾರ ಆ ಹುಲ್ಲು, ಸೊಪ್ಪುಗಳ ಮೇಲೆ ತೆರಿಗೆ ಹಾಕಿ ದೇಶದ ಅಭಿವೃದ್ಧಿಗೆ ಬಳಸುತ್ತದೆ. ಮುಂದೆ ಅದನ್ನು ಪಡಿತರದ ಮೂಲಕ ನೀವು ಕೊಂಡು ಹೋಗಿ ಮನೆಯಲ್ಲಿ ಬೇಯಿಸಬಹುದು.

ಉಪಾಯ 4: ಹಸಿವಾದಾಗಲೆಲ್ಲ ಶತ್ರು ರಾಷ್ಟ್ರವಾದ ಪಾಕಿಸ್ತಾನವನ್ನು ನೆನೆದುಕೊಳ್ಳಿ. ಈಗ ನಿಮ್ಮಿಳಗೆ ಸಿಟ್ಟು, ಆಕ್ರೋಶ, ದೇಶಪ್ರೇಮ ಎದ್ದು ಬರುತ್ತದೆ. ಆಗ ಹಸಿವು
ಮರೆಯುತ್ತದೆ.

ಉಪಾಯ 5: ಮಂತ್ರಗಳಿಂದ ಹಸಿವನ್ನು ತಣಿಸಲು ಸಾಧ್ಯವೆ? ಎನ್ನುವುದರ ಕುರಿತಂತೆ ಸಂಶೋಧನೆ ನಡೆಸಲು ವಿವಿಧ ಸ್ವಾಮೀಜಿಗಳಿಗೆ ಅನುದಾನಗಳನ್ನು ಈಗಾಗಲೇ ನೀಡಲಾಗಿದೆ. ಒಂದು ವೇಳೆ ಅವರು ಮಂತ್ರಗಳಿಂದ ಹಸಿವನ್ನು ತಣಿಸಲು ಯಶಸ್ವಿಯಾದರೆ, ಆ ಮಂತ್ರಗಳನ್ನು ಪಡಿತರಗಳ ಮೂಲಕ ಅಥವಾ ಇಸ್ಕಾನ್ ಮೂಲಕ ಎಲ್ಲ ಬಡವರಿಗೆ ತಲುಪಿಸಲಾಗುತ್ತದೆ. ಉಪಾಯ 6: ಒಂದೆರಡು ದಿನ ಉಪವಾಸ ಇದ್ದೂ ಮತ್ತೂ ಹಸಿವಾದರೆ ಹಿಂದಿನ ಯುಪಿಎ ಸರಕಾರವನ್ನು ಸಾಧ್ಯವಾದಷ್ಟು ಟೀಕಿಸುವುದು. ಇದರಿಂದಾಗಿ ಹಸಿವು ಸ್ವಲ್ಪ ಮಟ್ಟಿಗೆ ಇಂಗುವ ಸಾಧ್ಯತೆಗಳಿವೆ.

ಬಡತನದ ರೇಖೆಗಿಂತ ಕೆಳಗಿರುವವರಿಗೆ ವಿಶೇಷ ಸೂಚನೆ:

ಯಾವುದೇ ಕಾರಣಕ್ಕೂ ತೀರಾ ಬಡವರು ಅಕ್ಕಿ, ದಿನಸಿಗಳನ್ನು ಬಳಸಬಾರದು. ಆ ಮೂಲಕ ತಮ್ಮ ದೇಶಪ್ರೇಮವನ್ನು ಸಾಬೀತು ಪಡಿಸಿ, ಶ್ರೀಮಂತರಿಗೆ ದಿನಸಿ ಸಾಮಾನುಗಳು ಸಿಗುವಂತೆ ಮಾಡಬೇಕು. ಶ್ರೀಮಂತರಿದ್ದರೆ ಮಾತ್ರ ಈ ದೇಶ ಶ್ರೀಮಂತ ಎಂದು ವಿಶ್ವದಲ್ಲಿ ಗುರುತಿಸಲು ಸಾಧ್ಯ. ಆದುದರಿಂದ ಶ್ರೀಮಂತರನ್ನು ಉಳಿಸುವುದು, ಅವರನ್ನು ಸಾಕುವುದು ಈ ದೇಶದ ಬಡವರ ಕರ್ತವ್ಯವಾಗಿದೆ.
(ಕೃಪೆ: ವಾರ್ತಾ ಭಾರತಿ, 29.06.2014)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s