ಭಾರತದಲ್ಲಿ ಚೀನಿ ಕೈಗಾರಿಕಾ ಪಾರ್ಕ್ ಸ್ಥಾಪನೆಗ ೆ ಒಪ್ಪಂದ

Posted: ಜುಲೈ 1, 2014 in Uncategorized

ಬೀಜಿಂಗ್: ಭಾರತದಲ್ಲಿ ಚೀನಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವ ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಜೂನ್ 30ರಂದು ಸಹಿ ಹಾಕಿವೆ. ಈ ಸಂಬಂಧ ಉಭಯ ದೇಶಗಳ ವಾಣಿಜ್ಯ ಸಚಿವರ ಸಭೆ ಇಲ್ಲಿ ನಡೆಯಿತು.

ಎನ್‌ಡಿಎ ಸರಕಾರದ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಚೀನಾಕ್ಕೆ ಭೇಟಿ ನೀಡಿದ್ದು ಅಲ್ಲಿನ ವಾಣಿಜ್ಯ ಸಚಿವ ಗಾವೊ ಹುಚೆಂಗ್ ಜೊತೆಗೆ ಮಾತುಕತೆ ನಡೆಸಿದರು. ವಾಣಿಜ್ಯ ಕೊರತೆಯ ಕುರಿತ ಭಾರತದ ಕಳವಳವನ್ನು ಮಾತುಕತೆಯ ವೇಳೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು. ಭಾರತದ ವಸ್ತುಗಳು ಮತ್ತು ಸೇವೆಗಳಿಗೆ ಚೀನಿ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ಸಿಗಬೇಕೆಂದು ಅವರು ಪ್ರತಿಪಾದಿಸಿದರು.

ಹೆಚ್ಚುತ್ತಿರುವ ವಾಣಿಜ್ಯ ಕೊರತೆಯನ್ನು ಸರಿದೂಗಿಸಲು ಭಾರತದಲ್ಲಿ ಹೆಚ್ಚಿನ ಚೀನಿ ಹೂಡಿಕೆಗೆ ಅವಕಾಶ ಮಾಡಿಕೊಡುವ ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣ ಕುರಿತ ತಿಳುವಳಿಕೆ ಪತ್ರಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದವು. ವಾಣಿಜ್ಯ ಕೊರತೆ ಈಗ ಸರಾಸರಿ ವರ್ಷಕ್ಕೆ 3,500 ಕೋಟಿ ಡಾಲರ್ ಆಗಿದೆ ಎಂದು ಅಂದಾಜಿಸಲಾಗಿದೆ.

ಚೀನಾ ಭೇಟಿಯಲ್ಲಿರುವ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿಯ ನಿಯೋಗದಲ್ಲಿ ನಿರ್ಮಲಾ ಸೀತಾರಾಮನ್ ಇದ್ದಾರೆ. ವಿವಿಧ ರಾಜ್ಯಗಳಲ್ಲಿ ನಾಲ್ಕು ಕೈಗಾರಿಕಾ ಪಾರ್ಕ್ ಗಳನ್ನು ಚೀನಾ ಸ್ಥಾಪಿಸಬೇಕು ಎಂದು ಭಾರತ ನಿರೀಕ್ಷಿಸುತ್ತಿದೆ.

ಚೀನಾದ ಅಧಿಕಾರಿಗಳ ಪ್ರಕಾರ, ಭಾರತದಲ್ಲಿ ಆ ದೇಶದ ಹೂಡಿಕೆಗಳ ಒಟ್ಟು ಮೊತ್ತ 110 ಕೋಟಿ ಡಾಲರ್ ಆಗಿದೆ. ಚೀನಾ ಗುಜರಾತ್‌ನಲ್ಲಿ ಹೆಚ್ಚಾಗಿ ಹೂಡಿಕೆ ಮಾಡಿದೆ.

ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ಔಷಧ ಕಂಪೆನಿಗಳಿಗೆ ತನ್ನ ಮಾರುಕಟ್ಟೆಯನ್ನು ಮುಕ್ತಗೊಳಿಸುವಂತೆ ಹಾಗೂ ವಾಣಿಜ್ಯ ಕೊರತೆಯನ್ನು ನೀಗಿಸಲು ಭಾರತದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವಂತೆ ಭಾರತ ಚೀನಾವನ್ನು ಒತ್ತಾಯಿಸುತ್ತಿದೆ. ಮುತ್ತು, ಆಭರಣ, ಹತ್ತಿ ಬಟ್ಟೆ, ಔಷಧ ಕಂಪೆನಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ಚೀನಾ ಮಾರುಕಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮುಕ್ತಗೊಳಿಸುವಂತೆ ಚೀನಾ ವಾಣಿಜ್ಯ ಸಚಿವರನ್ನು ಕೋರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s