ಉಡುಪಿ: ಎಚ್1 ಎನ್1 ಗೆ 7 ಸಾವು, 34 ಕುಷ್ಠರೋಗ ಪ್ರಕರಣ ಪತ್ತೆ

Posted: ಜುಲೈ 2, 2014 in Uncategorized

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಎಚ್1 ಎನ್1 ಜ್ವರದಿಂದ ಈ ವರ್ಷದ ಜನವರಿಯಿಂದ ಜೂನ್ 30 ರವರೆಗೆ ಒಟ್ಟು 42 ಪ್ರಕರಣ ವರದಿಯಾಗಿದ್ದು, ಇವರಲ್ಲಿ ಏಳು ಜನರು ಮೃತ ಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜು.ಒಂದರಂದು ಅಪರ ಜಿಲ್ಲಾಧಿಕಾರಿ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎಚ್1 ಎನ್1 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಖಾಸಗಿ ವೈದ್ಯಕೀಯ ಸಂಸ್ಥೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳ ಸಭೆಯಲ್ಲಿ ನಿಯಂತ್ರಣ ಕ್ರಮದ ಕುರಿತು ಸವಿವರ ಚಚರ್ೆ ನಡೆಸಿದ ಸಮಯದಲ್ಲಿ ಡಾ.ಬಾಯಿರಿ ಈ ವಿಷಯವನ್ನು ಬಹಿರಂಗಪಡಿಸಿದರು.

ಎಚ್1 ಎನ್1ಗೆ ಉಡುಪಿಯಲ್ಲಿ 22 ಪ್ರಕರಣ ವರದಿಯಾಗಿದ್ದು, 4 ಜನರು ಮೃತಪಟ್ಟಿದ್ದಾರೆ. ಕಾರ್ಕಳದಲ್ಲಿ ಮೂರು ಪ್ರಕರಣದಲ್ಲಿ ಒಂದು ಸಾವು, ಕುಂದಾಪುರ 15 ಪ್ರಕರಣದಲ್ಲಿ 2 ಸಾವು ಸಂಭವಿಸಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರೋಹಿಣಿ ಸಭೆಗೆ ಮಾಹಿತಿ ನೀಡಿದರು.

ರೋಗ ಪತ್ತೆಯಾದರೆ ತಕ್ಷಣವೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ ಅವರು, ಜೌಷಧಿ ದಾಸ್ತಾನಿದ್ದು ರೋಗ ಪತ್ತೆ ಹಚ್ಚುವಿಕೆ ವೇಗವಾಗಿಯಾದರೆ ಚಿಕಿತ್ಸೆ ನೀಡಲು ಸುಲಭ ಎಂದರು. ಪತ್ತೆ ಹಚ್ಚುವಿಕೆ ಮತ್ತು ರೋಗಕ್ಕೆ ಮದ್ದು ತಕ್ಷಣ ನೀಡಬೇಕಾಗುತ್ತದೆ ಎಂದರು. ಖಾಸಗಿ ಮತ್ತು ಸಕರಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸ್ಥಿತಿಗತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮಣಿಪಾಲ
ವಿಶ್ವವಿದ್ಯಾಲಯದಲ್ಲಿ ಮತ್ತು ಹಾಸ್ಟೆಲ್ನಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಯಿತು.

ಎಚ್1 ಎನ್1 ನಿಯಂತ್ರಣಕ್ಕೆ ಶಾಲೆಗಳಲ್ಲಿ ನೀಡಬೇಕಾದ ಮಾಹಿತಿ ಬಗ್ಗೆ, ಅಂಗನವಾಡಿ ಶಾಲೆ, ಹಾಸ್ಟೆಲ್ ನಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ವಿದ್ಯಾಂಗ
ಉಪನಿರ್ದೇಶಕರು ಮತ್ತು ಸಮಾಜ ಕಲ್ಯಾಣ ಇಲಾಖೆ ಹೆಚ್ಚಿನ ಜವಾಬ್ದಾರಿ ಹೊರಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.

ಇದೇ ಸಂದರ್ಭದಲ್ಲಿ ಮಳೆ ಕಣ್ಣುಮುಚ್ಚಾಲೆಯಾಡುತ್ತಿರುವ ಸಂದರ್ಭಗಳಲ್ಲಿ ಮಲೇರಿಯಾ ಪ್ರಕರಣ ಜಾಸ್ತಿಯಾಗಿದ್ದು, ಸೊಳ್ಳೆ ಉತ್ಪತ್ತಿಯಾಗದಂತೆ ಹಾಗೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವುದರಿಂದ ಡೆಂಗ್ಯು ನಿಯಂತ್ರಣ ಸಾಧ್ಯ ಎಂದು ಡಿಎಚ್ಒ ಹೇಳಿದರು.

ಶಿಶುಗಳಿಗೆ ರೋಗ ನಿರೋಧಕ ನೀಡುವ ಬಗ್ಗೆ ಹಾಗೂ ಉಡುಪಿಯಲ್ಲಿ ಕುಷ್ಠರೋಗ ಪ್ರಕರಣ ಒಟ್ಟು 34 ವರದಿಯಾಗಿದ್ದು, ಇವರೆಲ್ಲರಿಗೂ ಶುಶ್ರೂಷೆ ನೀಡಲಾಗುತ್ತಿದೆ. ಕುಷ್ಠರೋಗ ಪ್ರಕರಣಗಳು ಪತ್ತೆಯಾದಾಗ ಅವರಿಗೆ ಸಂಪೂರ್ಣ ಕೋರ್ಸ್ ಮುಗಿಸುವವರೆಗೆ ನಿಗಾ ವಹಿಸದಿದ್ದರೆ ರೋಗ ಮತ್ತೆ ಉಲ್ಬಣಗೊಳ್ಳಲಿದೆ ಎಂದರು. ಸಂಬಂಧಪಟ್ಟ ಎಲ್ಲ ಡಾಕ್ಟರ್ ಗಳು, ಖಾಸಗಿ ವೈದ್ಯರು ಸಭೆಯಲ್ಲಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s