ಕಾಂಗ್ರೆಸ್ ಶಾಸಕರಿಂದ ಪೊಲೀಸ್, ಬಾರ್ ನೌಕರರ ಮೇಲೆ ಹಲ್ಲೆ

Posted: ಜುಲೈ 3, 2014 in Uncategorized

ಬೆಂಗಳೂರು: ನಗರದ ಯು.ಬಿ ಸಿಟಿ ಕಟ್ಟಡದಲ್ಲಿನ ಸ್ಕೈ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಜುಲೈ ಒಂದರಂದು ರಾತ್ರಿ ಮೋಜುಕೂಟ ನಡೆಸುತ್ತಿದ್ದ ಹುನಗುಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಬೆಂಬಲಿಗರ ಜತೆ ಸೇರಿ ಪೊಲೀಸರು ಹಾಗೂ ಬಾರ್‌ನ ಕೆಲಸಗಾರರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆಗೊಳಗಾಗಿರುವ ಕಬ್ಬನ್‌­ಪಾರ್ಕ್‌ ಠಾಣೆಯ ಕಾನ್‌­­ಸ್ಟೆಬಲ್‌­ಗಳಾದ ಕಿರಣ್‌ಕುಮಾರ್‌ ಮತ್ತು ಪ್ರಶಾಂತ್‌­ನಾಯಕ್‌ ಅವರು ವಿಜಯಾ­ನಂದ ಕಾಶಪ್ಪನ­ವರ, ಅವರ ಆಪ್ತನಾದ ರೌಡಿ ಪಟ್ಟಿಗೆ ಸೇರಿರುವ ಸೋಮ­ಶೇಖರ್‌­ಗೌಡ ಹಾಗೂ 9 ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದಾರೆ.

ವಿಜಯಾನಂದ ಅವರ ಹುಟ್ಟು­ಹಬ್ಬದ ಪ್ರಯುಕ್ತ ಸೋಮಶೇಖರ್‌­ಗೌಡ ಅಲಿಯಾಸ್‌ ಸೋಮೇಗೌಡ, ಯು.ಬಿ ಸಿಟಿ ಕಟ್ಟಡದ 16ನೇ ಅಂತಸ್ತಿನಲ್ಲಿರುವ ಸ್ಕೈ ಬಾರ್‌ನಲ್ಲಿ ಮೋಜುಕೂಟ ಆಯೋಜಿಸಿದ್ದರು. ನಿಯ­ಮದ ಪ್ರಕಾರ ರಾತ್ರಿ 11.30ಕ್ಕೆ ಮದ್ಯದ ವಹಿವಾಟಿನ ಅವಧಿ ಕೊನೆಗೊಂಡಿದ್ದರಿಂದ ಬಾರ್‌ನ ಕೆಲಸಗಾರರು ಸಂಗೀತ ಸಲಕರಣೆಗಳನ್ನು ಬಂದ್‌ ಮಾಡಿ, ವಿದ್ಯುತ್‌ ದೀಪ ಆರಿಸಿ­ದ್ದಾರೆ. ಇದರಿಂದ ಕೋಪಗೊಂಡ ಶಾಸಕರು ಮತ್ತು ಬೆಂಬ­ಲಿ­­ಗರು, ಮದ್ಯ ನೀಡುವಂತೆ ಕೆಲಸಗಾರರನ್ನು ಬೆದರಿ­ಸಿ­­ದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಕೆಲಸಗಾರರು, ಮದ್ಯ ಕೊಟ್ಟು ಸಂಗೀತ ಹಾಕಿದ್ದಾರೆ. ಆ ನಂತರ ಶಾಸಕರು ಬೆಂಬಲಿಗರೊಂದಿಗೆ ರಾತ್ರಿ 1.10ರವರೆಗೂ ಮದ್ಯ ಕುಡಿಯುತ್ತಾ ಬಾರ್‌ನಲ್ಲೇ ಕುಳಿತಿದ್ದರು. ಅದೇ ವೇಳೆಗೆ ಗಸ್ತು ನಡೆಸುತ್ತಾ ಯು.ಬಿ ಸಿಟಿ ಕಟ್ಟಡದ ಬಳಿ ಹೋದ ಕಾನ್‌ಸ್ಟೆಬಲ್‌ಗಳಾದ ಕಿರಣ್‌­ಕುಮಾರ್‌ ಮತ್ತು ಪ್ರಶಾಂತ್‌ ನಾಯಕ್‌, ಸ್ಕೈ ಬಾರ್‌ನಲ್ಲಿ ವಿದ್ಯುತ್‌ ದೀಪ ಉರಿಯುತ್ತಿರುವುನ್ನು ಕಂಡು ಪರಿಶೀಲಿ­ಸಲು ಒಳಗೆ ಹೋಗಿದ್ದಾರೆ. ಆಗ ಶಾಸಕ ವಿಜಯಾನಂದ ಅವರು ಮೋಜುಕೂಟ ನಡೆಸುತ್ತಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಹಿವಾಟಿನ ಅವಧಿ ಮುಗಿದ ನಂತರವೂ ಬಾರ್‌ನಲ್ಲಿ ಮದ್ಯ ಸರಬ­ರಾಜು ಮಾಡುತ್ತಿದ್ದುದನ್ನು ಕಿರಣ್‌­ಕುಮಾರ್‌ ತಮ್ಮ ಮೊಬೈಲ್‌­ನಿಂದ ಚಿತ್ರೀಕ­ರಿಸಿಕೊಳ್ಳಲು ಮುಂದಾ­ಗಿದ್ದಾರೆ. ಆಗ ವಿಜಯಾನಂದ ಅವರು ಕಿರಣ್‌­ಕುಮಾರ್‌ ಕೆನ್ನೆಗೆ ಹೊಡೆದು ಮೊಬೈಲ್‌ ಕಸಿದುಕೊಂಡಿದ್ದಾರೆ. ಅಲ್ಲದೇ, ಸೋಮಶೇಖರ್‌ಗೌಡ ಮತ್ತು ಬೆಂಬಲಿಗರ ಜತೆ ಸೇರಿ ಬಾರ್‌ ಸಿಬ್ಬಂದಿ­ಯನ್ನು ಎಳೆದಾಡಿ ಅವಾಚ್ಯ ಶಬ್ದ­ಗ­ಳಿಂದ ನಿಂದಿಸಿದ್ದಾರೆ. ಸಿಬ್ಬಂದಿ ಬಾರ್‌ನಿಂದ ಹೊರಬರಲು ಯತ್ನಿಸಿ­ದಾಗ ಅಟ್ಟಿಸಿ­ಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿಯ ರಕ್ಷಣೆಗೆ ಬಂದ ಬಾರ್‌ನ ಕೆಲಸ­ಗಾ­ರರನ್ನು ಥಳಿಸಿ ದಾಂದಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾರ್‌ನಿಂದ ಠಾಣೆಗೆ ಬಂದ ಸಿಬ್ಬಂದಿ, ಇನ್‌ಸ್ಪೆಕ್ಟರ್‌ ಉದಯ್‌ ಭಾಸ್ಕರ್‌ ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ಇಡೀ ಘಟನೆಯ ವಿವರವನ್ನು ಠಾಣೆಯ ದಿನಚರಿ ಪುಸ್ತಕದಲ್ಲಿ (ಡೈರಿ) ರಾತ್ರಿಯೇ ನಮೂದಿ­ಸಿದ್ದಾರೆ. ನಂತರ ಸ್ವಲ್ಪ ಸಮಯದಲ್ಲೇ ವಿಜಯಾನಂದ ಅವರು ಉದಯ್‌ ಭಾಸ್ಕರ್‌ ಅವರಿಗೆ ಕರೆ ಮಾಡಿ, ಅವಾಚ್ಯವಾಗಿ ನಿಂದಿಸಿ ದೂರು ದಾಖಲಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಸಂಬಂಧ ಸಿಬ್ಬಂದಿ ಬುಧವಾರ ದೂರು ನೀಡಿದ್ದಾರೆ. ಆ ದೂರು ಆಧರಿಸಿ ವಿಜಯಾನಂದ ಕಾಶಪ್ಪನವರ, ಸೋಮಶೇಖರ್‌ಗೌಡ ಮತ್ತು ಬೆಂಬಲಿಗರ ವಿರುದ್ಧ ಹಲ್ಲೆ, ಕಾನೂನು ಬಾಹಿರವಾಗಿ ಗುಂಪುಗೂಡುವುದು, ಶಾಂತಿ ಕದಡುವ ಉದ್ದೇಶದಿಂದ ನಿಂದನೆ ಹಾಗೂ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿ.ಸಿ ಕ್ಯಾಮೆರಾದಲ್ಲಿ ಸೆರೆ ‘ಇಡೀ ಘಟನಾವಳಿಯ ದೃಶ್ಯ ಬಾರ್‌ನ ಸಿ.ಸಿ ಕ್ಯಾಮೆರಾಗಳಲ್ಲಿ ಸೆರೆ­ಯಾಗಿದೆ. ಆ ದೃಶ್ಯಾವಳಿಯನ್ನು ವಶಕ್ಕೆ ಪಡೆದು ಪರಿಶೀಲಿ­ಸಲಾ­ಗುತ್ತಿದೆ. ವಿಜಯಾ­ನಂದ ಅವರು ಇನ್‌ಸ್ಪೆಕ್ಟರ್‌ ಮೊಬೈಲ್‌ಗೆ ಕರೆ ಮಾಡಿ ಬೆದರಿಕೆ ಹಾಕಿರುವುದನ್ನು ಧ್ವನಿ ಮುದ್ರಿಸಿ­ಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲ್ಲೆ ನಡೆಸಿಲ್ಲ: ವಿಜಯಾನಂದ ‘ಯು.ಬಿ ಸಿಟಿ ಸ್ಕೈ ಬಾರ್‌­ನಲ್ಲಿ ಗಲಾಟೆ ಮಾಡಿ, ಯಾರ ಮೇಲೂ ಹಲ್ಲೆ ನಡೆಸಿಲ್ಲ’ ಎಂದು ಶಾಸಕ ವಿಜಯಾ­­ನಂದ ಕಾಶಪ್ಪನವರ್‌ ಬುಧವಾರ ಇಲ್ಲಿ ಸ್ಪಷ್ಟಪಡಿಸಿದರು. ‘ಕುಟುಂಬ ಸಮೇತ ಸ್ಕೈ ಬಾರ್‌ಗೆ ಹೋಗಿದ್ದು ನಿಜ. ಊಟ ಮಾಡುತ್ತಿ­ದ್ದಾಗ ಪೊಲೀಸ್ ಸಿಬ್ಬಂದಿ­ಯೊ­ಬ್ಬರು ಕ್ಯಾಮೆರಾ­ದಲ್ಲಿ ಚಿತ್ರೀಕ­ರಣ ಮಾಡುತ್ತಿದ್ದರು. ಮಾಡ­ಬೇಡಿ ಎಂದು ಕೋರಿದರೂ ಕೇಳ­ಲಿಲ್ಲ. ಕೊನೆಗೆ ಹಿರಿಯ ಅಧಿಕಾ­ರಿ­ಗಳಿಗೆ ತಿಳಿಸುವುದಾಗಿ ಹೇಳಿದರೂ ಅವರು ಲೆಕ್ಕಿಸಲಿಲ್ಲ. ನಂತರ ಗೃಹ ಸಚಿ­ವರಿಗೇ ದೂರು ನೀಡುವು­ದಾಗಿ ಹೇಳಿದೆ. ಇಷ್ಟು ಬಿಟ್ಟರೆ ನಾನು ಗಲಾಟೆ ಮಾಡಿಲ್ಲ. ಯಾರ ಮೇಲೂ ಹಲ್ಲೆ ನಡೆಸಿಲ್ಲ’ ಎಂದು ಅವರು ವಿಧಾನ­ಸಭೆ ಮೊಗಸಾಲೆಯಲ್ಲಿ ತಿಳಿಸಿದರು.

ಬೆನ್ನಟ್ಟಿ ಥಳಿಸಿದರು ‘ಪೊಲೀಸರು ಬಾರ್‌ನ ಬಾಗಿಲು ಮುಚ್ಚುವಂತೆ ಕೆಲಸಗಾರರಿಗೆ ಸೂಚಿ­ಸಿ­­ದರು. ಈ ವೇಳೆ ಬಾರ್‌ನ ಒಳಗಿದ್ದ ಶಾಸಕರು ಮತ್ತು ಬೆಂಬಲಿ­ಗರು ಹೊರ ಹೋಗಲು ನಿರಾಕರಿಸಿ ಪೊಲೀ­ಸರನ್ನು ಎಳೆದಾಡಿ­ದರು. ಪೊಲೀ­ಸರು ಹೊರಗೆ ಓಡಲು ಯತ್ನಿಸಿದಾಗ ಕಟ್ಟಡದ ಕೆಳ ಅಂತಸ್ತಿ­ನವರೆಗೂ ಬೆನ್ನಟ್ಟಿ ಹೋಗಿ ಹಲ್ಲೆ ನಡೆಸಿದರು’ –ವಿಜಯ್‌ಕುಮಾರ್‌, ಸ್ಕೈ ಬಾರ್‌ನ ಭದ್ರತಾ ಸಿಬ್ಬಂದಿ ಮತ್ತು ಘಟನೆಯ ಪ್ರತ್ಯಕ್ಷದರ್ಶಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s