ಸಂಘ ಪರಿವಾರಕ್ಕೆ ಅಮೆರಿಕದಿಂದ ಹರಿದು ಬರುತ್ತಿ ದೆ ಹಣದ ಹೊಳೆ…

Posted: ಜುಲೈ 4, 2014 in Uncategorized

# ಕಳೆದ ಮೂರು ದಶಕಗಳಲ್ಲಿ, ಭಾರತವನ್ನು ಕೇಸರೀಕರಣಗೊಳಿಸುವ ಚಳವಳಿಯೊಂದು ಭರದಿಂದ ನಡೆಯುತ್ತಿದೆ. ದಕ್ಷಿಣ ಏಶ್ಯದಲ್ಲಿ ಹಾಗೂ ಅನಿವಾಸಿ ಭಾರತೀಯ ಸಮುದಾಯಗಳಲ್ಲಿ ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದೂ ರಾಷ್ಟ್ರೀಯವಾದವನ್ನು ಬೆಳೆಸುವ ಕೆಲಸವು ವ್ಯವಸ್ಥಿತವಾಗಿ ನಡೆಯುತ್ತಿದೆ. ಆರೆಸ್ಸೆಸ್, ವಿಶ್ವಹಿಂದೂ ಪರಿಷತ್, ಭಜರಂಗದಳ ಹಾಗೂ ಬಿಜೆಪಿ ಸಂಘ ಪರಿವಾರದಲ್ಲಿರುವ ಪ್ರಮುಖ ಸಂಘಟನೆಗಳಾಗಿದ್ದು, ಅವುಗಳಲ್ಲಿ ಒಟ್ಟು 10 ಲಕ್ಷಕ್ಕೂ ಅಧಿಕ ಕಾರ್ಯಕರ್ತರಿದ್ದಾರೆ.

ಹಿಂದೂ ರಾಷ್ಟ್ರೀಯವಾದವು ಬೆಳೆಯುತ್ತಿರುವಂತೆಯೇ, ಮುಸ್ಲಿಮರು, ಕ್ರೈಸ್ತರು ಮತ್ತಿತರ ಅಲ್ಪಸಂಖ್ಯಾತರು ಹಾಗೂ ಸಂಘಪರಿವಾರದ ವಿರೋಧಿಗಳ ವಿರುದ್ಧ ತಾರತಮ್ಯ,ಬಹಿಷ್ಕಾರ ಹಾಗೂ ಲೈಂಗಿಕ ದೌರ್ಜನ್ಯಗಳು ಕೂಡಾ ಹೆಚ್ಚುತ್ತಿರುವುದನ್ನು ಭಾರತೀಯ ಹಾಗೂ ಅಂತಾರಾಷ್ಟ್ರೀಯ ನ್ಯಾಯಾಧೀಕರಣಗಳು, ಸತ್ಯಶೋಧಕ ಸಮಿತಿಗಳು, ಅಂತಾರಾಷ್ಟ್ರೀಯ ಮಾನವಹಕ್ಕು ಸಂಘಟನೆಗಳು ಹಾಗೂ ಅಮೆರಿಕ ಸರಕಾರದ ಇಲಾಖೆಗಳು ನಡೆಸಿದ ಅಧ್ಯಯನ ವರದಿಗಳು ದೃಢಪಡಿಸಿವೆ.

ಸಂಘ ಪರಿವಾರವು ಕಳೆದ ಕೆಲವು ದಶಕಗಳಿಂದೀಚೆಗೆ ಅಮೆರಿಕ ಮೂಲದ ತನ್ನ ಸಹೋದರ ಸಂಘಟನೆಗಳಿಂದ ಸಾಮಾಜಿಕ ಹಾಗೂ ಆರ್ಥಿಕ ನೆರವನ್ನು ಪಡೆಯುತ್ತಾ ಬಂದಿದೆ. ಈ ಸಂಘಟನೆಗಳು ಅಮೆರಿಕದಲ್ಲಿ ಲಾಭರಹಿತ ಸಂಘಟನೆಗಳೆಂಬ ಹಣೆಪಟ್ಟಿ ಕಟ್ಟಿಕೊಂಡು ತೆರಿಗೆ
ವಿನಾಯಿತಿಯನ್ನು ಪಡೆಯುತ್ತಿವೆ. ಹಿಂದೂ ಸ್ವಯಂ ಸೇವಕ ಸಂಘ (ಎಚ್‌ಎಸ್‌ಎಸ್), ವಿಶ್ವಹಿಂದೂ ಪರಿಷತ್ ಆಫ್ ಅಮೆರಿಕ (ವಿಎಚ್‌ಪಿಎ), ಸೇವಾ ಇಂಟರ್‌ನ್ಯಾಶನಲ್ ಯುಎಸ್‌ಎ, ಎಕಾಲ್ ವಿದ್ಯಾಲಯ ಫೌಂಡೇಶನ್ ಅಮೆರಿಕದಲ್ಲಿ ಸಕ್ರಿಯವಾಗಿರುವ ಸಂಘಪರಿವಾರದ ಸಹೋದರ ಸಂಘಟನೆಗಳಾಗಿವೆ. ಓವರ್‌ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ-ಯುಎಸ್‌ಎ (ಓಎಫ್ ಬಿಜೆಪಿ) ಸಂಘಟನೆಗೆ ತೆರಿಗೆ ವಿನಾಯಿತಿಯಿರುವ ಸಂಘಟನೆಯಲ್ಲವಾದರೂ, ಅಮೆರಿಕದಲ್ಲಿ ಅದು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ಸಂಘಪರಿವಾರದ ಅಂಗಸಂಸ್ಥೆಗಳಾದ ‘ಹಿಂದೂ ಸ್ವಯಂಸೇವಕ ಸಂಘ’ ಹಾಗೂ ‘ವಿಶ್ವಹಿಂದೂ ಪರಿಷತ್ ಆಫ್ ಅಮೆರಿಕ’ ಇತ್ತೀಚಿನ ವರ್ಷಗಳಲ್ಲಿ ಆರೆಸ್ಸೆಸ್ ಸಿದ್ಧಾಂತಗಳನ್ನು ಪ್ರಚಾರಪಡಿಸಲು ಆಗಾಗ್ಗೆ ಯುವಜನ ಹಾಗೂ ಕೌಟುಂಬಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಬೋಧನಾ ತರಗತಿಗಳು, ಶಿಬಿರಗಳು, ಸಮಾರಂಭಗಳು ಮತ್ತು ಹಿಂದೂ ಸಾಂಸ್ಕೃತಿಕ ಅಸ್ಮಿತೆಯನ್ನು ಪ್ರತಿಪಾದಿಸುವ ಪ್ರದರ್ಶನಗಳನ್ನು ಕೂಡಾ ಆಗಾಗ್ಗೆ ಅದು ಆಯೋಜಿಸುತ್ತಿದೆ.

ಹಿಂದೂಸ್ವಯಂಸೇವಕ ಸಂಘವು ಅಮೆರಿಕದಲ್ಲಿ ತನಗೆ 140 ಶಾಖೆಗಳಿರುವುದಾಗಿ 2014ರ ಮೇ ತಿಂಗಳಲ್ಲಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. 2002 ಹಾಗೂ 2012ರ ಮಧ್ಯೆ ಹಿಂದೂಸ್ವಯಂಸೇವಕ ಸಂಘ ಹಾಗೂ ವಿಎಚ್‌ಪಿ ಆಫ್ ಅಮೆರಿಕ ಸಂಘಟನೆಗಳು 25 ಲಕ್ಷ ಡಾಲರ್‌ಗೂ ಅಧಿಕ ಹಣವನ್ನು ಯುವಜನ ಹಾಗೂ ಕೌಟುಂಬಿಕ ಕಾರ್ಯಕ್ರಮಗಳಿಗಾಗಿ
ವ್ಯಯಿಸಿದ್ದವು. ಇಂತಹ ಕಾರ್ಯಕ್ರಮಗಳಲ್ಲಿ ಬಳಸಲಾಗುವ ಸಾಹಿತ್ಯಗಳಲ್ಲಿ ಹೆಚ್ಚಿನವು ಸಂಘಪರಿವಾರದ ನಾಯಕತ್ವ ಹಾಗೂ ಬ್ರಾಹ್ಮಣ್ಯದ ಬಗ್ಗೆ ಹೆಚ್ಚು ಮಹತ್ವವನ್ನು ನೀಡುವಂತಹ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡಿರುತ್ತವೆ. ಆದರೆ ಭಾರತದ ಪರಂಪರೆಗೆ ಸಾಮಾಜಿಕವಾಗಿ ಕೆಳವರ್ಗಕ್ಕೆ ಸೇರಿದ ಜನರ ಹಾಗೂ ಹಿಂದೂಯೇತರ ಸಮುದಾಯಗಳ ಕೊಡುಗೆಯನ್ನು ಅವು ಕಡೆಗಣಿಸಿವೆ.

ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ಸಂಘಪರಿವಾರದ ಅಂಗಸಂಸ್ಥೆಯಾದ ಹಿಂದೂ ಸ್ಟೂಡೆಂಟ್ಸ್ ಕೌನ್ಸಿಲ್‌ನ ಶಾಖೆಗಳು ಅಮೆರಿಕ ಹಾಗೂ ಕೆನಡ ದೇಶಗಳ 78
ವಿಶ್ವವಿದ್ಯಾನಿಲಯ ಹಾಗೂ ಕಾಲೇಜ್ ಕ್ಯಾಂಪಸ್‌ಗಳಲ್ಲಿ ಸಕ್ರಿಯವಾಗಿವೆ.

ಡ್ಯೂಕ್ ವಿಶ್ವವಿದ್ಯಾನಿಲಯ, ಎಮೊರಿ ವಿಶ್ವವಿದ್ಯಾನಿಲಯ, ಜೋನ್ಸ್ ಹಾಪ್‌ಕಿನ್ಸ್ ವಿ.ವಿ., ಮ್ಯಾಸಚ್ಯೂಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಮ್ಯಾಕ್‌ಗಿಲ್ ವಿ.ವಿ., ನ್ಯೂಯಾರ್ಕ್ ವಿ.ವಿ., ಮ್ಯಾಡಿಸನ್‌ನಲ್ಲಿರುವ ವಿಸ್ಕೊನ್‌ಸಿನ್ ವಿ.ವಿ., ಸ್ಟಾನ್‌ಫೋರ್ಡ್ ವಿ.ವಿ., ಸೈರಾಕ್ಯೂಸ್ ವಿ.ವಿ., ಬರ್ಕಿಲಿ, ಇರ್ವಿನ್ ಮತ್ತು ಸ್ಯಾನ್‌ಡಿಯೊಗೊದಲ್ಲಿರುವ ಕ್ಯಾಲಿಫೋರ್ನಿಯ ವಿ.ವಿ.ಯ ಕ್ಯಾಂಪಸ್‌ಗಳು, ಆಸ್ಟಿನ್ ಹಾಗೂ ಹೌಸ್ಟನ್‌ಗಳಲ್ಲಿರುವ ಟೆಕ್ಸಾಸ್ ವಿ.ವಿ., ಕೆನಡಾದ ಒಟ್ಟಾವ ವಿ.ವಿ. ಇವು ಹಿಂದೂ ಸ್ಟೂಡೆಂಟ್ಸ್ ಕೌನ್ಸಿಲ್ ಸಕ್ರಿಯವಾಗಿರುವ ಕೆಲವು ಶಿಕ್ಷಣ ಸಂಸ್ಥೆಗಳಾಗಿವೆ.

2001ರಿಂದ 2012ರವರೆಗೆ, ಸಂಘಪರಿವಾರದ ಐದು ಅಂಗಸಂಸ್ಥೆಗಳು ( ಭಾರತ ಅಭಿವೃದ್ಧಿ ಹಾಗೂ ಪರಿಹಾರ ನಿಧಿ, ಎಕಾಲ್ ವಿದ್ಯಾಲಯ ಫೌಂಡೇಶನ್ ಆಫ್ ಅಮೆರಿಕ, ಪರಂಶಕ್ತಿ ಪೀಠ, ಸೇವಾ ಇಂಟರ್‌ನ್ಯಾಶನಲ್ ಹಾಗೂ ವಿಶ್ವಹಿಂದೂ ಪರಿಷತ್ ಆಫ್ ಅಮೆರಿಕ) ತಮ್ಮ
ಕಾರ್ಯಕ್ರಮಗಳಿಗಾಗಿ ಸುಮಾರು 5.50 ಕೋಟಿ ಡಾಲರ್ ಹಣವನ್ನು ಸಂಗ್ರಹಿಸಿದ್ದವು. ಆದರೆ ಈ ಹಣದ ಹೆಚ್ಚಿನ ಭಾಗವನ್ನು ಅವು ಭಾರತದಲ್ಲಿರುವ ಸಂಘಪರಿವಾರದ ಸಂಘಟನೆಗಳಿಗೆ ಕಳುಹಿಸಿಕೊಟ್ಟಿದ್ದವು.

ಈ ಹಿನ್ನೆಲೆಯಲ್ಲಿ ಕೆಳಗೆ ಉಲ್ಲೇಖಿಸಲಾದ ಅಂಶಗಳ ಬಗ್ಗೆ ವಿಶೇಷ ತನಿಖೆ ನಡೆಯಬೇಕಾದ ಅಗತ್ಯವಿದೆ. ಎ.)ಸಂಘಪರಿವಾರಕ್ಕೆ ಅಮೆರಿಕದಿಂದ ಬರುತ್ತಿರುವ ಅರ್ಥಿಕ ನಿಧಿಯು ಯಾವ ಮೂಲಗಳಿಂದ ಬರುತ್ತಿವೆಯೆಂಬ ಬಗ್ಗೆ ವಿಚಾರಣೆ ನಡೆಯಬೇಕು.
ಬಿ.) ಅಮೆರಿಕದಲ್ಲಿ ಸಂಘಪರಿವಾರದ ಅಂಗಸಂಸ್ಥೆಗಳು ಯಾವ ಉದ್ದೇಶಕ್ಕಾಗಿ ಹಣವನ್ನು ವಿನಿಯೋಗಿಸಿವೆಯೆಂಬುದನ್ನು ದೃಢಪಡಿಸಿಕೊಳ್ಳಬೇಕಾಗಿದೆ.
ಸಿ.) ಅಮೆರಿಕದಲ್ಲಿರುವ ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳು ಭಾರತಕ್ಕೆ ರವಾನಿಸಿರುವ ನಿಧಿಯನ್ನು ಸ್ವೀಕರಿಸುವ ಸಂಸ್ಥೆಯ ನಡೆಸುತ್ತಿರುವ ಚಟುವಟಿಕೆಗಳಿಂದ ಉಂಟಾಗುವ ಪರಿಣಾಮಗಳು.

ಹಿಂದೂ ರಾಷ್ಟ್ರೀಯವಾದಿ ಗುಂಪುಗಳು ಅಮೆರಿಕದ ಶೈಕ್ಷಣಿಕ ವಲಯಗಳಲ್ಲಿ
ಮೂಗುತೂರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಹೆಚ್ಚುತ್ತಿದೆ. ನಿರ್ದಿಷ್ಟವಾಗಿ ಇತಿಹಾಸದ ವಿವಿಧ ವಿಭಾಗಗಳಲ್ಲಿ, ಧಾರ್ಮಿಕ ಅಧ್ಯಯನಗಳಲ್ಲಿ, ಭಾರತ ಅಧ್ಯಯನ (ಇಂಡೋಲಜಿ) ಮತ್ತಿತರ ಕ್ಷೇತ್ರಗಳಲ್ಲಿ ಅವು ತಮ್ಮ ಪ್ರಭಾವವನ್ನು
ಬೀರುತ್ತಿವೆ. ಅಮೆರಿಕದಲ್ಲಿ ಹಿಂದೂ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸುವ ಯೋಜನೆಯನ್ನು ಕೂಡಾ ಅಮೆರಿಕದ ಹಿಂದೂ ಸಂಘಟನೆಗಳು ಹಮ್ಮಿಕೊಂಡಿವೆ. ವೇದ ಅಧ್ಯಯನಗಳ ವಿಶ್ವ ಸಂಘಟನೆ ಎಂಬ ಧಾರ್ಮಿಕ ಅಧ್ಯಯನ ಸಂಸ್ಥೆ ಹಾಗೂ ಅರ್ಥಿಕ ನೆರವಿನ ಸಂಸ್ಥೆಯನ್ನೂ ಅದು ಈಗಾಗಲೇ ಸ್ಥಾಪಿಸಿದೆ. ಇನ್‌ಫಿನಿಟಿ ಫೌಂಡೇಶನ್, ವಿವೇಕ್ ಕಲ್ಯಾಣ ಹಾಗೂ ಶೈಕ್ಷಣಿಕ ಪ್ರತಿಷ್ಠಾನ ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಧಾರ್ಮಿಕ ಹಿನ್ನೆಲೆಯ ಸಂಘಟನೆಗಳಾಗಿವೆ.

2001ರಿಂದ 2013ರವರೆಗೆ, ಇನ್‌ಫಿನಿಟಿ ಪ್ರತಿಷ್ಠಾನವು ಸಂಶೋಧಕರಿಗೆ, ಶೈಕ್ಷಣಿಕ ಸಂಘಟನೆಗಳಿಗೆ 1,9 ದಶಲಕ್ಷ ಡಾಲರ್‌ಗೂ ಅಧಿಕ ಹಣವನ್ನು ದೇಣಿಗೆಯನ್ನು ನೀಡಿತ್ತು. ಅಸೋಸಿಯೇಶನ್ ಆಫ್ ಏಶ್ಯನ್ ಸ್ಟಡೀಸ್, ಕ್ಯಾಲಿಫೋರ್ನಿಯ ಇನ್ಸ್‌ಟಿಟ್ಯೂಟ್ ಆಫ್ ಇಂಟಿಗ್ರಲ್ ಸ್ಟಡೀಸ್, ಕೊಲಂಬಿಯಾ ವಿವಿ, ಹಾರ್ವರ್ಡ್ ವಿವಿಗಳಲ್ಲಿರುವ ಅಭಿವೃದ್ಧಿ ಹೊಂದುತ್ತಿರುವ ಸಮುದಾಯಗಳ ಅಧ್ಯಯನ ಕೇಂದ್ರ, ರುಟ್‌ಗೆರ್ಸ್‌ ವಿವಿ, ಹವಾಯಿ ವಿವಿ, ಆಸ್ಟಿನ್‌ನ ಟೆಕ್ಸಾಸ್ ವಿ.ವಿ.ಗಳಲ್ಲಿರುವ ಅಧುನಿಕ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆಗಳ ಜೊತೆಗೂ ಅದು ಆರ್ಥಿಕ ದೇಣಿಗೆಯನ್ನು ನೀಡಿದೆ. (ಕೃಪೆ:countercurrents.org)

ಇಂಡೋ-ಅಮೆರಿಕನ್ ಸಮುದಾಯಗಳಲ್ಲಿ ಸಂಘಪರಿವಾರದ ನಾಯಕತ್ವ

ಕಳೆದ ಎರಡು ದಶಕಗಳಲ್ಲಿ ಇಂಡೋ-ಅಮೆರಿಕನ್ ಸಮುದಾಯಗಳ ನಾಯಕತ್ವವನ್ನು ಸಂಘಪರಿವಾರದ ಅಂಗಸಂಸ್ಥೆಗಳು ವಹಿಸಿಕೊಂಡಿವೆ. ಇದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಘಟನೆಗಳನ್ನು ಇಲ್ಲಿ ನೀಡಿದೆ.

1) 2002ರ ಮಾರ್ಚ್‌ನಲ್ಲಿ ಬಿಜೆಪಿಯ ಸಾಗರೋತ್ತರ ದೇಶಗಳ ಸ್ನೇಹಿತರು (ಓಎಫ್‌ಬಿಜೆಪಿ), ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿ 2002ರ ಮಾರ್ಚ್ ತಿಂಗಳ ಆರಂಭದಲ್ಲಿ ಅಮೆರಿಕದ ಶಾಸನಸಭೆಗಳ ಸದಸ್ಯರಿಗಾಗಿ ಏರ್ಪಡಿಸಿದ ಭೋಜನಕೂಟವೊಂದರ ಸಹಪ್ರಾಯೋಜಕತ್ವ ವಹಿಸಿದ್ದವು. ಇದೇ ಸಂದರ್ಭದಲ್ಲಿ ಬಿಜೆಪಿ ಆಳ್ವಿಕೆಯ ಗುಜರಾತ್‌ನಲ್ಲಿ ಭುಗಿಲೆದ್ದ ಭೀಕರ ಕೋಮುಹಿಂಸಾಚಾರದಲ್ಲಿ ನೂರಾರು ಅಮಾಯಕ ಮುಸ್ಲಿಮರು ಹತ್ಯೆಗೀಡಾಗಿದ್ದರು.

2) ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ವೇದ ಪ್ರತಿಷ್ಠಾನ ಹಾಗೂ ಹಿಂದೂ ಸ್ವಯಂಸೇವಕ ಸಂಘದ ಶೈಕ್ಷಣಿಕ ಘಟಕವಾದ ಹಿಂದೂ ಶಿಕ್ಷಣ ಪ್ರತಿಷ್ಠಾನವು, ಹಿಂದೂ ರಾಷ್ಟ್ರೀಯವಾದಿ ಸಿದ್ಧಾಂತಗಳಿಗೆ ಆದ್ಯತೆಯನ್ನು ನೀಡುವ ಮತ್ತು ಪುರಾತನ ಭಾರತದಲ್ಲಿ ಪ್ರಚಲಿತದಲ್ಲಿದ್ದ ಲಿಂಗ ಹಾಗೂ ಜಾತಿ ಶೋಷಣೆಯ ವಿಷಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡದ ಹಾಗೆ ಕ್ಯಾಲಿಫೋರ್ನಿಯ ವಿವಿಯ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಯತ್ನಿಸಿತು.
3) ಕ್ಯಾಲಿಫೋರ್ನಿಯ ವಿವಿಯ ಪಠ್ಯಪುಸ್ತಕಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಅವಹೇಳನ ಮಾಡಲಾಗಿದೆಯೆಂಬ ವಿವಾದವು ಭುಗಿಲೆದ್ದ ಬಳಿಕ, ಹಿಂದೂ ಅಮೆರಿಕನ್ ಪ್ರತಿಷ್ಠಾನವನ್ನು ಅಮೆರಿಕದ ರಾಜಕಾರಣಿಗಳು, ಹಿಂದೂ ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಕನೆಂಬುದಾಗಿ ಪರಿಗಣಿಸುತ್ತಿದ್ದಾರೆ.
ತನಿಖೆಯಾಗಬೇಕಿದೆ

ಎ) ದಕ್ಷಿಣ ಏಶ್ಯದಲ್ಲಿ ಸಂಘಪರಿವಾರದ ಶಾಮೀಲಾಗಿರುವ ಹಿಂಸಾಕೃತ್ಯಗಳಲ್ಲಿ
ಅಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ಸಂಘಪರಿವಾರದ ಅಂಗಸಂಸ್ಥೆಗಳು ಹಾಗೂ ಅದರ ಸದಸ್ಯರ ಪಾತ್ರವಿರುವ ಬಗ್ಗೆ ತನಿಖೆಯಾಗಬೇಕಿದೆ.
ಬಿ) ಹಿಂದೂ ರಾಷ್ಟ್ರೀಯವಾದಿ ಗುಂಪುಗಳು ಪ್ರಚೋದಿಸಿದ ಹಿಂಸಾಚಾರಕ್ಕೆ ಬೆಂಬಲ ನೀಡುವಲ್ಲಿ ಅಮೆರಿಕ ಮೂಲದ ಇತರ ಗುಂಪುಗಳ ಹಾಗೂ ವ್ಯಕ್ತಿಗಳ ಪಾತ್ರವಿರುವ ಬಗ್ಗೆಯೂ ವಿಚಾರಣೆ ನಡೆಯಬೇಕಿದೆ. (ಕೃಪೆ: ವಾರ್ತಾ ಭಾರತಿ, 04.07.2014)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s