ಖಲೀಫ ಬಾಗ್ದಾದಿ ಪ್ರತ್ಯಕ್ಷ

Posted: ಜುಲೈ 7, 2014 in Uncategorized

ಬಾಗ್ದಾದ್‌ (ಎಎಫ್‌ಪಿ): ಐಎಸ್‌ಐಎಸ್‌ (ಇಸ್ಲಾ­ಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಆ್ಯಂಡ್‌ ಸಿರಿಯಾ) ನಾಯಕ ಸ್ವಯಂ­ಘೋಷಿತ ಖಲೀಫ (ಧರ್ಮ­ಗುರು) ಅಬು ಬಕರ್‌ ಅಲ್‌ ಬಾಗ್ದಾದಿ ಅಚಾನಕ್ಕಾಗಿ ಇರಾಕ್‌ನ ಮೊಸುಲ್‌ ನಗರದಲ್ಲಿ ಶನಿವಾರ
ಕಾಣಿಸಿ­ಕೊಂಡಿದ್ದಾನೆ. ಇದನ್ನು ಪುಷ್ಟೀಕರಿಸುವಂತಹ ವಿಡಿಯೊ ತುಣುಕು ಶನಿವಾರ ಅಂತರ್ಜಾಲದಲ್ಲಿ ಬಿತ್ತರ­ವಾಗಿದೆ.

ಈ ಬೆಳವಣಿಗೆಯಿಂದ ಇರಾಕ್‌ನಲ್ಲಿ ಹಿಂಸಾಚಾರ ನಡೆಸುತ್ತಿರುವ ಇಸ್ಲಾಂ ಮೂಲಭೂತವಾದಿ ಐಎಸ್‌­ಐಎಸ್‌ ಉಗ್ರರ ಗುಂಪು ಮತ್ತಷ್ಟು ಪ್ರಬಲವಾಗುವ ಲಕ್ಷಣಗಳಿವೆ ಎನ್ನಲಾಗಿದೆ. ಈ ಗುಂಪು ಇರಾಕ್‌ನ ಉತ್ತರ ಭಾಗದ ಐದು ಪ್ರಾಂತ್ಯಗಳು ಮತ್ತು ಬಾಗ್ದಾದ್‌ನ ಪಶ್ಚಿಮ ಪ್ರದೇಶವನ್ನು ಈಗಾಗಲೇ ವಶ ಪಡಿಸಿಕೊಂಡಿದೆ.

ಮೊಸುಲ್‌ ಕೇಂದ್ರಭಾಗದಲ್ಲಿರುವ ಅಲ್‌ನೂರ್‌ ಮಸೀದಿ­ಯಲ್ಲಿ ಪ್ರಾರ್ಥನೆ ಮಾಡಲು ಬಂದಿದ್ದ ಜನ­ರನ್ನು ಉದ್ದೇಶಿಸಿ ಬಾಗ್ದಾದಿ ಮಾತನಾಡಿರುವ ವಿಡಿಯೊ ತುಣುಕಿನಲ್ಲಿ, ಕಪ್ಪು ಬಣ್ಣದ ನಿಲುವಂಗಿ, ಮುಂಡಾಸು ಮತ್ತು ಭಾಗಶಃ ನರೆತ ಉದ್ದದ ಗಡ್ಡ ಬಿಟ್ಟಿರುವ ತೆರೆಯಮರೆಯಲ್ಲಿ ನಿಂತಂತಿರುವ ದೃಶ್ಯ ಇದೆ.

‘ನಾನು ವಲಿ (ಮುಖಂಡ). ನಿಮಗೆ ಮಾರ್ಗ­ದರ್ಶನ ಮಾಡುವ ಅಗ್ರಪೀಠದಲ್ಲಿ ಇರುವವನು. ನನ್ನ ಉಪದೇಶ ಸರಿ ಎನಿಸಿದರೆ, ನನಗೆ ಸಹಾಯ ಮಾಡಿ. ತಪ್ಪಿದ್ದರೆ ನನ್ನನ್ನು ಸರಿದಾರಿಗೆ ತರಲು ಸಲಹೆ ನೀಡಿ. ಎಲ್ಲಿಯವರೆಗೆ ನಾನು ದೇವರ ಆದೇಶ ಪಾಲಿಸು­ವೆನೋ ಅಲ್ಲಿಯವರೆಗೆ ನೀವು ನನ್ನ ಆದೇಶವನ್ನು ಅನುಸರಿಸಿ’ ಎಂದು ಹೇಳಿದ್ದಾನೆ.

ಮೊಸುಲ್‌ ನಗರ ಮತ್ತು ನಿನೇವೆ ಪ್ರಾಂತ್ಯದಲ್ಲಿನ ಸುನ್ನಿ ಮತ್ತು ಶಿಯಾಗಳ
ಮಸೀದಿಗಳನ್ನು ನೆಲಸಮ ಮಾಡುವ ದೃಶ್ಯಗಳೂ ಈ ವಿಡಿಯೊದಲ್ಲಿದೆ ಎಂದು ತಿಳಿದುಬಂದಿದೆ.

ಬಾಗ್ದಾದಿ ಇದೇ ಮೊದಲ ಬಾರಿಗೆ ಇರಾಕ್‌ನಲ್ಲಿ ಕಾಣಿಸಿ­ಕೊಂಡ ಅಧಿಕೃತ ವಿಡಿಯೊ ತುಣುಕು ಇದಾ­ಗಿದೆ ಎಂದು ಇಸ್ಲಾಂ ಆಂದೋಲನಗಳ ವಿಶ್ಲೇಷಕ ಐಮನ್‌ ಅಲ್‌ ತಮೀಮಿ ಹೇಳಿದ್ದಾರೆ. 2008ರಲ್ಲಿ ದೊರೆತ ವಿಡಿಯೊ ದೃಶ್ಯ­ದಲ್ಲಿ ಬಾಗ್ದಾದಿ ಬೇರೊಂದು ಹೆಸರಿನಲ್ಲಿ ಕಾಣಿಸಿಕೊಂಡಿದ್ದ ಎನ್ನಲಾಗಿದೆ.

ಶತ್ರುಗಳನ್ನು ನಿರ್ದಯವಾಗಿ ಹತ್ಯೆ ಮಾಡುವ ಬಾಗ್ದಾದಿ, ಇರಾಕ್‌ನ ಸಮಾರಾ ನಗರದಲ್ಲಿ 1971ರಲ್ಲಿ ಜನಿಸಿದ ಎಂದು ನಂಬಲಾಗಿದೆ. ಸದ್ದಾಂ ಹುಸೇನ್‌ ಪದಚ್ಯುತಗೊಳಿ­ಸಲು 2003ರಲ್ಲಿ ಅಮೆ­ರಿಕ ನಡೆಸಿದ ಸೇನಾ ಕಾರ್ಯಾ­ಚರಣೆ ವಿರುದ್ಧ ಈತ ಹೋರಾಡಿದ ಎನ್ನಲಾಗಿದೆ.

ಕೆಲವು ಕಾಲ ಅಮೆರಿಕದಲ್ಲಿ ಕೈದಿಯಾಗಿದ್ದ ಬಾಗ್ದಾದಿ, 2010ರಲ್ಲಿ ಇರಾಕ್‌ನ ಇಸ್ಲಾಂ ಮೂಲ­ಭೂತ­ವಾದಿ ಗುಂಪಿನ ನಾಯಕತ್ವ ವಹಿಸಿಕೊಂಡ.

ಜನರನ್ನು ಹೊರಗಟ್ಟಿದ ಉಗ್ರರು
ಬೈರೂತ್‌ (ಎಎಫ್‌ಪಿ): ಐಎಸ್‌ಐಎಸ್‌ಐ ಉಗ್ರರು ಪೂರ್ವ ಸಿರಿಯಾ ಸುಹೈಲ್‌ ಪಟ್ಟಣದಿಂದ 30,000ಕ್ಕೂ ಹೆಚ್ಚು ಮಂದಿಯನ್ನು ಹೊರಗಟ್ಟಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕು ಸಂಸ್ಥೆ ಹೇಳಿದೆ.
ಉಗ್ರರು ಗುರುವಾರ ಸುಹೈಲ್‌ ಪಟ್ಟಣವನ್ನು ಅಲ್‌ಖೈದಾದ ಅಲ್‌ನುಸ್ರಾ ಬಣದಿಂದ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಅಲ್ಲಿನ ನಿವಾಸಿಗಳನ್ನು ಬಲವಂತವಾಗಿ ಹೊರಗಟ್ಟಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s