ಮಾಹಿತಿ ಹಕ್ಕು ಪ್ರಕರಣ: ಬಳಕೆದಾರರ ವೇದಿಕೆಗೆ ದಂಡ

Posted: July 7, 2014 in Uncategorized

ಉಡುಪಿ: ಮಾಹಿತಿ ಹಕ್ಕು ಕಾಯಿದೆ-2005ರಂತೆ ಅಗತ್ಯ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದವರಿಗೆ ಕೋರಿದ ಮಾಹಿತಿ ನೀಡದೆ ಕಾಯಿದೆಯನ್ನು ಉಲ್ಲಂಘಿಸಿದ ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕರೂ, ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ ಕಡಿಯಾಳಿ ದಾಮೋದರ ಐತಾಳ್ ಅವರಿಗೆ ಕರ್ನಾಟಕ ಮಾಹಿತಿ ಆಯೋಗವು 5 ಸಾವಿರ ರು. ದಂಡ ಮತ್ತು ಅರ್ಜಿದಾರರಿಗೆ 3 ಸಾವಿರ ರು. ನಷ್ಟ ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿದೆ.

ಉಡುಪಿಯ ಮಾಹಿತಿ ಹಕ್ಕು ಕಾರ್ಯಕರ್ತರಾದ ಕೆ.ಎಸ್.ಉಪಾಧ್ಯ ಅವರು 2010ರ ಸೆಪ್ಟೆಂಬರ್ 8ರಂದು ಬಳಕೆದಾರರ ವೇದಿಕೆಗೆ ಅರ್ಜಿ ಸಲ್ಲಿಸಿ, ಸರಕಾರ ನೀಡಿದ ಅನುದಾನದ ಹಣದಲ್ಲಿ 10 ಸಾವಿರ ರು.ಗೆ ಮೇಲ್ಪಟ್ಟು ಮಾಡಿದ ಕರ್ಚಿನ ವಿವರ ಮತ್ತು ಓಚರ್ ಪ್ರತಿಗಳನ್ನು ಕೋರಿದ್ದರು.

ಕೋರಿದ ಮಾಹಿತಿಗಳನ್ನು ನಿಗದಿತ ಅವಧಿಯಲ್ಲಿ ಬಳಕೆದಾರರ ವೇದಿಕೆಯು ನೀಡದೆ ಕಾಯಿದೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕೆ.ಎಸ್.ಉಪಾಧ್ಯ ಅವರು 2012ರ ನವೆಂಬರ್ 18ರಂದು ಮೇಲ್ಮನವಿ ಪ್ರಾಧಿಕಾರವಾದ ಜಿಲ್ಲಾಧಿಕಾರಿಯವರಿಗೆ ಒಂದನೇ ಅಪೀಲ್ ಸಲ್ಲಿಸಿದ್ದರು.

ಮೇಲ್ಮನವಿ ಪ್ರಾಧಿಕಾರದಿಂದಲೂ ಕೋರಿದ ಮಾಹಿತಿ ಲಭಿಸದೆ ಕಾಯಿದೆಯನ್ನು ಉಲ್ಲಂಘಿಸಿದ ಕಾರಣ ಕಾಯಿದೆಯಂತೆ ಉಪಾಧ್ಯ ಅವರು 2013ರ ಜನವರಿ 13ರಂದು ಮಾಹಿತಿ ಆಯೋಗಕ್ಕೆ ಎರಡನೇ ಅಪೀಲ್ ಸಲ್ಲಿಸಿದ್ದರು.

2014ರ ಜೂನ್ 14ರಂದು ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ಕಾಯಿದೆ ಉಲ್ಲಂಘಿಸಿದ್ದಕ್ಕಾಗಿ ಬಳಕೆದಾರರ ವೇದಿಕೆಗೆ 5 ಸಾವಿರ ರು. ದಂಡ ಮತ್ತು ಅರ್ಜಿದಾರರಿಗೆ 3 ಸಾವಿರ ರು. ನಷ್ಟ ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ನೀಡಿತು.

ಕರ್ನಾಟಕ ಮಾಹಿತಿ ಆಯೋಗವು ಉಡುಪಿ ಬಳಕೆದಾರರ ವೇದಿಕೆಗೆ ದಂಡ ವಿಧಿಸಿದ ಎರಡನೇ ಪ್ರಕರಣ ಇದಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s