ವಸತಿಗಾಗಿ ಕಾದು ಸುಜ್ಲಾನ್ ಜಾಗದಲ್ಲೇ ಮನೆ ಕಟ್ಟಿದ ಕೊರಗ ಕುಟುಂಬಗಳು

Posted: ಜುಲೈ 10, 2014 in Uncategorized

ಪಡುಬಿದ್ರಿ: ಆರೇಳು ವರ್ಷಗಳಿಂದ ಸುಜ್ಲಾನ್ ಪುನರ್ವಸತಿ ನಿವಾಸಕ್ಕಾಗಿ ಕಾದು ಕಾದು ಸಾಕಾದ 15ಕ್ಕೂ ಅಧಿಕ ಕೊರಗ ಸಮುದಾಯದ ಕುಟುಂಬಿಕರು ಸುಜ್ಲಾನ್ ಕಂಪನಿಯ ಅಧೀನ ಜಾಗದಲ್ಲಿ ಜೋಪಡಿ ಕಟ್ಟಿ ವಾಸಿಸಲು ಆರಂಭಿಸಿದ್ದಾರೆ.

 

ಈಗಾಗಲೇ ತಗಡು ಶೀಟು ಹಾಕಿ 10 ಮನೆ ನಿರ್ಮಾಣವಾಗಿದ್ದು, ಮತ್ತೆ ಐದು ಮನೆ ನಿರ್ಮಾಣ ಹಂತದಲ್ಲಿದೆ. ಇವರೆಲ್ಲ ಅಲ್ಲಿಯೇ ವಾಸಿಸಲು ಆರಂಭಿಸಿದ್ದಾರೆ. ‘ನಾವು ಈ ಮೊದಲು ಪಂಚಕಾಡು ಬಳಿ ವಾಸಿಸುತ್ತಿದ್ದೆವು. ಸುಜ್ಲಾನ್ ಕಂಪನಿಯ ಆಗಮನದ ಸಂದರ್ಭ ನಮ್ಮ ಜಾಗ ಸ್ವಾಧೀನಪಡಿಸಿಕೊಂಡು ನಮಗೆ ಪುನರ್ವಸತಿ ಕಲ್ಪಿಸುವ ಭರವಸೆ ನೀಡಲಾಗಿತ್ತು. ಆ ಬಳಿಕ ನಾವು ಕೆಲವು ಕುಟುಂಬಗಳಲ್ಲಿ ಒಕ್ಕಲುತನದೊಂದಿಗೆ ಕೇವಲ ಊಟೋಪಚಾರಕ್ಕಾಗಿ ಕೆಲಸ ಮಾಡಿಕೊಂಡಿದ್ದೆವು. ನಾವು ಈ ಭೂಮಿಯ ಮೂಲ ನಿವಾಸಿಗಳು. ನಮಗೂ ಬದುಕುವ ಹಕ್ಕಿದೆ’ ಎಂದು ಕೊರಗ ಸಮುದಾಯದ ಶ್ರೀಮತಿ ಎಂಬವರು ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

 

ನಮಗೆ ಪುನರ್ವಸತಿ ಕಲ್ಪಿಸಲು ಕಳೆದ 6-7 ವರ್ಷಗಳಿಂದ ಜನಪ್ರತಿನಿಧಿಗಳು ಮತ್ತು ಇಲಾಖೆಗಳಿಗೆ ಅಲೆದು ಸಾಕಾಗಿದೆ. ಸುಜ್ಲನ್ ಕಂಪನಿಗೂ ಅಹವಾಲು ಸಲ್ಲಿಸಿದ್ದೇವೆ. ನಮಗೆ ಸ್ವಂತ ಜಾಗ ಬೇಕೆನ್ನುವ ಉದ್ದೇಶದಿಂದ ಹಾಗೂ ಜೀತಮುಕ್ತ ಜೀವನ ನಡೆಸಲು ನಾವು ಈಗ ಸುಜ್ಲಾನ್‌ಗೆ ಸೇರಿದ ಜಾಗದಲ್ಲಿ ದಾನಿಗಳ ನೆರವಿನಿಂದ ಮನೆ ನಿರ್ಮಿಸಿದ್ದೇವೆ. ಯಾವುದೇ ಒತ್ತಡ ಬಂದರೂ ನಾವು ಇಲ್ಲಿಂದ ಏಳುವುದಿಲ್ಲ. ನಾವು ಸತ್ತರೂ ಬದುಕಿದರೂ ಇಲ್ಲಿಯೇ. ನಮಗೆ ಇಲ್ಲಿ ಮನೆ ನಿವೇಶನದ ಹಕ್ಕು ಪತ್ರ ನೀಡಬೇಕು. ವಿದ್ಯುತ್, ನೀರು ಕೊಡಬೇಕು. ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

 

ತಾ.ಪಂ ಸದಸ್ಯ ಭಾಸ್ಕರ್ ಪಡುಬಿದ್ರಿ ಮಾತನಾಡಿ, ಇವರು ಇಲ್ಲಿನ ಮೂಲ ನಿವಾಸಿಗಳು. ಇವರಿಗೂ ಬದುಕುವ ಹಕ್ಕಿದೆ ಎಂದರು. ಪಡುಬಿದ್ರಿ ಗ್ರಾ.ಪಂ ಅಧ್ಯಕ್ಷ ವಿಜಯ ಎಂ.ಅಮೀನ್ ಮಾತನಾಡಿ, ಕೊರಗ ಸಮುದಾಯದ ಸಮಸ್ಯೆ ಬಗ್ಗೆ ನಮಗೆ ಅರಿವಿದೆ. ಸಂಬಂಧಿಸಿದ ಇಲಾಖೆ ಹಗೂ ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s