ಇಸ್ರೇಲ್-ಫೆಲೆಸ್ತೀನ್ ಬಾಲಿಶ ವರ್ತನೆ: ಡೆಸ್ಮಂಡ ್ ಟುಟು

Posted: July 11, 2014 in Uncategorized

ಜೊಹಾನ್ಸ್‌ಬರ್ಗ್: ಫೆಲೆಸ್ತೀನ್ ಹಾಗೂ ಇಸ್ರೇಲ್ ಪಡೆಗಳ ನಡುವಿನ ಭೀಕರ ಸಂಘರ್ಷವನ್ನು ಮುಕ್ತಾಯಗೊಳಿಸುವಂತೆ ಆಗ್ರಹಿಸಿರುವ ವಿಶ್ರಾಂತ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು, ಉಭಯ ಪಕ್ಷಗಳು ಕಾಳಗವನ್ನು ಕೈಬಿಟ್ಟು ಸಂಯಮ ಕಾಯ್ದುಕೊಳ್ಳುವಂತೆ ವಿನಂತಿಸಿದ್ದಾರೆ.

‘‘ಇಸ್ರೇಲ್ ಹಾಗೂ ಫೆಲೆಸ್ತೀನ್ ಮತ್ತೊಮ್ಮೆ ಮುಯ್ಯಿಗೆ ಮುಯ್ಯಿ ಎಂಬಂತೆ
ಹಿಂಸಾಚಾರಕ್ಕೆ ಮುಂದಾದಲ್ಲಿ ಯಾರೊಬ್ಬರಿಗೂ ಗೆಲುವು ಸಾಧ್ಯವಾಗದು. ಬದಲಿಗೆ ಉಭಯ ಪಕ್ಷಗಳು ಅಪಾರ ಹಾನಿಯನ್ನು ಅನುಭವಿಸಬೇಕಾಗುತ್ತದೆ’’ ಎಂದು ಟುಟು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಮಕ್ಕಳು ಆಟದ ಮೈದಾನದಲ್ಲಿ ಹೊರಳಾಡಿ ಧೂಳೆಬ್ಬಿಸುವಂತೆ, ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಒಬ್ಬರು ಮತ್ತೊಬ್ಬರ ಮೇಲೆ ಎರಗುತ್ತಿದ್ದಾರೆ. ಇದರಿಂದ ಶಾಂತಿ ಸಾಧಿಸಲು ಸಾಧ್ಯವಿಲ್ಲ. ಒಬ್ಬರು ಮತ್ತೊಬ್ಬರ ಮೇಲೆ ಆರೋಪ ಪ್ರತ್ಯಾರೋಪಗಳನ್ನಷ್ಟೆ
ಮಾಡಬಹುದಾಗಿದೆ’’ ಎಂದವರು ವಿವರಿಸಿದ್ದಾರೆ.

ಫೆಲೆಸ್ತೀನಿಯರನ್ನು ದಮನಿಸುವ ಮೂಲಕ ಇಸ್ರೇಲ್ ಎಂದಿಗೂ ಭದ್ರತೆ ಹಾಗೂ ಸುರಕ್ಷತೆಯನ್ನು ಸಾಧಿಸಲು ಸಾಧ್ಯವಾಗದು. ಮಾತ್ರವಲ್ಲದೆ, ಹಿಂಸಾಚಾರದ ಮೂಲಕ ಫೆಲೆಸ್ತೀನ್ ಕೂಡಾ ಯಾವತ್ತೂ ಸ್ವಯಮಾಧಿಕಾರ ಸಾಧಿಸಲಾಗದು ಎಂದವರು ಅಭಿಪ್ರಾಯಿಸಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s