ಸ್ವಯಂ ಸೇವಾ ಸಂಸ್ಥೆಗಳಿಗೆ ವಿದೇಶಿ ದೇಣಿಗೆ: ಲೆ ಕ್ಕಪತ್ರ ನೀಡದವರ ವಿರುದ್ಧ ಕ್ರಮಕ್ಕೆ ಆಗ್ರಹ

Posted: ಜುಲೈ 11, 2014 in Uncategorized

ಬೆಂಗಳೂರು: ರಾಜ್ಯದಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳು ವಿದೇಶದಿಂದ 2006-07ರ ಆರ್ಥಿಕ ವರ್ಷದಿಂದ ಈವರೆಗೆ ವಿದೇಶದಿಂದ 1069 ಕೋಟಿ ರೂ.ಗಳ ದೇಣಿಗೆಯನ್ನು ಪಡೆದು ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿವೆ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ರಮೇಶ್‌ಕುಮಾರ್ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಜುಲೈ 10ರಂದು ನಿಯಮ 69ರಡಿಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ವಿದೇಶದಿಂದ ದೇಣಿಗೆ ಪಡೆಯುತ್ತಿರುವ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಲೆಕ್ಕಪತ್ರಗಳನ್ನು ಬಹಿರಂಗಗೊಳಿಸುತ್ತಿಲ್ಲ. ಯಾವ ಉದ್ದೇಶಕ್ಕಾಗಿ ದೇಣಿಗೆಯನ್ನು ಪಡೆಯಲಾಗುತ್ತಿದೆ, ಯಾವ ರೀತಿ ಆ ಹಣವನ್ನು ವ್ಯಯಿಸಲಾಗುತ್ತಿದೆ ಎಂಬ ಮಾಹಿತಿ ಸರಕಾರಕ್ಕೂ ಇರುವುದಿಲ್ಲ ಎಂದರು.

ನಮ್ಮ ದೇಶದಲ್ಲಿ ಮೂರು ಬಗೆಯ ದೇಶಭಕ್ತರಿದ್ದಾರೆ. ಮೊದಲನೆಯವರು ದೇಶದ
ಸ್ವಾತಂತ್ರಕ್ಕಾಗಿ ಹೋರಾಡಿ ಬಲಿದಾನ ನೀಡಿದವರು, ಎರಡನೆಯವರು ದೇಶದಲ್ಲಿರುವ ಸಂಪತ್ತನ್ನು ಸುರಕ್ಷಿತವಾಗಿ ಬೇರೆ ದೇಶಗಳಲ್ಲಿ ಇಟ್ಟಿರುವವರು, ಮೂರನೆಯವರು ದೇಶವನ್ನು ಉದ್ಧಾರ ಮಾಡಲು ವಿದೇಶಗಳಿಂದ ದೇಣಿಗೆ ಪಡೆದು ಅಭಿವೃದ್ಧಿ ಮಾಡುವವರು ಎಂದು ಅವರು ವ್ಯಂಗ್ಯವಾಡಿದರು.

ಸ್ವಯಂ ಸೇವಾ ಸಂಸ್ಥೆಗಳು ವಿದೇಶಗಳಿಂದ ದೇಣಿಗೆ ತಂದು ದೇಶ ಅಭಿವೃದ್ಧಿ ಮಾಡುವುದಾದರೆ, ನಾವೆಲ್ಲ ಇಲ್ಲಿ ದೇಶಕ್ಕೆ ಕ್ಷೌರ ಮಾಡಲು ಇರಬೇಕೆ. 1,069 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ದೇಣಿಗೆ ರೂಪದಲ್ಲಿ ಪಡೆದಿರುವ ಸ್ವಯಂ ಸೇವಾ ಸಂಸ್ಥೆಗಳ ಲೆಕ್ಕಪರಿಶೋಧನೆ ನಡೆಸಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿದೇಶದಿಂದ ಬರುವ ದೇಣಿಗೆಯಿಂದ ದೇಶವನ್ನು ಉದ್ಧಾರ ಮಾಡುವವರು ದೇಶ ಭಕ್ತರು. ನಾವು ದೇಶದ್ರೋಹಿಗಳೇ ಎಂದು ಪ್ರಶ್ನಿಸಿದ ಅವರು, ಕಾನೂನುಬಾಹಿರವಾಗಿ ವಿದೇಶದಿಂದ ದೇಣಿಗೆ ಸಂಗ್ರಹಿಸಿ, ಲೆಕ್ಕ ಪತ್ರ ನೀಡಿದವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s