ರಾಜ್ಯಪಾಲರನ್ನು ಗುಮಾಸ್ತರಂತೆ ನಡೆಸಿಕೊಳ್ಳಲಾ ಗುತ್ತಿದೆ: ಪುರುಷೋತ್ತಮನ್

Posted: July 12, 2014 in Uncategorized

ತಿರುವನಂತಪುರಂ/ಹೊಸದಿಲ್ಲಿ: ನಾಗಾಲ್ಯಾಂಡ್ ರಾಜ್ಯಪಾಲ ವಕ್ಕಮ್ ಪುರುಷೋತ್ತಮನ್ ಶುಕ್ರವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ತನ್ನೊಂದಿಗೆ ಸಮಾಲೋಚನೆ ನಡೆಸದೆ ಮಿಜೋರಾಂನಿಂದ ನಾಗಾಲ್ಯಾಂಡ್‌ಗೆ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯ ರೂಪದಲ್ಲಿ ರಾಷ್ಟ್ರಪತಿಗೆ ಅವರು ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ರಾಜಕೀಯ ದ್ವೇಷ ಸಾಧನೆಗಾಗಿ ರಾಜ್ಯಪಾಲರನ್ನು ಬಳಸಿಕೊಂಡಿರುವ ಎನ್‌ಡಿಎ ಸರಕಾರ ಈ ಹುದ್ದೆಗಳಿಗೆ ಅವಮಾನ ಮಾಡಿದೆ. ಸರಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೇಂದ್ರ ಸರಕಾರ ರಾಜ್ಯಪಾಲರನ್ನು ವರ್ಗಾವಣೆ ಮಾಡಬಾರದು ಎಂದು ರಾಜೀನಾಮೆ ಸಲ್ಲಿಸಿದ ನಂತರ ಅವರು ಹೇಳಿದ್ದಾರೆ.

‘ನನ್ನನ್ನು ವರ್ಗಾವಣೆ ಮಾಡಿದ ರೀತಿ ನನಗೆ ಇಷ್ಟವಾಗಲಿಲ್ಲ. ರಾಜ್ಯಪಾಲರನ್ನು ಗುಮಾಸ್ತರಂತೆ ವರ್ಗಾವಣೆ ಮಾಡಲಾಗದು’ ಎಂದು ಅವರು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಮೊದಲು ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಳುಹಿಸಿಕೊಟ್ಟಿದ್ದರು. ತಮ್ಮನ್ನು ವರ್ಗಾವಣೆ ಮಾಡುವ ಮೊದಲು ಕೇಂದ್ರ ಸರಕಾರ ತಮ್ಮಿಂದಿಗೆ ಸಮಾಲೋಚನೆ ಮಾಡಿರಲಿಲ್ಲ ಎಂದು ಅವರು
ತಿಳಿಸಿದ್ದಾರೆ.

‘ರಾಜ್ಯಪಾಲರ ಸ್ಥಾನ ಎಂಬುದು ಸಾಂವಿಧಾನಿಕ ಹುದ್ದೆ. ಅವರನ್ನು ಕ್ಲಾರ್ಕ್‌ಗಳಂತೆ ಇಲ್ಲವೇ ಕೆಳದರ್ಜೆಯ ನೌಕರರಂತೆ ವರ್ಗಾವಣೆ ಮಾಡಲಾಗದು. ಯುಪಿಎ ಇಲ್ಲವೇ ಎನ್‌ಡಿಎ, ಯಾವುದೇ ಸರಕಾರ ಇಂತಹ ಕೆಲಸ ಮಾಡಿದರೂ ಅದು ತಪ್ಪು’ ಎಂದು ಅವರು ನುಡಿದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s