ಉಡುಪಿ ಜಿ.ಪಂ.ಅಧ್ಯಕ್ಷರಾಗಿ ಉದಯ ಕೋಟ್ಯಾನ್

Posted: ಜುಲೈ 25, 2014 in Uncategorized

ಉಡುಪಿ: ಉಡುಪಿ ಜಿಲ್ಲಾ ಪಮಚಯಿತಿಯ ನೂತನ ಪ್ರಭಾರ ಅಧ್ಯಕ್ಷರಾಗಿ ಉದಯ ಕೋಟ್ಯಾನ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಜಿ.ಪಂ.ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ನಡೆಯುವವವರೆಗೆ ಬಿಜೆಪಿ ಸದಸ್ಯ ಮತ್ತು ಇದುವರೆಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅದ್ಯಕ್ಷರಾಗಿದ್ದ ಕಾರ್ಕಳದ ಉದಯ ಕೋಟ್ಯಾನ್ ಅವರು ಅಧ್ಯಕ್ಷರಾಗಿ
ಮುಂದುವರಿಯಲಿದ್ದು, ಬಳಿಕ ಪೂರ್ಣಪ್ರಮಾಣದ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದುವರೆಗೆ ಉಪೇಂದ್ರ ನಾಯಕ್ ಅವರು ಅಧ್ಯಕ್ಷರಾಗಿದ್ದರು. ಮುಂದಿನ ಮತ್ತು ಕೊನೆಯ ಅವಧಿಯ ಅಧ್ಯಕ್ಷರ ಸ್ಥಾನದ ಚುನಾವಣೆಯ ವಿರುದ್ಧ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದ
ಹಿನ್ನೆಲೆಯಲ್ಲಿ ಕಳೆದ ಕೆಲವು ಸಮಯಗಳಿಂದ ಅತಂತ್ರತೆ ಉಂಟಾಗಿತ್ತು. ಇದೀಗ ಪಂಚಾಯತ್ ರಾಜ್ ಅಧಿನಿಯಮ ಕಾಯಿದೆಯಂತೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಪ್ರಭಾರ ಅದ್ಯಕ್ಷರಾಗಿ ಅಧಿಕಾರ ವಹಸಿಕೊಳ್ಳಲು ಸರಕಾರ ಅವಕಾಶ ಮಾಡಿಕೊಟ್ಟಿದೆ.

ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಎಂ.ಕನಗವಲ್ಲಿ, ಉಪಕಾರ್ಯದಶರ್ಿ ಪ್ರಾಣೇಶ್ ರಾವ್, ಜಿ.ಪಂ.ಸದಸ್ಯರ ಸಮಕ್ಷಮದಲ್ಲಿ ನಿರ್ಗಮಿತ ಅಧ್ಯಕ್ಷರಾದ ಉಪೇಂದ್ರ ನಾಯಕ್ ಅವರು ಉದಯ ಕೋಟ್ಯಾನ್ ಅವರಿಗೆ ಅಧ್ಯಕ್ಷ ಸ್ಥಾನದ ಅಧಿಕಾರವನ್ನು
ಹಸ್ತಾಂತರಿಸಿದರು. ಬಿಜೆಪಿಯ ಹಿರಿಯ ನಾಯಕರಾದ ಸೋಮಶೇಖರ ಭಟ್, ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ ಮೊದಲದವರು ಕೋಟ್ಯನ್ ಅವರನ್ನು ಅಭಿನಂದಿಸಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s