ಕೆಸರುಗದ್ದೆಯಾದ ನೆಲ್ಲಿಕಟ್ಟೆ-ಕೊಂಬಾಡಿ ರಸ್ತೆ `ಕೆಸರ್ಡೊಂಜಿ ದಿನ’ಕ್ಕೆ ಸೂಕ್ತ !

Posted: ಜುಲೈ 26, 2014 in Uncategorized

ಉಡುಪಿ: ಉಡುಪಿ ತಾಲೂಕಿನ ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೆ ಗ್ರಾಮದ ನೆಲ್ಲಿಕಟ್ಟೆಯಲ್ಲಿರುವ ಗ್ರಾಮ ಪಂಚಾಯಿತಿ ರಸ್ತೆಯೊಂದು `ಕೆಸರ್ಡೊಂಜಿ ದಿನ’ ಕ್ರೀಡಾಕೂಟಕ್ಕೆ ಪ್ರಸಸ್ತವಾದ ಸ್ಥಳವಾಗಿ ಮಾರ್ಪಟ್ಟಿದೆ.

ಉಡುಪಿ-ಮೂಡುಬೆಳ್ಳೆ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸಿಗುವ ನೆಲ್ಲಿಕಟ್ಟೆ ಎಂಬ ಸ್ಥಳದಿಂದ ಕೊಂಬಾಡಿ ನಾಗಬ್ರಹ್ನ ಸ್ಥಾನಕ್ಕೆ ಹಾದುಹೋಗುವ ರಸ್ತೆಯೇ ಇದೀಗ ಕೆಸರ್ಡೊಂಜಿ ದಿನಕ್ಕೆ ಪೂರಕವಾಗುವಂಥ ಕೆಸರು ಗದ್ದೆಯಾಗಿ ಬದಲಾಗಿರುವುದು.

ನೆಲ್ಲಿಕಟ್ಟೆಯಲ್ಲೇ ಇರುವ ಪದವಿಪೂರ್ವ ಕಾಲೇಜು, ಉಡುಪಿ ಮತ್ತು ಮಣಿಪಾಲದ ವಿವಿಧ ಕಾಲೇಜುಗಳಿಗೆ ಹೋಗಿ ಬರುವ ನೂರಾರು ವಿದ್ಯಾಥರ್ಿ-ವಿದ್ಯಾಥರ್ಿನಿಯರು,
ನೆಲ್ಲಿಕಟ್ಟೆಯಲ್ಲಿರುವ ಗೇರುಬೀಜ ಕಾಖರ್ಾನೆಯ ಹಲವಾರು ಮಂದಿ ಮಹಿಳಾ ಕಾಮರ್ಿಕರು, ನೆಲ್ಲಿಕಟ್ಟೆ ತಬೈಲ್ ಹಾಗೂ ಸುತ್ತಮುತ್ತಲಿನ ಉದ್ಯೋಗಸ್ಥರ ಸಹಿತ ನೂರಾರು ಜನ ಪ್ರಸ್ತುತ ದಿನನಿತ್ಯವೂ ಇದೇ ಕೆಸರುಗದ್ದೆ ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ನಡೆದಾಡುವ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಗಿದೆ.

ನೆಲ್ಲಿಕಟ್ಟೆ-ಕೊಂಬಾಡಿ ರಸ್ತೆಯ ಆರಂಭದಲ್ಲಿ, ಕೆಸರುಗದ್ದೆ ರಸ್ತೆ ಪಾದಚಾರಿಗಳನ್ನು ಸ್ವಾಗತಿಸಿದರೆ, ತಬೈಲ್ನ ಕೊಂಬಾಡಿ ನಾಗಬ್ರಹ್ಮ ಸ್ಥಾನದ ಬಳಿಗೆ ತಲುಪುವಷ್ಟರಲ್ಲಿ ರಸ್ತೆಯೇ ನದಿಯಾಗಿ ಪರಿವರ್ತನೆಗೊಂಡು ವಿಷಾದ ವ್ಯಕ್ತಪಡಿಸುತ್ತಿದೆ. ಕಿರು ಸೆತುವೆ ಇಲ್ಲದ ಕಾರಣಕ್ಕೆ, ಇಲ್ಲೂ ಜನರು ಸರ್ಕಸ್ ಮಾಡಿಕೊಂಡೇ ರಸ್ತೆಯಲ್ಲಿ ನಡೆದಾಡುವುದು ಅನಿವಾರ್ಯತೆ ಉದ್ಭವವಾಗಿದೆ.

ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಇದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಆದರೆ ರಸ್ತೆಯನ್ನು ರಸ್ತೆಯಾಗಿ ಉಳಿಸುವ ಕಾಳಜಿಯನ್ನು ಮಾತ್ರ ಯಾಕೋ ತೋರಿಸುತ್ತಿಲ್ಲ. ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಾಪು ವಿಧಾನ ಸಬಾ ಕ್ಷೇತ್ರದ ಶಾಸಕರಾದ ವಿನಯ ಕುಮರ್ ಸೊರಕೆ ಇವರುಗಳು ಸಹ ಯಾಕೋ ಈ ರಸ್ತೆಗೆ ಕಾಯಕಲ್ಪ ನೀಡುವ ಆಸಕ್ತಿ ಪ್ರದಶರ್ಿಸುತ್ತಿಲ್ಲ.

ನೆಲ್ಲಿಕಟ್ಟೆ ಕಾಲೇಜು ಮತ್ತು ಗೇರುಬೀಜ ಕಾಖರ್ಾನೆ ಪಕ್ಕ ಡಾಮರೀಕರಣ ಅಥವಾ ಕಾಂಕ್ರಿಟೀಕರಣ ಹಾಗೂ ಕೊಂಬಾಡಿಯಲ್ಲಿ ಕಿರು ಸೇತುವೆಯೊಂದನ್ನು ನಿಮರ್ಿಸಿದರೆ ನೆಲ್ಲಿಕಟ್ಟೆ-ಕೊಂಬಾಡಿ ರಸ್ತೆ ಪಾದಚಾರಿಗಳಿಗೆ ಸಂಚಾರ ಯೋಗ್ಯವಾಗಿ ಪರಿಣಮಿಸಲಿದೆ. ಇಲ್ಲದಿದ್ದರೆ ಇಲ್ಲಿನ ಈ ಪರಿಸರದ ಜನರು ಮತ್ತು ನೂರಾರು ಸಂಖ್ಯೆಯಲ್ಲಿರುವ ಕಾಲೇಜು ಮಕ್ಕಳು ಹಾಗೂ ಮಹಿಳಾ ಕಾಮರ್ಿಕರು ಜನಪ್ರತಿನಿಧಿಗಳಿಗೆ ದಿನನಿತ್ಯವೂ ಹಿಡಿಶಾಪ ಹಾಕುತ್ತಾ ಇದೇ ರಸ್ತೆಯಲ್ಲಿ ನಡೆದಾಡುತ್ತಿರುತ್ತಾರೆ, ಅಷ್ಟೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s