ತಂಡದಿಂದ ಯುವಕನ ಸುಲಿಗೆ

Posted: ಜುಲೈ 29, 2014 in Uncategorized

ಉಡುಪಿ: ಐದು ಜನರಿದ್ದ ತಂಡ ಸಮಾನ ಉದ್ಧೇಶದಿಂದ ಅಕ್ರಮಕೂಟ ಸೇರಿಕೊಂಡು
ಯುವಕನೋರ್ವನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಹಲ್ಲೆ ನಡೆಸಿ, 1,500 ರು.ಗಳಿದ್ದ ಪರ್ಸ್ ನ್ನು ಪ್ಯಾಂಟಿನ ಜೇಬಿನಿಂದ ಬಲವಂತವಾಗಿ ಸುಲಿಗೆ ಮಾಡಿ ಪರಾರಿಯಾದ ಪ್ರಕರಣ ಜು.27ರಂದು ಸಂಜೆ 4 ಗಂಟೆಗೆ ಆತ್ರಾಡಿ ಮದಗದಲ್ಲಿ ನಡೆದಿದೆ.

ಈ ಬಗ್ಗೆ ಪರ್ಕಳ ಸಮೀಪದ ಶೆಟ್ಟಿಬೆಟ್ಟು ಬೊಬ್ಬರ್ಯ ರಸ್ತೆ ನಿವಾಸಿ ಪುಂಡರೀಕ ಆಚಾರ್ಯರ ಪುತ್ರ ಸುಮಿತ್ ಆಚಾರ್ಯ (21) ನೀಡಿದ ದೂರಿನಂತೆ ರಿತೇಶ್ ಸೋನ್ಸ್, ಸಂದೀಪ್, ಗಣೇಶ್, ಅಶ್ವಥ್, ಪ್ರಾಣೇಶ್ ಎಂಬವರ ವಿರುದ್ಧ ಹಿರಿಯಡ್ಕ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ತನ್ನ ಸ್ನೇಹಿತರೊಂದಿಗೆ ಆತ್ರಾಡಿಯ ಮದಗದಲ್ಲಿ ನಡೆಯುತ್ತಿದ್ದ ಪುಟ್ಬಾಲ್ ಪಂದ್ಯಾಟ ನೋಡಲು ಹೋಗಿದ್ದ ಸಮಯದಲ್ಲಿ ಸುಲಿಗೆ ಕೃತ್ಯ ನಡೆಯಿತು ಎಂದು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಸುಮಿತ್ ದೂರಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s