ನಗರಸಭಾ ಸದಸ್ಯನಿಂದ ಮನೆ ಅತಿಕ್ರಮಿಸಿ ಗೂಂಡಾಗಿ ರಿ: ವಿಧವೆಯ ಗಂಭೀರ ಆರೋಪ

Posted: ಜುಲೈ 29, 2014 in Uncategorized

ಉಡುಪಿ: ಉಡುಪಿ ನಗರದ ತೆಂಕಪೇಟೆ ವಾರ್ಡ್ ನ ಹಳೆ ಅಂಚೆ ಕಚೇರಿ ರಸ್ತೆಯಲ್ಲಿರುವ ಪಿತ್ರಾರ್ಜಿತವಾಗಿ ತನಗೆ ಸೇರಿದ ಮನೆಯನ್ನು ಉಡುಪಿ ನಗರಸಭೆಯ ಬಿಜೆಪಿ ಸದಸ್ಯ ಮಹೇಶ್ ಠಾಕೂರ್ ಅತಿಕ್ರಮಿಸಿಕೊಂಡು ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ದಿವಂಗತ ಆನಂದ ನಾಯ್ಕರವರ ಪತ್ನಿ ಶ್ರೀಮತಿ ಯು.ಯಶೋದಾ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಜುಲೈ 28ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ತಮ್ಮ ಕಾರಿನ ಗಾಜನ್ನು ಧ್ವಂಸಗೊಳಿಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಜಾತಿ ನಿಂದನೆ ಮಾಡಿದ್ದೂ ಅಲ್ಲದೆ, ಜೀವ ಬೆದರಿಕೆ ಹಾಕಿರುವ ಮಹೇಶ್ ಠಾಕೂರ್ ಹಾಗೂ ಇತರ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು ಮತ್ತು ತಮಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಹಳೆ ಅಂಚೆ ಕಚೇರಿ ರಸ್ತೆಯಲ್ಲಿ ಸರ್ವೆ ನಂಬ್ರ 102/7 ಮತ್ತು 102/20ರಲ್ಲಿ ಒಟ್ಟು 14 ಸೆಂಟ್ಸ್ ಸ್ಥಳವಿದ್ದು, ಇದು ತನ್ನ ತಂದೆ ಶೀನ ನಾಯ್ಕರದ್ದಾಗಿರುತ್ತದೆ. ಶೀನ ನಾಯ್ಕರವರು ನಿಧನರಾಗಿದ್ದು, ಅವರ ಮಗಳಾದ ತಾನು ಈ ಭೂಮಿ ಮತ್ತು ಇದರಲ್ಲಿರುವ ಕಟ್ಟಡದ ವಾರೀಸುದಾರಳಾಗಿರುತ್ತೇನೆ. ಈ ಕಟ್ಟಡದಲ್ಲಿರುವ ಮನೆಯಲ್ಲಿ ವಿಜಯ ನಾಯ್ಕ ಹಾಗೂ ಸರೋಜಿನಿ ಎಂಬವರು ಬಾಡಿಗೆಗಿದ್ದು, ಮನೆಯನ್ನು ತೆರವು ಮಾಡುವ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಪ್ರಕರಣ ವಿಚಾರಣೆಯ ಅಂತಿಮ ಹಂತದಲ್ಲಿದೆ. ಈ ನಡುವೆ ವಿಜಯ ನಾಯ್ಕರವರು ಮನೆಯನ್ನು ತೆರವು ಮಾಡಿರುವುದಾಗಿ ಮೌಖಿಕವಾಗಿ ತಿಳಿಸಿದ್ದಾರೆ. ಆದರೆ ಇದೀಗ ಈ ಮನೆಯನ್ನು ಮಹೇಶ್ ಠಕೂರ್ ಅವರು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಯಶೋದಾ ದೂರಿದ್ದಾರೆ.

ತನ್ನ ಅನುಮತಿ ಇಲ್ಲದೆ ಮನೆಯ ಗೋಡೆಯನ್ನು ಕೆಡವಿ ಹಾಕಲಾಗಿದೆ. ಬಾಗಿಲು ಕಿತ್ತು ಹಾಕಿ ಶೆಟರ್ನ್ನು ಅಳವಡಿಸಲಾಗಿದೆ. ಮನೆಯನ್ನು ಹಾಳುಗೆಡವಲಾಗಿದೆ. ಈ ನಡುವೆ ಜು.26ರಂದು ಮಧ್ಯರಾತ್ರಿ 1.15 ಕ್ಕೆ ತಮ್ಮ ಕಟ್ಟಡದ ಮುಂಭಾಗದಲ್ಲಿರುವ ಜಾಗಕ್ಕೆ ಅಕ್ರಮವಾಗಿ ಕಾರಿನಲ್ಲಿ ಬಂದ ಆರೋಪಿಗಳಾದ ಮಹೇಶ್ ಠಾಕೂರ್, ದೇವಿಚರಣ್, ಗಣನಾಥ್ ಹೆಗ್ಡೆ ಹಾಗೂ ಇತರ ಇಬ್ಬರು ತನ್ನ ಕಾರಿನ ಹಿಂಬದಿಯ ಗಾಜನ್ನು ಧ್ವಂಸಗೊಳಿಸಿದರು. ಅವಾಚ್ಯ ಶಬ್ದಗಳಿಂದ ಬೈಯ್ದರು. ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದರು. ತನಗೆ ಭೂಗತ ಪಾತಕಿಗಳ ಪರಿಚಯವಿದೆ. ನಿಮ್ಮನ್ನು ಹೀಗೆ ಬಿಡುವುದಿಲ್ಲ ಇದು ಸ್ಯಾಂಪಲ್ ಮಾತ್ರ ಎಂದು ಅವರು ಹೇಳಿಕಕೊಂಡರೆಂದು ಸರಕಾರಿ ಉದ್ಯೋಗಿಯೂ ಆಗಿರುವ ಯಶೋದಾ ಅಪಾದಿಸಿದ್ದಾರೆ.

ಪಿತ್ರಾರ್ಜಿತವಾಗಿ ತನಗೆ ಸೇರಿದ ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ಕ್ರಯ ಸಾಧನೆಯ ಸಹಿತ ಎಲ್ಲಾ ದಾಖಲೆಗಳೂ ತನ್ನ ಬಳಿ ಇದೆ. ಆದರೆ ಇನ್ನೂ ಸಹ ಸಂಬಂಧಿಸಿದ
ಇಲಾಖಾಧಿಕಾರಿಗಳಿಗೆ ಆರ್ ಟಿಸಿ ಮಾಡಿಕೊಡಲು ಸಾಧ್ಯವಾಗಿಲ್ಲ. ಇದನ್ನೆಲ್ಲಾ ಗಮನಿಸಿದರೆ ಸರಕಾರಿ ಇಲಾಖೆಗಳಲ್ಲಿಯೂ ಈ ಪಾತಕ ಲೋಕದ ಕೈವಾಡವಿರಬಹುದು ಎಂಬ ಶಂಕೆ
ವ್ಯಕ್ತಪಡಿಸಿದ್ದಾರೆ.

ವಿದೇಶದಿಂದ ಕಪ್ಪು ಹಣ ತಂದರೆ ಸಾಲದು, ದೇಶದೊಳಗಿರುವ ಇಂಥ ಸಮಾಜ ಘಾತುಕರನ್ನು ಗುರುತಿಸಿ ಸರಿದಾರಿಗೆ ತರುವ ಕೆಲಸವನ್ನೂ ಸರಕಾರಗಳು ಮಾಡಬೇಕು. ಪೊಲೀಸರ ಶಕ್ತಿಗಿಂತ ಗೂಂಡಾಗಿರಿಗಳ ಶಕ್ತಿಯೇ ಮೇಲುಗೈ ಆಗುತ್ತಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಸೆಳೆಯುವ ನಿಟ್ಟಿನಲ್ಲಿ ಅವರೊಂದಿಗೆ ಮಾತುಕತೆಗೆ ಅವಕಾಶ ಒದಗಿಸಿಕೊಡಬೇಕು ಎಂದು ವಿನಂತಿಸಿದ ಯಶೋದಾ ಅವರು, ತನಗೆ ನ್ಯಾಯ ಸಿಗದಿದ್ದಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲಿರುವುದಾಗಿ ತಿಳಿಸಿದರು.

ಯಶೋದಾರವರ ಪುತ್ರ ಪ್ರೀತೀಶ್ ಹಾಗೂ ಸೊಸೆ ನೀಮಾ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s