ಉಡುಪಿ ನಗರಸಭೆಗಿದೆ, 107 ಕೇಸುಗಳ ತಲೆನೋವು !

Posted: ಆಗಷ್ಟ್ 1, 2014 in Uncategorized

ಉಡುಪಿ: ಉಡುಪಿ ನಗರಸಭೆಯ ಜುಲೈ ತಿಂಗಳ ಸಾಮಾನ್ಯಸಭೆಯು ಸೋಮವಾರ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಗರಸಭಾಧ್ಯಕ್ಷ ಯುವರಾಜ್ ಪುತ್ತೂರು ಅಧ್ಯಕ್ಷತೆಯಲ್ಲಿ ನಡೆಯಿತು.

ಬೀದಿನಾಯಿಗಳ ಕಾಟ, ತ್ಯಾಜ್ಯ ವಿಲೇವಾರಿಯಲ್ಲಿನ ಅಸಮರ್ಪಕತೆ, ಮಳೆಯಿಂದಾಗಿ ನಿರ್ಮಾಣಗೊಂಡ ರಸ್ತೆಹೊಂಡಗಳು, ಡ್ರೈನೇಜ್ ಕೆಲಸದ ವೇಳೆ ರಸ್ತೆಯಲ್ಲಿ
ಹಾಳುಗೆಡವುತ್ತಿರುವ ಬಗ್ಗೆ ಅಕ್ರಮ ನಿರ್ಮಾಣದ ವಿರುದ್ಧ ಕ್ರಮಕೈಗೊಳ್ಳದ ಬಗ್ಗೆ, ಆಸ್ತಿ ತೆರಿಗೆ ಪರಿಷ್ಕರಣೆ, ವಕೀಲರ ನೋಂದಣಿ, ಕಳೆದ ಬಾರಿಯ ನಗರಸಭೆಯ ಸಾಮಾನ್ಯಸಭೆಗೆ ಪೊಲೀಸ್ ರಕ್ಷಣೆ ಪಡೆದುಕೊಂಡ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಜೂನ್ ತಿಂಗಳ ಸಾಮಾನ್ಯ ಸಭೆ ನಡೆಯುವಾಗ ಸಭಾಂಗಣದೊಳಗೆ ಪೊಲೀಸರು ಉಪಸ್ಥಿತರಿದ್ದರು. ಇಂಥ ಪರಿಸ್ಥಿತಿಯನ್ನು ಇದುವರೆಗೂ ಯಾವ ಆಡಳಿತ ಮಂಡಳಿಯೂ ನಿರ್ಮಿಸಿರಲಿಲ್ಲ. ಈ ರೀತಿ ಯಾಕೆ ಮಾಡಲಾಯಿತು ಎಂದು ಪ್ರಶ್ನಿಸಿದ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾನ್ಯಸಭೆಗಿಂತ ಮೊದಲು ರಾಜಕೀಯ ಪಕ್ಷವೊಂದರ ವತಿಯಿಂದ ನಗರಸಭೆ ಹೊರಗಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರಸಭಾ ಸದಸ್ಯರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ರಕ್ಷಣೆ ಪಡೆದುಕೊಳ್ಳಲಾಗಿತ್ತು. ಆದರೆ ಪೊಲೀಸರು ಸಭಾಂಗಣದೊಳಗೆ ಪ್ರವೇಶಿಸಯುವ ಅಗತ್ಯವಿರಲಿಲ್ಲ. ತನ್ನ ಗಮನಕ್ಕೆ ಬಾರದೆ ಅವರು ಒಳ ಪ್ರವೇಶಿಸಿದ್ದರು ಎಂದು ಅಧ್ಯಕ್ಷರು ಸಮಜಾಯಿಷಿಕೆ ನೀಡಿದರು.

ನಗರಸಭಾಧ್ಯಕ್ಷರ ಸಮಜಾಯಿಷಿಕೆಗೆ ಸಂತುಷ್ಟರಾಗದ ವಿರೋಧ ಪಕ್ಷದ ಸದಸ್ಯರು, ಅಧ್ಯಕ್ಷರ ಗಮನಕ್ಕೆ ಬಾರದ ರೀತಿಯಲ್ಲಿ ಸಾಮಾನ್ಯಸಭೆ ನಡೆಯುತ್ತಿರುವಾಗ ಪೊಲೀಸರು ಸಭಾಂಗಣದೊಳಗೆ ಉಪಸ್ಥಿತರಿರಲು ಹೇಗೆ ಸಾಧ್ಯವಾಯಿತು ಎಂದು ಖಾರವಾಗಿ ಪ್ರಶ್ನಿಸಿದ ವಿರೋಧ ಪಕ್ಷದ ಸದಸ್ಯರು, ನಗರಸಭೆ ಆವರಣದ ಹೊರಗಡೆ ಪ್ರತಿಭಟನೆ ನಡೆಸುವುದು ಪಕ್ಷದ ಹಕ್ಕು ಮತ್ತು ಕರ್ತವ್ಯವಾಗಿದೆ. ಬೆಳಗ್ಗೆ 10.30 ಕ್ಕೆ ಪ್ರತಿಭಟನೆ ಮುಗಿದಿತ್ತು. ಬಳಿಕ ಪೊಲೀಸರನ್ನು ಸಭಾಂಗಣದೊಳಗೆ ಬಿಟ್ಟುಕೊಡುವ ಅಗತ್ಯವಿರಲಿಲ್ಲ. ಇದೊಂದು ಕೆಟ್ಟ ಸಂಪ್ರದಾಯವನ್ನು ಆಡಳಿತ ಹಾಕಿಕೊಟ್ಟಿದೆ ಎಂದು ಕೆಂಡ ಕಾರಿದರು.

ಗೂಂಡಾಗಳಿಗೆ ಮಾತ್ರ ಇತರರನ್ನು ಗೂಂಡಾಗಳಂತೆ ಕಾಣಲು ಸಾಧ್ಯ. ಹಳದಿ ರೋಗಿಗಳಿಗೆ ಇತರರನ್ನು ಹಳದಿ ಕಾಣುವಂತೆ ಆಡಳಿತಕ್ಕೆ ಕಂಡಿರಬಹುದು. ಇನ್ನು ಮುಂದೆ ಹೀಗಾಗಬಾರದು ಎಂದು ಬಿಜೆಪಿ ಸದಸ್ಯರು ಸಭೆಯ ಗಮನ ಸೆಳೆದರು.

ಉಡುಪಿ-ಮಣಿಪಾಲ ರಸ್ತೆಯ ಕುಂಜಿಬೆಟ್ಟಿನಲ್ಲಿ ವೇದವ್ಯಾಸ ಆಚಾರ್ಯ ಎಂಬವರು ಅನಧಿಕೃತ ಛಾವಣಿ ನಿರ್ಮಿಸಿದ ಬಗ್ಗೆ ದೂರುಗಳಿದ್ದರೂ, ನಗರಸಭೆ ಪೌರಾಯುಕ್ತರು ನೋಟೀಸ್ ನೀಡುವುದನನ್ನು ಹೊರತುಪಡಿಸಿದರೆ ಬೇರೆ ಯಾವ ಕ್ರಮಗಳನ್ನು ಕೊಂಡಿಲ್ಲ. ಪೌರಾಯುಕ್ತರಿಗೆ ಅನಧಿಕೃತ ನಿರ್ಮಾಣ ಮಾಡಿದವರ ಬಗ್ಗೆ ಯಾಕಿಷ್ಟು ಕಾಳಜಿ ಎಂದು ಆಡಳಿತ ಪಕ್ಷದ ಸದಸ್ಯರೇ ಆದ ಶಶಿರಾಜ್ ಕುಂದರ್ ಕೇಳಿದರು.

ಮೂರು ಬಾರಿ ನೋಟೀಸ್ ನೀಡಲು ಅವಕಾಶವಿದೆ. ಒಂದು ನೋಟೀಸ್ ಗೆ ಕೇವಲ ಏಳು ದಿನಗಳ ಮಾತ್ರ ಅವಕಾಶವಿದೆ. ಆದರೆ ಇಲ್ಲಿ ಆರು ಬಾರಿ ನೋಟೀಸ್ ನೀಡಲಾಗಿದೆ. ಪ್ರಕರಣಕ್ಕೆ ವರ್ಷ ಒಂದಾಗಿದೆ. ನೋಟೀಸ್ ನೀಡುವುದಷ್ಟೇ ನಗರಸಭೆಯ ಕೆಲಸವಾ ಎಂದು ಪ್ರಶ್ನಿಸಿದ ಶಶಿರಾಜ್ ಕುಂದರ್, ಅಕ್ರಮ ನಿರ್ಮಾಣವನ್ನು ತೆರವುಗೊಳಿಸಲೇಬೇಕು ಎಂದು ಒತ್ತಾಯಿಸಿದರು.

ಶಿರಿಯಾರ ಪ್ರಭಾಕರ ನಾಯಕ್ ಅವರು ತನ್ನನ್ನು ಕಾನೂನು ಸಲಹೆಗಾರನನ್ನಾಗಿ ಮತ್ತು ಈ ಸಂಬಂಧದ ಪೆನಲ್ ನಲ್ಲಿ ತನ್ನ ಹೆಸರನ್ನು ನೋಮದಣಿ ಮಾಡಿಕೊಳ್ಳುವಂತೆ ಕೋರಿ ನಗರಸಭೆಗೆ ಸಲ್ಲಿಸಿದ ಮನವಿಯ ವಿಷಯ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ಈ ಸಂಬಂಧದ ಪ್ರಸ್ತಾವನೆ ಮತ್ತು ಟಿಪ್ಪಣಿಯಲ್ಲಿ ತಪ್ಪುಗಳಾಗಿದೆ ಎಂದು ಬಿಜೆಪಿ ಸದಸ್ಯರು ತಗಾದೆ ತೆಗೆದರೆ, ಈಗ ಇರುವ ಕಾನೂನು ಸಲಹೆಗಾರರು ಯಾರೆಲ್ಲಾ ಇದ್ದಾರೆ, ಇವರು ಎಷ್ಟು ಕೇಸುಗಳ ಪರ ನಗರಸಬೆ ಪರವಾಗಿ ವಾದಿಸುತ್ತಿದ್ದಾರೆ, ಇವರು ವಾದಿಸುತ್ತಿರುವ ಕೇಸುಗಳು ಯಾವ ಹಂತದಲ್ಲಿದೆ ಇತ್ಯಾದಿ ವಿವರಗಳನ್ನು ಸಭೆಯ ಮುಂದಿಡಬೇಕು. ಚರ್ಚೆಯ ಬಳಿಕ ನೋಂದಣಿ ಬಗ್ಗೆ ನಿರ್ಣಯಕ್ಕೆ ಬರುವುದೊಳಿತು ಎಂದು ಆಡಳಿತ ಪಕ್ಷದ ಸದಸ್ಯರು ಮನವಿ ಮಾಡಿಕೊಂಡರು.

ವಕೀಲರಿಂದ ಬಿಲ್ ಬರುತ್ತಾ ಇರುತ್ತದೆ. ನಗರಸಭೆಯಿಂದ ಹಣ ಪಾವತಿ ಆಗುತ್ತಿರುತ್ತದೆ. ಆದರೆ ಸಾಧಿಸಿದ್ದೇನು ಎಂಬುದು ಮಾತ್ರ ಗೊತ್ತಾಗುತ್ತಿಲ್ಲ ಎಂದು ಸಭೆಯ ಗಮನ ಸೆಳೆಯಲಾಯಿತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೌರಾಯುಕ್ತರು ಹೈಕೋರ್ಟ್ ಮತ್ತು ಇಲ್ಲಾ ಕೋರ್ಟುಗಳಲ್ಲಾಗಿ ನಗರಸಭೆಗೆ ಸಂಬಂಧಿಸಿದಂತೆ ಒಟ್ಟು 107 ಕೇಸುಗಳಿವೆ ಎಂದು ಸ್ಪಷ್ಟನೆ ನೀಡಿದರು.

ವಕೀಲರನ್ನು ನೋಂದಣಿ ಮಾಡಿಕೊಳ್ಳುವ ವಿಷಯದಲ್ಲಿ ಸಭೆಯಲ್ಲಿ ನಿರ್ಣಯ ಮಾಡದೆ ಚರ್ಚೆ ಮಾಡಿದ ಕಾರಣ, ವಿರೋಧ ಪಕ್ಷದ ಸದಸ್ಯರು ಗುತ್ತಿಗೆದಾರರ ನೋಂದಣಿ ಪ್ರಕ್ರಿಯೆಗೂ ತಮ್ಮ ಆಕ್ಷೇಪ ದಾಖಲಿಸಿದ ಪರಿಣಾಮವಾಗಿ ಸಾಮಾನ್ಯಸಭೆಯ ಅಂಗೀಕಾರಕ್ಕೆ ಮಮಡಿಸಲ್ಪಟ್ಟ ಮೂರ್ನಾಲ್ಕು ನಿರ್ಧಿಷ್ಟ ಪ್ರಸ್ತಾಪಗಳನ್ನು ಸಹ ಅಂಗೀಕರಿಸದೆ ಮುಂದೂಡಲಾಯಿತು.

ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕಾಗಿದೆಯಾದರೂ, ಸಾರ್ವಜನಿಕ ಚರ್ಚೆಯ ಬಳಿಕ ಪರಿಷ್ಕರಣೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಮಲೇರಿಯಾ ಜಾಗೃತಿ ಮತ್ತು ನಿಯಂತ್ರಣದ ಹೆಸರಿನಲ್ಲಿ ದೊಡ್ಡ ಮೊತ್ತವನ್ನು ಕರ್ಚು ಮಾಡುವ ಬಗ್ಗೆಯೂ ಸಬೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಕಳೆದ ವರ್ಷ 2 ಲಕ್ಷ ರು. ಗಳನ್ನು ಆರೋಗ್ಯ ಇಲಾಖೆಯ ಮಲೇರಿಯಾ ನಿಯಂತ್ರಣ ವಿಭಾಗಕ್ಕೆ ನೀಡಲಾಗಿದೆ. ಈ ಬಾರಿ 5 ಲಕ್ಷಕ್ಕೂ ಅಧಿಕ ನೀಡುವ ಪ್ರಸ್ತಾವನೆ ಇದೆ. ನಿಗದಿಪಡಿಸಿದ ಮೊತ್ತ ಹೆಚ್ಚಾಯಿತು ಎಂದು ಸದಸ್ಯರು ಹೇಳಿದ ಕಾರಣ ನಿಗದಿಪಡಿಸಿದ ಹಣವನ್ನು ಚರ್ಚೆಯ ಬಳಿಕ ಮತ್ತೆ ನಿಗದಿಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರಸಭಾ ವ್ಯಾಪ್ತಿಯ ಉಡುಪಿ, ಮಣಿಪಾಲ ಮತ್ತು ಮಲ್ಪೆಯಲ್ಲಿ ಒಟ್ಟು 269 ಬೀದಿ ವ್ಯಾಪಾರಿಗಳಿದ್ದಾರೆ. ಇವರಲ್ಲಿ 35 ಮಂದಿ ಮಹಿಳೆಯರು. ಇವರ ಸಭೆ ಕರೆದು ಸಮಾಲೋಚನೆ ನಡೆಸಲಾಗಿದ್ದು, ಸಂಘವನ್ನೂ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ಗುರುತುಪತ್ರ ನೀಡುವ ಮೂಲಕ ಬೀದಿ ವ್ಯಾಪಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಪೌರಾಯುಕ್ತರು ಸಭೆಗೆ ತಿಳಿಸಿದರು.

ವಿರೋಧ ಪಕ್ಷದ ನಾಯಕ ಡಾ.ಎಂ.ಆರ್.ಪೈ, ದಿನಕರ ಶೆಟ್ಟಿ ಹೆರ್ಗ, ಯಶಪಾಲ್ ಸುವರ್ಣ, ವಸಂತಿ ಶೆಟ್ಟಿ, ಶ್ಯಾಮಪ್ರಸಾದ್ ಕುಡ್ವ, ಸೆಲಿನ ಕರ್ಕಡ, ಮೀನಾಕ್ಷಿ ಮಾಧವ ಬನ್ನಂಜೆ, ಪ್ರಭಾಕರ ಪೂಜಾರಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s