ಕಳ್ಳರ ಬಂಧನ: ನಗದು ಸಹಿತ ಕಳವು ಸೊತ್ತು ವಶ

Posted: August 3, 2014 in Uncategorized

ಉಡುಪಿ: ನಗರದ ಕಲ್ಸಂಕದ ರಾಘವೇಂದ್ರ ಭಟ್ ಎಂಬವರ ಮನೆಯಿಂದ ಹಾಡಹಗಲೇ ನಗದು ಸಹಿತ ಸೊತ್ತುಗಳನ್ನು ಕಳವು ಮಾಡಿದ ನಾಲ್ವರನ್ನು ಉಡುಪಿ ನಗರ ಪೊಲೀಸರು ಬಂಧಿಸಿ, ಕಳವು ಮಾಡಲಾದ ಸೊತ್ತುಗಳ ಸಹಿತ ಕಳವು ಮಾಡಲು ಉಪಯೋಗಿಸಿದ ರಿಕ್ಷಾ ಮತ್ತು ಬೈಕ್ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚಂದ್ರ, ಕಾರ್ತಿಕ್, ಸಂಜು ಹಾಗೂ ರವಿ ಬಂಧಿತರು. ಇವರು ಜು.28ರಂದು ಕಲ್ಸಂಕದ ರಾಘವೇಂದ್ರ ಭಟ್ ಅವರ ಮನೆಯಿಂದ 1,16,915 ರು. ನಗದು ಹಣ, ಯುಟಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮತ್ತು ರೇಶನ್ ಕಾರ್ಡ್ ನ್ನು ಕಳವು ಮಾಡಿದ್ದರು.

ಉಡುಪಿ ಸರ್ಕಲ್ ಇನ್ಸ್ ಪೆಕ್ಟರ್ ಮಾರುತಿ ಜಿ.ನಾಯಕ್, ನಗರ ಠಾಣಾ ಅಪರಾಧ ವಿಭಾಗದ ಸಬ್ ಇನ್ಸ್ ಪೆಕ್ಟರ್ ರಾಜಗೋಪಾಲ್, ಸಿಬ್ಬಂದಿಗಳಾದ ಚಂದ್ರ ಶೆಟ್ಟಿ, ಪ್ರಕಾಶ್, ಯೋಗೀಶ್, ಮೋಹನ್ ಕೋತ್ವಾಲ್, ಸುಧಾಕರ ಭಂಡಾರಿ, ಪ್ರಸನ್ನ, ಶಂಕರ್, ಮಲ್ಲೇಶ್ ಹಾಗೂ ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s