ರಾತ್ರಿ ರಸ್ತೆಯಲ್ಲಿ ಮಲಗಿದ ಮದ್ಯಪಾನಿ ಬೆಳಗ್ಗ ೆ ಮೃತ್ಯುವಶ !

Posted: ಆಗಷ್ಟ್ 3, 2014 in Uncategorized
ಟ್ಯಾಗ್ ಗಳು:, , , , , , ,

ಉಡುಪಿ: ಮದ್ಯಪಾನಿಯೋರ್ವ ಮದ್ಯದ ಅಮಲಿನಿಂದಾಗಿ ನಡೆಯಲಾರದೆ ದೇಹದ ನಿಯಂತ್ರಣ ಕಳೆದುಕೊಂಡು ರಾತ್ರಿ ರಸ್ತೆಯಲ್ಲಿ ಮಲಗಿದವರು ಮಲಗಿದ ಸ್ಥಿತಿಯಲ್ಲಿಯೇ ಮೃತಪಟ್ಟ ಘಟನೆ ಆ.ಒಂದರಂದು ರಾತ್ರಿ ಮೂಡುಬೆಳ್ಳೆ ಸಮೀಪದ ನೆಲ್ಲಿಕಟ್ಟೆ ತಬೈಲ್ ನಲ್ಲಿ ನಡೆದಿದೆ.

ತಬೈಲ್ ನಿವಾಸಿ ಮಾರ್ಷಲ್ ಅರಾನ್ಹ ಯಾನೆ ಮಚ್ಚು ಪರ್ಬು (44) ಮೃತರು.
ಅವಿವಾಹಿತರಾಗಿದ್ದ ಇವರು, ಉಡುಪಿ ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಹಗಲು ಸಮಯದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು.

ಪ್ರತಿದಿನದಂತೆ ಆಗಸ್ಟ್ ಒಂದರಂದು ರಾತ್ರಿಯೂ ಕೆಲಸ ಮುಗಿಸಿ ಉಡುಪಿಯಿಂದ ಹೊರಟು ನೆಲ್ಲಿಕಟ್ಟೆಯಲ್ಲಿ ಬಸ್ ಇಳಿದು ತಬೈಲ್ನಲ್ಲಿರುವ ತನ್ನ ಮನೆಗೆ ನಡೆದುಕೊಂಡು ಬರುತ್ತಿರುವಾಗ ಮಾರ್ಗ ಮಧ್ಯೆ ಮುಂದಕ್ಕೆ ನಡೆಯಲಾರದೆ ಕುಸಿದು ಕುಳಿತು
ಮಲಗಿರಬಹುದೆಂದೂ, ಇಡೀ ರಾತ್ರಿ ಹೀಗೆ ಗಾಳಿ-ಮಳೆಗೆ ರಸ್ತೆಯಲ್ಲಿಯೇ ಮಲಗಿದ್ದ ಪರಿಣಾಮವಾಗಿ ಯಾವುದೋ ಹೊತ್ತು ಮೃತಪಟ್ಟಿರಬಹುದೆಂದೂ ಅಂದಾಜಿಸಲಾಗಿದೆ.

ಆ.2ರಂದು ಬೆಳಗ್ಗೆ ಮಾರ್ಷಲ್ ರಸ್ತೆಯಲ್ಲಿ ಬಿದ್ದಿರುವುದು ಮತ್ತು ಮೃತಪಟ್ಟಿರುವುದು ಪರಿಸರವಾಸಿಗಳ ಗಮನಕ್ಕೆ ಬಂತೆನ್ನಲಾಗಿದೆ. ವಿಪರೀತವಾಗಿ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ ಬಗ್ಗೆ ಎರಡು ದಿನಗಳ ಹಿಂದೆಯಷ್ಟೇ ಸ್ಥಳೀಯರು ಹೀಗೆ ಮದ್ಯಪಾನ ಮಾಡಿಕೊಂಡು ಮನೆಗೆ ಬಂದರೆ ನೀನು ಸಾಯುತ್ತಿ ಎಂದು ಹೇಳಿದ್ದಕ್ಕೆ, ‘ನಾನು ರಸ್ತೆಯಲ್ಲಿ ಬಿದ್ದೇ ಸಾಯುವುದು, ಮನೆಯಲ್ಲಲ್ಲ’ ಎಂದು ಪ್ರತಿಕಿಯಿಸಿದ್ದರಂತೆ ಮಾರ್ಷಲ್ ಅರಾನ್ಹ.

ಮೃತರ ಅಣ್ಣ ನೀಡಿದ ಹೇಳಿಕೆಯಂತೆ ಶಿರ್ವ ಠಾಣೆಯ ಪೊಲೀಸರು ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s