ಕಾರು ಡಿಕ್ಕಿ: ವಿದ್ಯುತ್ ಕಂಬ, ಶಾಲಾ ಕಮಾನಿಗೆ ಹಾ ನಿ

Posted: ಆಗಷ್ಟ್ 5, 2014 in Uncategorized
ಟ್ಯಾಗ್ ಗಳು:, , , , , , , , , , , ,

ಉಡುಪಿ: ಯುವಕನೋರ್ವ ಮದ್ಯದ ಅಮಲಿನಲ್ಲಿ ಓಕ್ಸ್ ವ್ಯಾಗನ್ ಕಾರು ಚಲಾಯಿಸಿದ ಪರಿಣಾಮವಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬ ಮತ್ತು ಶಾಲೆಯೊಂದರ ಸಿಮೆಂಟ್ ಕಮಾನಿಗೆ ಡಿಕ್ಕಿ ಹೊಡೆದು ಹಾನಿಗೊಳಿಸಿದ ಘಟನೆ ಆ.2ರಂದು ಮಧ್ಯ ರಾತ್ರಿ ನಗರದ ಕಾಡಬೆಟ್ಟು ಡಾ.ಅಂಬೇಡ್ಕರ್ ರಸ್ತೆಯಲ್ಲಿ ಸಂಭವಿಸಿದೆ.

ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆ ಬದಿಯ ವಿದ್ಯುತ್ ಕಂಬದ ಅರ್ಧ ಭಾಗ ತುಂಡಾಗಿದೆಯಾದರೂ, ಉಳಿದರ್ಧ ಭಾಗ ಹಾಗೆಯೇ ನೆಲದಲ್ಲಿ ಹೂತು ನಿಂತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಅಪಘಾಸ ನಡೆದು ಎರಡು ದಿನಗಳಾದರೂ ಮೆಸ್ಕಾಂ
ಇಲಾಖಾಧಿಕಾರಿಗಳು ಕಂಬವನ್ನು ಬದಲಾಯಿಸಲು ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಭಾರೀ ಗಾಳಿ ಮಳೆ ಬಂದುದೇ ಆದಲ್ಲಿ ಅರ್ಧ ತುಂಡಾಗಿ ನೆಲದಲ್ಲಿ ನಿಂತಿರುವ ಕಂಬ ಧಾರಾಶಾಹಿಯಾಗುವ ಅಪಾಯವಿದೆ. ಪರಿಸರದಲ್ಲಿ ಹಲವಾರು ಮನೆಗಳಿರುವುದರಿಂದ ಪ್ರಸ್ತುತ ಸಾರ್ವಜನಿಕರು ಭೀತಿ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಳಿಕ ಕಾರು ರಸ್ತೆ ಪಕ್ಕದಲ್ಲೇ ಇರುವ ಸ್ಥಳೀಯ ಡಾ.ಟಿ.ಎ.ಪೈ ಮೋಡರ್ನ್ ಹಿರಿಯ ಪ್ರಾಥಮಿಕ ಶಾಲೆಯ ಸಿಮೆಂಟ್ ಕಮಾನಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಮಾನು ತುಂಡಾಗಿ ನೆಲಕ್ಕುರುಳಿದೆ.

ತಾಲೂಕು ಮಟ್ಟದ ಅಧಿಕಾರಿಯೊಬ್ಬರ ಪುತ್ರನಾದ ಯುವಕ ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಕಾರು ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣವೆನ್ನಲಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s