ಆಗಸ್ಟ್ 14ರಿಂದ ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ಅ ನಿರ್ಧಿಷ್ಟಾವಧಿ ಸತ್ಯಾಗ್ರಹ: ಶ್ರೀರಾಮ ದಿವಾಣ.

Posted: ಆಗಷ್ಟ್ 11, 2014 in Uncategorized

# ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇನೆ. ಉಡುಪಿ ತಾಲೂಕಿನ ತೊಟ್ಟಂನಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ (ಹಾಸ್ಟೆಲ್)ದ 175 ಮಂದಿ ವಿದ್ಯಾರ್ಥಿನಿಯರು (ನಮ್ಮ ಸಹೋದರಿಯರು) ಕೇವಲ ಎರಡೇ ಎರಡು ಶೌಚಾಲಯ ಮತ್ತು ಬಾತ್ ರೂಮಿನಲ್ಲಿ ದಿನಚರಿ ಮುಗಿಸಿ ಕಾಲೇಜಿಗೆ ಹೋಗುವ ಶೋಚನೀಯ ಪರಿಸ್ಥಿತಿಯನ್ನು ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹಾಗೂ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವದ ಉಡುಪಿ ಜಿಲ್ಲಾಡಳಿತ ಸೃಷ್ಟಿಸಿದೆ. ಇಷ್ಟು ಮಾತ್ರವಲ್ಲ, ಚಿಕ್ಕದಾದ ಒಂದು ಹಾಲ್ ನಲ್ಲಿದ್ದುಕೊಂಡು ಕಲಿಯಬೇಕಾದಂಥ ದುರಂತ ಸ್ಥಿತಿಗೂ ಕಾರಣೀಭೂತರಾಗಿದ್ದಾರೆ.

ಈ ಅಮಾನವೀಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ 14.08.2014ರ ಗುರುವಾರ ಬೆಳಗ್ಗೆ 10 ಗಂಟೆಯಿಂದ ಬೇಡಿಕೆ ಈಡೇರುವ ವರೆಗೆ ಪ್ರತಿದಿನ ಬೆಳಗ್ಗೆ ಗಂಟೆ 10ರಿಂದ ಸಂಜೆ 5 ರ ವರೆಗೆ, ಮಣಿಪಾಲದ ಎಂಡ್ ಪಾಯಿಂಟ್ ನಲ್ಲಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಉಸ್ತುವಾರಿ ಸಚಿವರ ಕಚೇರಿಗಳೂ ಇರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಠಾವಧಿ ಸತ್ಯಾಗ್ರಹ ನಡೆಸಲು ನಾನು
ನಿರ್ಧರಿಸಿದ್ದೇನೆ. ಆಸಕ್ತರು ಹಾಗೂ ಕಾಳಜಿ ಇರುವವರು ತಮ್ಮ ತಮ್ಮ ಸಮಯಕ್ಕೆ ಆಗಮಿಸಿ ನನ್ನ ಜೊತೆಗೆ ಸತ್ಯಾಗ್ರಹದಲ್ಲಿ ಭಾಗಿಗಳಾಗಬಹುದು. – ಶ್ರೀರಾಮ ದಿವಾಣ.

# 175 ವಿದ್ಯಾರ್ಥಿನಿಯರಿಗೆ 2 ಶೌಚಾಲಯ: ವಿದ್ಯಾರ್ಥಿನಿ ನಿಲಯದ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆ- ಶ್ರೀರಾಮ ದಿವಾಣ.

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೊಟ್ಟಂನಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಇಲ್ಲಿನ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸದಿದ್ದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಕಚೇರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗಳಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ
ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ಜಿಲ್ಲಾಧಿಕಾರಿಗಳು, ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಸಂತೆಕಟ್ಟೆಯ ಲಕ್ಷ್ಮೀನಗರದಲ್ಲಿದ್ದ ವಿದ್ಯಾರ್ಥಿನಿ ನಿಲಯವನ್ನು ತಿಂಗಳ ಹಿಂದೆ ತೊಟ್ಟಂನಲ್ಲಿರುವ ಕಟ್ಟಡವೊಂದಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ಕೇವಲ ಒಂದೇ ಒಂದು ಮಿನಿ ಹಾಲ್ನಲ್ಲಿ 175 ಮಂದಿ ವಿದ್ಯಾರ್ಥಿನಿಯರು ಬಹಳ ಕಷ್ಟದಿಂದ
ವಾಸ್ತವ್ಯವಿರಬೇಕಾದ ಸಂಕಷ್ಟಮಯ ಪರಿಸ್ಥಿತಿಯಿದೆ. ಇದರಿಂದಾಗಿ ಅನೇಕ ಸಮಸ್ಯೆಗಳು ಸೃಷ್ಟಿಯಾಗಿದೆ ಎಂದು ಶ್ರೀರಾಮ ದಿವಾಣ ಮನವಿಯಲ್ಲಿ ವಿವರಿಸಿದ್ದಾರೆ.

175 ಮಂದಿ ವಿದ್ಯಾರ್ಥಿನಿಯರಿಗೆ ಇಲ್ಲಿನ ವಿದ್ಯಾರ್ಥಿನಿ ನಿಲಯದಲ್ಲಿ ಕೇವಲ ಎರಡು ಶೌಚಾಲಯ ಮತ್ತು ಬಾತ್ ರೂಮ್ (ಸ್ನಾನದ ಕೋಣೆ) ಇದ್ದು, ಇಂಥ ಅಸಮರ್ಪಕ
ವ್ಯವಸ್ಥೆಯಿಂದಾಗಿ ವಿದ್ಯಾರ್ಥಿನಿಯರ ದಿನಚರಿ ತೀರಾ ಅಸಹನೀಯವಾಗಿ ಮಾರ್ಪಟ್ಟಿದೆ. ಇದೇ ವಾತಾವರಣದಲ್ಲಿ ವಿದ್ಯಾರ್ಥಿನಿಯರು ಇನ್ನಷ್ಟೂ ದಿನ ಮುಂದುವರಿದುದೇ ಆದರೆ, ವಿದ್ಯಾರ್ಥಿನಿಯರಿಗೆ ಅನಾರೋಗ್ಯ ಬಾಧಿತರಾಗುವ ಸಾಧ್ಯತೆಗಳಿವೆ. ಮಾತ್ರವಲ್ಲ, ಮಾನಸಿಕ ತೊಂದರೆಗಳೂ ಉಂಟಾಗುವ ಅಪಾಯಗಳಿವೆ ಎಂದು ಶ್ರೀರಾಮ ದಿವಾಣ ಆತಂಕ ವ್ಯಕ್ತಪಡಿಸಿದ್ದಾರೆ.

ಉಡುಪಿ ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಹಿಂದುಳಿದ ವರ್ಗಗಳ ಮತ್ತು
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ, ಶಾಸಕರಾದ ಪ್ರಮೋದ್ ಮಧ್ವರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಯವರ ಕಾಳಜಿ ರಹಿತ ಆಡಳಿತದಿಂದಾಗಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿನ ವಿದ್ಯಾರ್ಥಿನಿಯರ ಬದುಕು ನರಕಮಯವಾಗಿ ಪರಿಣಮಿಸಿದೆ. ಆದುದರಿಂದ ಈ ಬಗ್ಗೆ ಯಾವುದೇ ನೆಪಗಳನ್ನೂ ಮುಂದಿಡದೆ, ಕೂಡಲೇ ತೊಟ್ಟಂನಲ್ಲಿರುವ ವಿದ್ಯಾರ್ಥಿನಿ ನಿಲಯವನ್ನು ಸಾಕಷ್ಟು ಕೊಠಡಿಗಳು, ಶೌಚಾಲಯಗಳು ಮತ್ತು ಬಾತ್ ರೂಮ್ ಗಳಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು. ಈ ನಿಟ್ಟಿನಲ್ಲಿ ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ, ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಶೀಘ್ರವೇ ಸತ್ಯಾಗ್ರಹ ನಡೆಸಲಿದ್ದೇನೆ ಎಂದು ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ಮುನ್ನೆಚ್ಚರಿಕೆ ನೀಡಿದ್ದಾರೆ. ಕೃಪೆ: http://www.udupibits.in

# # ಉಡುಪಿ ತಾಲೂಕಿನ ತೊಟ್ಟಂನಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ಶೋಚನೀಯ ಸ್ಥಿತಿಯ ಬಗ್ಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇನೆ. – ಶ್ರೀರಾಮ ದಿವಾಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s