ಹಾಸ್ಟೆಲ್ ದುರವಸ್ಥೆ ವಿರುದ್ಧ ಅನಿರ್ಧಿಷ್ಠಾವ ಧಿ ಸತ್ಯಾಗ್ರಹ ಆರಂಭ

Posted: ಆಗಷ್ಟ್ 14, 2014 in Uncategorized
ಟ್ಯಾಗ್ ಗಳು:, , , , , , , , ,

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ತೊಟ್ಟಂನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ದುರವಸ್ಥೆಯನ್ನು ಖಂಡಿಸಿ, ವಿದ್ಯಾರ್ಥಿನಿ ನಿಲಯವನ್ನು ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಮತ್ತು ವಿದ್ಯಾರ್ಥಿನಿ ನಿಲಯದಲ್ಲಿನ ಅತ್ಯಂತ ಶೋಚನೀಯ ಅವ್ಯವಸ್ಥೆಗಳಿಗೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಯವರ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಿರುವ ಮಣಿಪಾಲದಲ್ಲಿರುವ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣದ ಮುಂಭಾಗದಲ್ಲಿ ಆಗಸ್ಟ್ 14ರಂದು ಬೆಳಗ್ಗೆ 10 ಗಂಟೆಯಿಂದ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಆರಂಭಿಸಿದರು.

ಮೆಟ್ರಿಕ್ ನಂತರದ ಬಿಸಿಎಂ ವಿದ್ಯಾರ್ಥಿನಿ ನಿಲಯವು ಕಳೆದ 5 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದ ಬಾಡಿಗೆ ಕಟ್ಟಡಗಳಲ್ಲಿಯೇ ವಿದ್ಯಾರ್ಥಿನಿ ನಿಲಯವಿರುವುದರಿಂದ ವಿದ್ಯಾರ್ಥಿನಿಯರ ಕಲಿಕೆ ಮತ್ತು ವಾಸ್ತವ್ಯಕ್ಕೆ ಭಾರೀ ಸಮಸ್ಯೆಯಾಗುತ್ತಿದೆ. ಈ ಎಲ್ಲಾ ವಿಷಯಗಳು ತಿಳಿದಿದ್ದರೂ ವಿದ್ಯಾರ್ಥಿನಿ ನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ರಾಜ್ಯ ಸರಕಾರಕ್ಕಾಗಲೀ, ಜಿಲ್ಲಾಡಳಿತಕ್ಕಾಗಲೀ ಇದುವರೆಗೆ ಸಾಧ್ಯವಾಗದಿರುವುದು ದುರಂತ ಎಂದು ಶ್ರೀರಾಮ ದಿವಾಣ ಆರೋಪಿಸಿದ್ದಾರೆ.

ಪ್ರಸ್ತುತ 80 ಮಂದಿ ವಿದ್ಯಾರ್ಥಿನಿಯರಷ್ಟೇ ಉಳಿದುಕೊಂಡಿರುವ ಬಿಸಿಎಂ ಹಾಸ್ಟೆಲ್ ತೊಟ್ಟಂನಲ್ಲಿನ ಬಾಡಿಗೆ ಕಟ್ಟಡದಲ್ಲಿದ್ದು, ಇಲ್ಲಿ ಇವರಿಗೆ ಕೇವಲ ಎರಡು ಶೌಚಾಲಯ ಮತ್ತು ಎರಡು ಬಾತ್ ರೂಮ್ಗಳಷ್ಟೇ ಇದೆ. ಇಲ್ಲಿ ಕಾಲೇಜು ಪುಸ್ತಕ ಮತ್ತು ಬಟ್ಟೆ ಇರಿಸುವುದಕ್ಕಾಗಲೀ, ಬಟ್ಟೆ ಧರಿಸುವುದಕ್ಕಾಗಲೀ ಯಾವುದೇ ರೀತಿಯ ಪ್ರತ್ಯೇಕ ವ್ಯವಸ್ಥೆ ಇಲ್ಲ, ಓದಲು ಮತ್ತು ಮಲಗಲು ಸಹ ಸರಿಯಾದ ಯಾವುದೇ ವ್ಯವಸ್ಥೆಗಳಿಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರ ದಿನಚರಿ ನರಕಮಯವಾಗಿದೆ ಎಂದು ಶ್ರೀರಾಮ ದಿವಾಣ ದೂರಿದ್ದಾರೆ.

ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಬೇಡಿಕೆ ಮುಂದಿಟ್ಟು ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ಆರಂಭಿಸಿದ ಗುರುವಾರದ
ಸತ್ಯಾಗ್ರಹದಲ್ಲಿ ದೇಜಪ್ಪ ಹಿರಿಯಡ್ಕ, ಶ್ರೀಮತಿ ತುಕ್ರಿ ಹಿರಿಯಡ್ಕ, ಜೋನ್ ಮೇಸ್ತ್ರಿ ಬಜೆ, ರಸೂಲ್ ಕಟಪಾಡಿ, ಪ್ರಕಾಶ್ ಪೂಜಾರಿ, ಆರ್.ಡಿ.ಪಾಂಬೂರು, ರಮೇಶ್ ಹಿರಿಯಡ್ಕ, ಸುಖೇಂದ್ರ, ಧನಂಜಯ, ಶೇಖರ ಹೆಜಮಾಡಿ, ಕೆ.ಎಸ್.ಉಪಾಧ್ಯ, ಸುಂದರ ನಲ್ಲೂರು, ದೀಪಕ್ ಕಾಮತ್ ಬೆಳ್ಮಣ್, ರವಿ ಪೇತ್ರಿ ಮೊದಲಾದವರು ಉಪಸ್ಥಿತರಿದ್ದರು.

ಸತ್ಯಾಗ್ರಹ ಸ್ಥಳಕ್ಕೆ ಗುರುವಾರ ಸಂಜೆ ಆಗಮಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೇಷಪ್ಪ ಹಾಗೂ ಇತರರು ಮೊದಲಿದ್ದ ಶೌಚಾಲಯವಲ್ಲದೆ ಇನ್ನೆರಡು ಶೌಚಾಲಯಗಳನ್ನು ಹೊಸದಾಗಿ ವ್ಯವಸ್ಥೆ ಮಾಡಿಕೊಡಲಾಗಿದೆ. ನಾಲ್ಕು ಶೌಚಾಲಯಗಳನ್ನು ನಿರ್ಮಿಸಲು ಬಾಡಿಗೆ ಕಟ್ಟಡದ ಮಾಲೀಕರು ಒಪ್ಪಿದ್ದು, ಕೂಡಲೇ ಕೆಲಸ ಆರಂಭಿಸಲಾಗುವುದು. ಮುಂದಿನ ಕೆಲವೇ ತಿಂಗಳುಗಳಲ್ಲಿ ತೊಟ್ಟಂನಲ್ಲಿರುವ ವಿದ್ಯಾರ್ಥಿನಿಯರನ್ನು
ಕಿನ್ನಿಮೂಲ್ಕಿಯಲ್ಲಿರುವ ಮೆಟ್ರಿಕ್ ನಂತರದ ಬಿಸಿಎಂ ಬಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ವರ್ಗಾಯಿಸಲಾಗುವುದು. ಇಲ್ಲಿನ ವಿದ್ಯಾರ್ಥಿಗಳನ್ನು ಅಂಬಾಗಿಲಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಇಲ್ಲಿನ
ವಿದ್ಯಾರ್ಥಿಗಳನ್ನು ಕಾರ್ಕಳದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ವಿವರಿಸಿ, ಸತ್ಯಾಗ್ರಹವನ್ನು ಮುಕ್ತಾಯಗೊಳಿಸುವಂತೆ ವಿನಂತಿಸಿಕೊಂಡರು. ಅಧಿಕಾರಿಗಳು ಕೇವಲ ಬಾಯಿಮಾತಿನಲ್ಲಷ್ಟೇ ಭರವಸೆ ನೀಡಿರುವುದರಿಂದ ಸತ್ಯಾಗ್ರಹ ಆಗಸ್ಟ್ 16ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮತ್ತೆ ಮುಂದುವರಿಯಲಿದೆ ಎಂದು ಶ್ರೀರಾಮ ದಿವಾಣ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s