ಬಿಸಿಎಂ ಹಾಸ್ಟೆಲ್ ದುರವಸ್ಥೆ: ಆಗಸ್ಟ್ 16ರಿಂದ ಮತ ್ತೆ ಸತ್ಯಾಗ್ರಹ ಮುಂದುವರಿಕೆ.

Posted: ಆಗಷ್ಟ್ 15, 2014 in Uncategorized

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ತೊಟ್ಟಂನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿನ ಶೋಚನೀಯ ದುರವಸ್ತೆಗಳನ್ನು ಖಂಡಿಸಿ,
ವಿದ್ಯಾರ್ಥಿನಿ ನಿಲಯದ ಸ್ಥಳಾಂತರಕ್ಕೆ ಒತ್ತಾಯಿಸಿ ಮತ್ತು ವಿದ್ಯಾರ್ಥಿ ನಿಲಯದ ಅವ್ಯವಸ್ಥೆಗಳಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ತಾನು ಆಗಸ್ಟ್ 14ರಂದು ಬೆಳಗ್ಗೆ ಆರಂಭಿಸಿದ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಆಗಸ್ಟ್ 16ರಂದು ಶನಿವಾರ ಬೆಳಗ್ಗೆಯಿಂದ ಮತ್ತೆ ಮುಂದುವರಿಯಲಿದೆ ಎಂದು ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಪ್ರಸ್ತುತ ಹಾಸ್ಟೆಲ್ ನಲ್ಲಿ 85 ಮಂದಿ ವಿದ್ಯಾರ್ಥಿನಿಯರಿದ್ದಾರೆ. ಇವರಿಗೆ ಓದಲು, ಬರೆಯಲು, ರಾತ್ರಿ ವೇಳೆ ಮಲಗಲು ಯಾವುದೇ ರೀತಿಯ ಕನಿಷ್ಟ ಸೌಲಭ್ಯಗಳಾಗಲೀ,
ಸ್ಥಳಾವಕಾಶವಾಗಲೀ ಇಲ್ಲ. ಸಾಕಷ್ಟು ಶೌಚಾಲಯ ಮತ್ತು ಸ್ನಾನದ ಕೋಣೆಗಳೂ ಇಲ್ಲ. ಮದ್ಯದಂಗಡಿ ಪಕ್ಕ ಇರುವ ಹಾಸ್ಟೆಲ್ ಕಟ್ಟಡಕ್ಕೆ ಕಾವಲುಗಾರನಾಗಲೀ, ವಾರ್ಡನ್ ಆಗಲೀ, ಆವರಣ ಗೋಡೆಯಾಗಲೀ ಇಲ್ಲ. ರಾಜ್ಯ ಸರಕಾರಕ್ಕೆ, ಜಿಲ್ಲಾಡಳಿತಕ್ಕೆ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ ಅವರು ಹಾಸ್ಟೆಲ್ ವಿದ್ಯಾರ್ಥಿನಿಯರ ನರಕಮಯ ದಿನಚರಿಯ ವಿಷಯವನ್ನು ಇನ್ನೂ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸುತ್ತಿರುವುದರಿಂದ ಸತ್ಯಾಗ್ರಹವನ್ನು ಮುಂದುವರಿಸುವುದು ಅನಿವಾರ್ಯವಾಗಿದೆ ಎಂದು ಶ್ರೀರಾಮ ದಿವಾಣ ಸ್ಪಷ್ಟಪಡಿಸಿದ್ದಾರೆ.

ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರ ಬಗ್ಗೆ ಕಾಳಜಿ ಇರುವವರು
ಅನಿರ್ಧಿಷ್ಟಾವಧಿ ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿನಿಯರ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬಹುದು ಎಂದು ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ವಿನಂತಿಸಿದ್ದಾರೆ.

ಬೇಡಿಕೆಗೆ ಜಿಲ್ಲಾಡಳಿತ ಕೂಡಲೇ ಮಣಿಯದಿದ್ದಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹದ ಸ್ಥಳವನ್ನು ಎರಡನೇ ಹಂತವಾಗಿ ಉಡುಪಿ ನಗರಕ್ಕೆ, ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಕಚೇರಿ ಮುಂಭಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಶ್ರೀರಾಮ ದಿವಾಣ ಮುನ್ನೆಚ್ಚರಿಕೆ ನೀಡಿದ್ದಾರೆ.
tags: students, womens students, hostel students, bcm hostel students, backwordclasses.kar.nic.in, backword classes welfare department karnataka, h.anjaneya minister karnataka, congress govt, govt of karnataka, vinay kumar sorake minister, pramod madhwaraj mla udupi, udupi, udupi news, dr.muddumohan ias, shreeram diwana, karnataka janapara vedike, janapara vedike, http://www.udupibits.com, http://www.udupibits.in, udupibits, ವಿದ್ಯಾರ್ಥನಿ ನಿಲಯ, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ
ವಿದ್ಯಾರ್ಥಿನಿ ನಿಲಯ, ಹಾಸ್ಟೆಲ್, ಬಿಸಿಎಂ ಹಾಸ್ಟೆಲ್, ಕಾಲೇಜು ವಿದ್ಯಾರ್ಥಿನಿಯರು, ಉಡುಪಿ, ಉಡುಪಿ ಜಿಲ್ಲಾಡಳಿತ, ವಿನಯ ಕುಮಾರ್ ಸೊರಕೆ ಸಚಿವರು ಕರ್ನಾಟಕ ಸರಕಾರ, ಪ್ರಮೋದ್ ಮಧ್ವರಾಜ್ ಶಾಸಕರು ಉಡುಪಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ಸರಕಾರ, ಎಚ್.ಆಂಜನೇಯ ಸಚಿವರು ಕರ್ನಾಟಕ ಸರಕಾರ, ಕರ್ನಾಟಕ ಸರಕಾರ, ಅಹಿಂದ, ಸಿದ್ಧರಾಮಯ್ಯ ಮುಕ್ಯಮಂತ್ರಿಗಳು ಕರ್ನಾಟಕ ಸರಕಾರ]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s