ಹಾಸ್ಟೆಲ್ ದುರವಸ್ಥೆ: ಅನಿರ್ಧಿಷ್ಟಾವಧಿ ಸತ್ಯಾ ಗ್ರಹ ಹಿಂತೆಗೆತ

Posted: August 16, 2014 in Uncategorized

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ತೊಟ್ಟಂನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ಶೋಚನೀಯ ದುರವಸ್ಥೆಯ ವಿರುದ್ಧ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಆಗಸ್ಟ್ 14ರಂದು ಬೆಳಗ್ಗೆ ಆರಂಭಿಸಿದ ಅನಿರ್ಧಿಷ್ಠಾವಧಿ ಸತ್ಯಾಗ್ರಹವನ್ನು ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮಗೋಂಡ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಆ.16ರ ಸಂಜೆ
ಹಿಂತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಅನಿರ್ಧಿಷ್ಠಾವಧಿ ಸತ್ಯಾಗ್ರಹಕ್ಕೆ ಮಣಿದ ಅಧಿಕಾರಿಗಳು, ತೊಟ್ಟಂ ಹಾಸ್ಟೆಲ್ ಆವರಣದಲ್ಲಿ ಹೊಸದಾಗಿ ನಾಲ್ಕು ಶೌಚಾಲಯಗಳನ್ನು ನಿರ್ಮಿಸುವ ಕಾಮಗಾರಿಯನ್ನು ಆಗಸ್ಟ್ 16ರಂದು ಬೆಳಗ್ಗೆ ಆರಂಭಿಸಿದರು ಮತ್ತು ಹಾಸ್ಟೆಲ್ ನಲ್ಲಿ ವಾಸ್ತವ್ಯವಿದ್ದ 80 ಮಂದಿ ವಿದ್ಯಾರ್ಥಿನಿಯರಲ್ಲಿ 30 ಮಂದಿ ವಿದ್ಯಾರ್ಥಿನಿಯರನ್ನು ಆ.16ರಂದು ಸಂಜೆ
ಕಿನ್ನಿಮೂಲ್ಕಿಯಲ್ಲಿರುವ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಮಾತ್ರವಲ್ಲ ಇತರ ಪ್ರಮುಖ ಬೇಡಿಕೆಗಳನ್ನು ತಡಮಾಡದೆ ಶೀಘ್ರವೇ ಈಡೇರಿಸುವುದಾಗಿ ಭರವಸೆ ನೀಡಿದ ಕಾರಣ ಸತ್ಯಾಗ್ರಹವನ್ನು
ಹಿಂತೆಗೆದುಕೊಳ್ಳಲಾಗಿದೆ ಎಂದು ಶ್ರೀರಾಮ ದಿವಾಣ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಕುಮಾರ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೇಷಪ್ಪ ಅವರು ಸತ್ಯಾಗ್ರಹವನ್ನು ಕೈಬಿಡುವಂತೆ ಮನವಿ ಮಾಡಿದರಲ್ಲದೆ, ಹಾಸ್ಟೆಲ್ ನ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸುವುದಾಗಿ ವಾಗ್ದಾನ ಮಾಡಿದರು.

ಎರಡನೇ ದಿನದ ಸತ್ಯಾಗ್ರಹದಲ್ಲಿ ಶ್ರೀರಾಮ ದಿವಾಣರೊಂದಿಗೆ ದೇಜಪ್ಪ ಹಿರಿಯಡ್ಕ, ಜಾನ್ ಮೇಸ್ತ್ರಿ ಬಜೆ, ಮಾಧವ ನಾಯ್ಕ ಕರ್ಜೆ, ಪ್ರಕಾಶ್ ಪೂಜಾರಿ, ರವಿ ಪೇತ್ರಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ, ಕುಂದಾಪುರ ತಾಲೂಕು ಸಮಿತಿಯ ಕಾರ್ಯದರ್ಶಿ ರಾಜೀವ ಪಡುಕೋಣೆ ಹಾಗೂ ಕೋಶಾಧಿಕಾರಿ ಶ್ರೀಮತಿ ನಾಗರತ್ನಾ ಸತ್ಯಾಗ್ರಹದಲ್ಲಿ ಭಾಗಿಯಾದರು. ಅವಿಭಜಿತ ದ.ಕ.ಜಿಲ್ಲಾ ಪರಿಷತ್ ಮಾಜಿ ಜಿ.ಪ.ಸದಸ್ಯ ಬಿ.ರಾಮಚಂದ್ರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s