ಖಾಸಗಿ ಸಂಸ್ಥೆಗೆ 4.17 ಲಕ್ಷ ರು. ಮೌಲ್ಯದ ಚಿನ್ನಾಭರಣ ವಂಚನೆ

Posted: August 22, 2014 in Uncategorized

ಉಡುಪಿ: ಮಣಿಪಾಲದಮಣಿಪಾಲ ಹೌಸಿಂಗ್ ಫೈನಾನ್ಸ್ ಸಿಂಡಿಕೇಟ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಉಡುಪಿಯ ಮಾರುತಿ ವೀಥಿಕಾದಲ್ಲಿರುವ ನಿಧಿ ಗೋಲ್ಡ್ ಸಂಸ್ಥೆಯ ಗ್ರಾಹಕ ಸಂಪರ್ಕ ಅಧಿಕಾರಿಯಾಗಿರುವ ಬೈಂದೂರು ತೊಂಡೆಮಕ್ಕಿ ನಿವಾಸಿ ಗಣೇಶ್ ಎಂಬಾತ ನಾಲ್ವರು ಗ್ರಾಹಕರಿಗೆ ಸಂಬಂಧಿಸಿದ ಒಟ್ಟು 4.17 ಲಕ್ಷ ರು. ಮೌಲ್ಯದ 167.520 ಗ್ರಾಂ. ತೂಕದ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇರಿಸದೆ ಸ್ವಂತಕ್ಕೆ ದುರುಪಯೋಗಪಡಿಸಿ ಸಂಸ್ಥೆಗೆ ಹಾಗೂ ಗ್ರಾಹಕರಿಗೆ ಮೋಸ ಮತ್ತು ವಂಚನೆ ಎಸಗಿದ ಪ್ರಕರಣ ನಡೆದಿದೆ.

ಈ ಬಗ್ಗೆ ನಿಧಿ ಗೋಲ್ಡ್ ನಿರ್ವಹಣಾಧಿಕಾರಿ ಶ್ರೀಮತಿ ಸುಮಂಗಲಾ ನೀಡಿದ ಪ್ರಕಾರ ಆರೋಪಿ ಗಣೇಶ್ ತೊಂಡೆಮಕ್ಕಿ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಧಿ ಗೋಲ್ಡ್ ಗ್ರಾಹಕರಾದ ಖುರ್ಷಿದ್ ಭಾನು ಅವರಿಗೆ ಸೇರಿದ 86.770 ಗ್ರಾಂ ಚಿನ್ನ, ಮಧುಕರ ಎಂಬವರ 10.900 ಗ್ರಾಂ ಚಿನ್ನ, ಗಣೇಶ್ ಇವರ 16.150 ಗ್ರಾಂ. ಚಿನ್ನ ಮತ್ತು ರಾಜೇಶ್ ಅವರ 53.700 ಗ್ರಾಂ ಚಿನ್ನಾಭರಣಗಳನ್ನು ಸುಮಂಗಲಾ ಸಮಕ್ಷಮವೇ ಪ್ಯಾಕ್ ಮಾಡಲಾಗಿತ್ತು. ಪ್ಯಾಕ್ ಮಾಡಲಾದ ಚಿನ್ನಾಭರಣಗಳನ್ನು ಉಡುಪಿಯ ಕವಿ ಮುದ್ದಣ ಮಾರ್ಗದಲ್ಲಿರುವ ಯೂನಿಯನ್ ಬ್ಯಾಂಕ್ ಗೆ ಕೊಂಡೊಯ್ದು ಬ್ಯಾಂಕ್ ಲಾಕರ್ ನಲ್ಲಿ ಇರಿಸುವುದು ಮತ್ತು ಬ್ಯಾಂಕ್ ಲಾಕರ್ ನಿಂದ ತೆಗೆದುಕೊಂಡು ಬರುವ ಕೆಲಸ ಮಾಡುತ್ತಿದ್ದ ಆರೋಪಿ ಗಣೇಶ್ ನಾಲ್ವರು ಗ್ರಾಹಕರಿಗೆ ಸೇರಿದ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇರಿಸಿದೆ ವಂಚಿಸಿದ್ದಾರೆಂದು ದೂರಲಾಗಿದೆ.

2013ರ ಅಕ್ಟೋಬರ್ 15 ರಂದು ಆಡಿಟ್ ನಡೆದ ಬಳಿಕ ಈ ವಂಚನಾ ಪ್ರಕರಣ ನಡೆದಿದೆ. ಈ ವಿಷಯ 2014ರ ಜನವರಿ 29ರ ಅಡಿಟ್ ನಲ್ಲಿ ಬೆಳಕಿಗೆ ಬಂದಿತ್ತು. ಆಡಿಟ್ ವರದಿಯ ಆಧಾರದಲ್ಲಿ ಸುಮಂಗಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆನ್ನಲಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s