ಮೋಸದ ಮೊಬೈಲ್ ಸಂದೇಶಗಳನ್ನು ಸರಕಾರ ನಿಷೇಧಿಸಬೇಕು: ಕೋಟೆಯಾರ್

Posted: ಆಗಷ್ಟ್ 23, 2014 in Uncategorized
ಟ್ಯಾಗ್ ಗಳು:, , , , , , , , , , , , , , , , ,

ಉಡುಪಿ: ನಿಮ್ಮ ಮೊಬೈಲ್ ಸಿಮ್ ಗೆ ಲಕ್ಕಿ ಡ್ರಾದಲ್ಲಿ ಬಹುಮಾನ ಬಂದಿದೆ ಎಂಬ ಅಪರಿಚಿತ ಮೊಬೈಲ್ ಸಂದೇಶಗಳ ಹಿಂದೆ ಭೂಗತ ಜಗತ್ತು ಮತ್ತು ಉಗ್ರರ ತಂಡಗಳಿದ್ದು, ಇಂಥವುಗಳನ್ನು ಇನ್ನಾದರೂ ಸರಕಾರ ನಿಯಂತ್ರಿಸಬೇಕು ಎಂದು ಉಡುಪಿಯ ಕಾಮನ್ ಪೀಪಲ್ಸ್ ವೆಲ್ಫೆರ್ ಅಸೋಸಿಯೇಶನ್ ಅದ್ಯಕ್ಷ ಜಿ.ಎ.ಕೋಟೆಯಾರ್ ಕಾಂದ್ರ ಮತ್ತು ರಾಜ್ಯ ಸರಕಾರಗಳನ್ನು ಆಗ್ರಹಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಗಸ್ಟ್ 22ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಮೊಬೈಲ್ ಕಂಪೆನಿಗಳ ಮೂಲಕ ಅಪರಿಚಿತರಿಂದ ಇಂಥ ಮೋಸದ ಸಂದೇಶಗಳು ಪ್ರತಿದಿನವೂ ಬರುತ್ತಿರುತ್ತವೆ. ಸಾವಿರಾರು ಜನರು ಇದರಿಂದಾಗಿ ಮೋಸ ಹೋಗುತ್ತಿದ್ದಾರೆ. ಲಾಟರಿಗಳನ್ನು ನಂಬುವ ಭಾರತದ ಜನರಲ್ಲಿ ಹಣದು ದುರಾಸೆ ಮತ್ತು ಒಂದು ಗಂಟೆಯಲ್ಲಿ ಕರೋಡ್ ಪತಿಯಾಗಬೇಕೆಂಬ ಆಸೆಯಿದ್ದು, ವಿದೇಶಿಗಳು ಇಂಥ ಮೊಬೈಲ್ ಸಂದೇಶಗಳನ್ನು ರವಾನಿಸುವ ಮೂಲಕ ದೊಡ್ಡ ಪ್ರಮಾಣದಲ್ಲೇ ಮೋಸ ಮಾಡುತ್ತಿದ್ದಾರೆ. ಸರಕಾರ ಇಂಥವರ ವಿರುದ್ಧ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವಾದುದರಿಂದ ಮೋಸಗಾರರಿಗೆ ಇದು ವರದಾನವಾಗಿ ಪರಿಣಮಿಸಿದೆ ಎಂದು ಕೋಟೆಯಾರ್ ತಿಳಿಸಿದರು.

ಮೊಬೈಲ್ ಕಂಪೆನಿಗಳು ಸಹ ಈ ಜಾಲದಲ್ಲಿ ಸೇರಿಕೊಂಡಿರಬಹುದೆಂದು ಸಂಶಯ ವ್ಯಕ್ತಪಡಿಸಿರುವ ಜಿ.ಎ.ಕೋಟೆಯಾರ್, ಮೊತ್ತ ಮೊದಲು ಮೊಬೈಲ್ ಕಂಪೆನಿಗಳು ಇಂಥ ಸಂದೇಶಗಳನ್ನು ಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಮೋಸದ ಮೊಬೈಲ್ ಸಂದೇಶಗಳ ವಿರುದ್ಧ ಸೂಕ್ತ ಕಾನೂನು ಮತ್ತು ನಿಯಂತ್ರಣ ಹಾಕುವಂತೆ ಕೋರಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ.ರಾಜೇಂದ್ರ ಪ್ರಸಾದ್ ಮೊದಲಾದವರಿಗೆ ಪತ್ರ ಬರೆದಿರುವ ಕೋಟೆಯಾರ್, ಮುಂದಿನ ದಿನಗಳಲ್ಲಿ ಮೋಸದ ಮೊಬೈಲ್ ಸಂದೇಶಗಳು, ಸಮಾಜಸೇವೆಗೆ ಅರ್ಹನಲ್ಲದಿದ್ದರೆ ಜನಪ್ರತಿನಿಧಿಯನ್ನು ಹಿಂದಕ್ಕೆ ಕರೆಸಿಕೊಳ್ಳುವುದೇ ಮೊದಲಾದ ವಿಷಯಗಳ ಬಗ್ಗೆ ಕಾಮನ್ ಪೀಪಲ್ಸ್ ವೆಲ್ಫೇರ್ ಅಸೋಸಿಯೇಶನ್ ಮೂಲಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿರುವುದಾಗಿ ಹೇಳಿದರು.

ಶ್ರೀಮತಿ ಸುನಂದಾ ಜಿ.ಕೋಟೆಯಾರ್, ಸ್ಮಿತ್ ಹಾಗೂ ಅರುಣ್ ಕುಮಾರ್ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s