ನ್ಯಾಯಾಂಗ ವ್ಯವಸ್ಥೆಗೆ ಗೆದ್ದಲು ಹಿಡಿದಿದೆ: ಕಂಬಾಲಪಲ್ಲಿ ಹತ್ಯಾಕಾಂಡದ ಮರುತನಿಖೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಜಯನ್ ಮಲ್ಪೆ

Posted: ಆಗಷ್ಟ್ 27, 2014 in Uncategorized

ಉಡುಪಿ: ಕಂಬಾಲಪಲ್ಲಿಯಲ್ಲಿ ನಡೆದ ಏಳು ಮಂದಿ ದಲಿತರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿದ ಹಿನ್ನೆಲೆಯಲ್ಲಿ, ರಾಜ್ಯ ಸರಕಾರ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಆಗಸ್ಟ್ 26ರಮದು ಸಂಜೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಜಯನ್ ಮಲ್ಪೆ, ಕಂಬಾಲಪಲ್ಲಿಯಲ್ಲಿ ಏಳು ಮಂದಿ ದಲಿತರು ಕೊಲೆಯಾಗಿಲ್ಲವೇ ಎಂದು ಖಾರವಾಗಿ ಪ್ರಶ್ನಿಸುವುದರ ಜೊತೆಗೆ, ನ್ಯಾಯಾಂಗ ವ್ಯವಸ್ಥೆಗೆ ಗೆದ್ದಲು ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹತ್ಯಾಕಾಂಡ ನಡೆದಾಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಪ್ರಕರಣವನ್ನು ಏಕ ಕಾಲಕ್ಕೆ ನ್ಯಾಯಾಂಗ ತನಿಖೆಗೆ ಮತ್ತು ಸಿಬಿಐ ತನಿಖೆಗೆ ಒಪ್ಪಿಸುತ್ತಿದ್ದರೆ, ಆರೋಪಿಗಳು ಇಷ್ಟರಲ್ಲಿಯೇ ಶಿಕ್ಷೆಗೊಳಗಾಗುತ್ತಿದ್ದರು. ಆದರೆ ಕಾಂಗ್ರೆಸ್ ಸರಕಾರ ದುರ್ಬಲ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಿಓಡಿ ತನಿಖೆಗೆ ಒಪ್ಪಿಸಿ ಕೈತೊಳೆದುಕೊಂಡಿತು ಎಂದು ಆರೋಪಿಸಿದರು.

ಬೆಂಗಳೂರು ನ್ಯಾಶನಲ್ ಸ್ಕೂಲ್ ಆಫ್ ಲಾ ಕಾಲೇಜಿನ ಪ್ರಾಧ್ಯಾಪಕ ವಿ.ಎಸ್.ಶ್ರೀಧರ್, ದಸಂಸ ನಾಯಕರುಗಳಾದ ಶ್ಯಾಮರಾಜ್ ಬಿರ್ತಿ, ಮಂಜುನಾಥ್, ವಾಸುದೇವ ಮುದೂರು, ಸುಂದರ ಕಪ್ಪೆಟ್ಟು, ವಿಠಲ ತೊಟ್ಟಂ, ಸುಂದರಿ ಪುತ್ತೂರು, ಗಣೇಶ್ ನೆರ್ಗಿ, ಡಾ.ಯು.ವನಜಾಕ್ಷಿ, ಪ್ರೊ.ಸಿರಿಲ್ ಮಥಾಯಸ್, ಎಸ್.ನಾರಾಯಣ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜೆ.ರಾಜಶೇರ್, ಪ್ರೊ.ಕೆ.ಫಣಿರಾಜ್, ಹಯವದನ ಮೂಡುಸಗ್ರಿ, ಫಾ.ವಿಲಿಯಂ ಮಾರ್ಟಿಸ್, ಇದ್ರಿಸ್ ಹೂಡೆ, ಹುಸೇನ್, ಖತೀಬ್ ಅಬ್ದುಲ್ ರಶೀದ್ ಮೊದಲಾದವರು ಭಾಗವಹಿಸಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s